ಬಳ್ಳಾರಿ ಗಲಾಟೆ: ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸಂಚು

0
4

ಶಿವಮೊಗ್ಗ: ಯಾರೇ ಆದರೂ ಈ ಹಂತಕ್ಕೆ ಹೋಗಬಾರದು. ಯಾರು ಕಾನೂನು ಕೈಗೆ ತೆಗೆದುಕೊಂಡಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ಆಗಬೇಕು. ನ್ಯಾಯ ಗೆಲ್ಲಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಳ್ಳಾರಿಯಲ್ಲಿ ನಡೆದ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬ್ಯಾನರ್ ಕಟೌಟ್ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾನೆ ಎಂದು ಮಾಧ್ಯಮದಲ್ಲಿ ನೋಡಿದೆ. ಯಾರೇ ಆದರೂ ಈ ಹಂತಕ್ಕೆ ಹೋಗಬಾರದು. ಅಲ್ಲಿ ಮೊದಲಿಂದಲೂ ಆ ಪರಂಪರೆ, ಸ್ವಭಾವ ಇದೆ. ನಾನು ಯಾರನ್ನು ದೂರಲು ಹೋಗುವುದಿಲ್ಲ. ಅಮಾಯಕರಿಗೆ ತೊಂದರೆಯಾಗಬಾರದು ಎಂದರು. ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಏನೇ ಆದರೂ ಕಾನೂನು ರೀತಿಯಲ್ಲಿಯೇ ಕ್ರಮ ಕೈಗೊಳ್ಳಬೇಕು ಎಂದರು.

ಬಿಜೆಪಿ ಆರೋಪ: ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆ ಧ್ವಂಸ ಮತ್ತು ಪರಿಹಾರವಾಗಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ, ಡಿಸಿಎಂ ಈ ವಿಚಾರದಲ್ಲಿ ಮಾತನಾಡಿದ್ದಾರೆ. ಯಾರಿಗೆ ಅರ್ಹತೆ ಇದೆಯೋ ಅವರಿಗೆ ಸಹಕರಿಸುವುದು ನಮ್ಮ ಕರ್ತವ್ಯ. ಅವರು ಯಾವ ದೇಶದವರು, ರಾಜ್ಯದವರು ಆಗಿರಲಿ, ಕಾನೂನಿನಲ್ಲಿ ಅವಕಾಶ ಇದ್ದರೆ ಅರ್ಹತೆ ಇದ್ದರೆ ಮನೆ ಕೊಡಬಹುದು ಎಂದರು.

Previous articleಅಧಿಕಾರಿಗಳಿಗೆ ಜಾತ್ಯಾತೀತ ದೃಷ್ಟಿಕೋನದ ಪಾಠ ಮಾಡಿದ ಸಿಎಂ