ಆರ್‌ಸಿಬಿ ಪಂದ್ಯಗಳು ಪುಣೆಗೆ ಸ್ಥಳಾಂತರವಾದರೆ ಸರ್ಕಾರವೇ ಹೊಣೆ

0
3

ಶಿವಮೊಗ್ಗ: ಐಪಿಎಲ್ ಪಂದ್ಯಗಳು ಬೆಂಗಳೂರಿನಿಂದ ಪುಣೆಗೆ ಸ್ಥಳಾಂತರವಾದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಸ್‌ಸಿಎ ವಲಯ ಸಂಚಾಲಕ ಡಿ.ಎಸ್. ಅರುಣ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2008ನೇ ಇಸವಿಯಲ್ಲಿ ಐಪಿಎಲ್ ಪಂದ್ಯಗಳು ಆರಂಭವಾದವು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನೆ ಪಂದ್ಯ ನಡೆದಿತ್ತು. ಇದುವರೆಗೂ ಬರೋಬ್ಬರಿ 101 ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿವೆ.

745 ಅಂತಾರಾಷ್ಟ್ರೀಯ ಪಂದ್ಯಗಳು ಇದೇ ಮೈದಾನದಲ್ಲಿ ನಡೆದಿವೆ. ಆದರೆ, ಜೂ. 4, 2025ರಂದು ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಜನರು ದುರಂತ ಅಂತ್ಯ ಕಂಡಿದ್ದರು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿದೆ ಎಂದು ಅವರು ದೂರಿದರು.

ಇದನ್ನೂ ಓದಿ:  ಜ.17ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ

ಒಂದು ವೇಳೆ ಪುಣೆಗೆ ಪಂದ್ಯಗಳು ಸ್ಥಳಾಂತರವಾದರೆ ಮರಳಿ ಚಿನ್ನಸ್ವಾಮಿ ಸ್ಟೇಡಿಯಂಗೆ ತರುವುದು ತುಂಬಾ ಕಷ್ಟ. ಸಿಎಂ ಮತ್ತು ಡಿಸಿಎಂ ಅವರು ಕೆಎಸ್‌ಸಿಎಯ ಅಜೀವ ಸದಸ್ಯರಾಗಿದ್ದಾರೆ. ಲಾರ್ಡ್ಸ್, ಧರ್ಮಶಾಲಾ ಮೈದಾನಕ್ಕಿಂತಲೂ ಚಿನ್ನಸ್ವಾಮಿ ಕ್ರೀಡಾಂಗಣ ಕಮ್ಮಿಯಿಲ್ಲ. ಡಿಸಿಎಂ ಐಪಿಎಲ್ ಬೇರೆಡೆಗೆ ಹೋಗಲು ಬಿಡಲ್ಲ ಎಂದಿದ್ದಾರೆ. ಡಿಸಿಎಂ ಮಾತು ನಡೆಯುವುದಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಅದರ ಬಗ್ಗೆ ಮಾತನಾಡುತ್ತಿಲ್ಲ.

ಕೂಡಲೇ ರಾಜ್ಯ ಸರ್ಕಾರ ಆರ್‌ಸಿಬಿಯವರ ಜೊತೆ ಮಾತುಕತೆ ನಡೆಸಿ, ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸುವಂತೆ ನೋಡಿಕೊಳ್ಳಬೇಕು. ಇದರಿಂದ ಆರ್‌ಸಿಬಿ ಅಭಿಮಾನಿಗಳಿಗೂ ಸಂತೋಷವಾಗುತ್ತದೆ ಎಂದರು.

Previous articleವೀರಶೈವ ಲಿಂಗಾಯತ ಇಬ್ಭಾಗಕ್ಕೆ ಷಡ್ಯಂತ್ರ