Home ನಮ್ಮ ಜಿಲ್ಲೆ ಧಾರವಾಡ ರಾಜಕೀಯಕ್ಕೆ ರಾಜ್ಯಪಾಲರ ಭಾಷಣ ಬಳಸುವ ಸಂಪ್ರದಾಯ ಸೃಷ್ಟಿ

ರಾಜಕೀಯಕ್ಕೆ ರಾಜ್ಯಪಾಲರ ಭಾಷಣ ಬಳಸುವ ಸಂಪ್ರದಾಯ ಸೃಷ್ಟಿ

0
8

ನವದೆಹಲಿ: ಕೇಂದ್ರದ ಯೋಜನೆಗಳ ಬಗ್ಗೆ ಜನರಲ್ಲಿ ತಪ್ಪಾಭಿಪ್ರಾಯ ಬಿತ್ತಲು ಮತ್ತು ತನ್ನ ರಾಜಕೀಯ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣವನ್ನು ಬಳಸಿ ಹೊಸ ಸಂಪ್ರದಾಯ ಸೃಷ್ಟಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ.

ರಾಜ್ಯದ ಜನತೆ ಅನೇಕ ಜ್ವಲಂತ ಸಮಸ್ಯೆ ಎದುರಿಸುತ್ತಿದ್ದಾರೆ. ಶಾಂತತೆಯ ರಾಜ್ಯದಲ್ಲಿ ಕೊಲೆ-ಸುಲಿಗೆ ಪ್ರಕರಣಗಳು ಹೆಚ್ಚಿವೆ. ಕಾನೂನು ಸುವ್ಯವಸ್ಥೆಗೆ ಸವಾಲುಗಳು ಎದುರಾಗಿರುವ ಈ ಸಂದರ್ಭದಲ್ಲಿ ಜನ ಛೀಮಾರಿ ಹಾಕುತ್ತಿದ್ದಾರೆ. ಇದನ್ನು ಮರೆಮಾಚಲು ಹೀಗೆ ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ ಕಾಂಗ್ರೆಸ್ಸಿಗರು ಎಂದು ಜೋಶಿ ಕುಟುಕಿದ್ದಾರೆ.

ರಾಜ್ಯದಲ್ಲಿ ಸರ್ಕಾರಿ ಜಾಗಗಳ ಅತಿಕ್ರಮಣ, ನುಸುಳುವಿಕೆ, ಸರ್ಕಾರಿ ಅಧಿಕಾರಿಗಳಿಗೆ ನೇರ ಧಮ್ಕಿ, ಭ್ರಷ್ಟಾಚಾರ ಎಲ್ಲೇ ಮೀರಿದೆ. ಆದರೆ, ಶುದ್ಧ ಆಡಳಿತ, ಅಭಿವೃದ್ಧಿಯೊಂದಿಗೆ ವಿಕಸಿತ ಭಾರತದ ಗುರಿಯತ್ತ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಮೇಲೆ ಸತತ ಸುಳ್ಳು ಪ್ರಚಾರದ ರಾಜಕೀಯದಲ್ಲಿ ತೊಡಗಿದೆ ಈ ಕಾಂಗ್ರೆಸ್ ಸರ್ಕಾರ ಎಂದು ಜೋಶಿ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲಿ ಪ್ರಥಮ, ಏಕಕಾಲಕ್ಕೆ 42,345 ಮನೆಗಳ ವಿತರಣೆ

ದ್ವೇಷ ರಾಜಕಾರಣ: ರಾಜ್ಯ ಸರ್ಕಾರ ಇಂದು ರಾಜ್ಯಪಾಲರನ್ನು ತನ್ನ ದ್ವೇಷ ರಾಜಕಾರಣಕ್ಕೆ ಬಳಸುವ ಸ್ಥಿತಿ ತಲುಪಿರುವುದು ನಿಜಕ್ಕೂ ಖಂಡನೀಯ. ರಾಜಕೀಯ ಮಾಡಲು ಬೇರೆ ಬೇರೆ ವೇದಿಕೆ ಇದೆ. ಅದನ್ನು ಬಿಟ್ಟು ಕಾಂಗ್ರೆಸ್ ಹೈ ಕಮಾಂಡ್ ಒಲೈಸಿಕೊಳ್ಳಲು ಕೇಂದ್ರದ ಪಾರದರ್ಶಕ ಕಾಯ್ದೆ ವಿರುದ್ಧ ನಿರ್ಣಯಕ್ಕೆ ಮುಂದಾಗುವುದು ನಾಚಿಕೆಗೇಡು ಎಂದು ಸಚಿವ ಜೋಶಿ ತರಾಟೆ ತೆಗೆದುಕೊಂಡಿದ್ದಾರೆ.

ಕೇಂದ್ರದ ಕಾಯ್ದೆ ಬಗ್ಗೆ ಏಕಿಷ್ಟು ಆಕ್ರೋಶ?: ರಾಜ್ಯದ ಗ್ರಾಮೀಣ ಜನರ, ರೈತರ ಮತ್ತು ಕೂಲಿ ಕಾರ್ಮಿಕರ ಪರ ಕೇಂದ್ರ ಸರ್ಕಾರ ಕಾನೂನು ತಂದಿದ್ದರ ಬಗ್ಗೆ ಇವರಿಗೇಕಿಷ್ಟು ಆಕ್ರೋಶ? ಭ್ರಷ್ಟಾಚಾರ ರಹಿತ ವ್ಯವಸ್ಥೆಯ ಉದ್ದೇಶವುಳ್ಳ ಕೇಂದ್ರದ ಕಾನೂನು ವಿರೋಧಿಸಿ ಇವರು ಏನು ಮಾಡಲು ಹೊರಟಿದ್ದಾರೆ? ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.