ಐಸಿಸಿ ಏಕದಿನ ಕ್ರಿಕೆಟ್‌‌ ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ಕಿಂಗ್

0
21

ಮುಂಬೈ: ಐಸಿಸಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೇ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ.

ಐಸಿಸಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ 785 ರೇಟಿಂಗ್ಸ್‌ನೊಂದಿಗೆ ವಿರಾಟ್ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಈ ಮೂಲಕ ಇದೀಗ 4 ವರ್ಷಗಳ ನಂತರ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕೊಹ್ಲಿ ಮರಳಿ ಪಡೆದಿದ್ದಾರೆ.

ಭಾರತದ ಮತ್ತೋರ್ವ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಶ್ರೇಯಾಂಕ ಪಟ್ಟಿಯಲ್ಲಿ ಕುಸಿತವನ್ನು ಕಂಡಿದ್ದು, ಮೂರನೇ ಸ್ಥಾನವನ್ನು ಪಡೆದಿದ್ದಾರೆ.

ಇದನ್ನೂ ಓದಿ: ‘ಮ್ಯಾಂಗೋ ಪಚ್ಚ’ ಚಿತ್ರದ ‘ಅರಗಿಣಿಯೇ..’ ಹಾಡಿಗೆ ಸಾನ್ವಿ ಸುದೀಪ್ ಧ್ವನಿ

ಇನ್ನು ನ್ಯೂಜಿಲೆಂಡ್‌ನ ಡರಿಲ್ ಮೆಚೆಲ್ 784 ರೇಟಿಂಗ್ಸ್‌ನೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ. ಅಫ್ಘಾನಿಸ್ತಾನದ ಇಬ್ರಾಹಿಂ ಝಡ್ರಾನ್ 764 ರೇಟಿಂಗ್ಸ್‌ನೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಟೀಮ್‌ ಇಂಡಿಯಾದ ಏಕದಿನ ತಂಡದ ನಾಯಕ ಶುಭಮನ್ ಗಿಲ್ 725 ರೇಟಿಂಗ್ಸ್‌ನೊಂದಿಗೆ 5ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಬಾಬರ್ ಆಜಂ (722) 6ನೇ ಸ್ಥಾನ, ಐರ್ಲೆಂಡ್ ಬ್ಯಾಟರ್ ಹೆರ್ರಿ ಟೆಕ್ಟರ್ (708) 7ನೇ ಸ್ಥಾನ, ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ (701) 8ನೇ ಸ್ಥಾನ, ಶ್ರೀಲಂಕಾದ ಚರಿತ್ ಅಸಲಂಕಾ (690) 9 ಹಾಗೂ ಭಾರತದ ಶ್ರೇಯಸ್ ಅಯ್ಯರ್ (682) 10ನೇ ಸ್ಥಾನವನ್ನು ಪಡೆದಿದ್ದಾರೆ.

Previous articleಅಶಿಸ್ತಿನ ನಾಯಕರ ವಿರುದ್ಧ ತಕ್ಷಣ ಕಠಿಣ ಕ್ರಮಕ್ಕೆ ಆಗ್ರಹ