ಪಂಚಭೂತಗಳಲ್ಲಿ ಲೀನವಾದ ದಾನೇಶ್ವರಶ್ರೀ

1
87

ಬಾಗಲಕೋಟೆ(ರಬಕವಿ-ಬನಹಟ್ಟಿ): ತಾಲೂಕಿನ ಬಂಡಿಗಣಿ ಬಸವಗೋಪಾಲ ನೀಲಮಾಣಿಕಮಠದ ದಾನೇಶ್ವರಶ್ರೀಗಳ ಅಂತ್ಯಸಂಸ್ಕಾರವು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸೇರಿದಂತೆ ನಾಡಿನ ಅನೇಕ ಹರ-ಗುರು-ಚರಮೂರ್ತಿಗಳ ಸಾನಿಧ್ಯದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿ-ವಿಧಾನಗಳೊಂದಿಗೆ ಶ್ರೀಮಠದ ಆವರಣದಲ್ಲಿ ಶನಿವಾರ ಸಂಜೆ ಜರುಗಿತು.

ಶುಕ್ರವಾರ ತಡರಾತ್ರಿ ಬಂಡಿಗಣಿಮಠಕ್ಕೆ ಪಾರ್ಥಿವ ಶರೀರ ಆಗಮಿಸಿತ್ತು. ಶನಿವಾರ ಸಂಜೆ 5 ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿತಾದರೂ ಅಂತ್ಯಕ್ರಿಯೆಗೆ ಸಮಾಧಿಗೆಂದು ಅಗೆಯುವಾಗಿ ಬಂಡೆಗಲ್ಲಿದ್ದ ಕಾರಣ ಕೊಂಚ ವಿಳಂಬಕ್ಕೆ ಕಾರಣವಾಯಿತು.

ಶೀಗಳಿಗೆ ನುಡಿ ನಮನ: ಅಂತ್ಯಕ್ರಿಯೆ ಸಂದರ್ಭ ಶ್ರೀಶೈಲ ಜಗದ್ಗುರುಗಳು ಸಾನಿಧ್ಯ ವಹಿಸಿ ಮಾತನಾಡಿ, ಅನ್ನದಾನೇಶ್ವರಶ್ರೀಗಳು ದಾಸೋಹಕ್ಕೆ ಹೆಸರುವಾಸಿಯಾಗಿದ್ದರು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಗೋವಾ ರಾಜ್ಯಗಳ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನದಾಸೋಹ ನೆರವೇರಿಸಿ `ದಾಸೋಹ ರತ್ನ’ ಪ್ರಶಸ್ತಿ ಪಡೆದವರಾಗಿದ್ದರು. ಬಂಡಿಗಣಿ ಶ್ರೀಗಳು ಭಕ್ತರ ಮನದಲ್ಲಿ ದಾಸೋಹ ಚಕ್ರವರ್ತಿ ಎಂಬ ಬಿರುದನ್ನು ಪಡೆದುಕೊಂಡು ಹೋದರು, ಅವರು ಇರುವಾಗ ಪರಮಾತ್ಮನ ಸ್ವರೂಪಿಗಳಾಗಿದ್ದರು, ಈಗ ಅವರೇ ಪರಮಾತ್ಮರಾಗಿ ಹೋಗಿದ್ದಾರೆಂದರು.

Previous articleಕ್ರಿಸ್ಮಸ್‌ ಟ್ರೀ ಲೈಟಿಂಗ್‌ ಮಾಡುವ ಮೂಲಕ ಹಬ್ಬದ ಆರಂಭಕ್ಕೆ ಚಾಲನೆ
Next articleಬೆಳಗಾವಿ: ಮರಾಠಿ ಬ್ಯಾನರ್ ಪೀಸ್ ಪೀಸ್

1 COMMENT

  1. Just a quick shout for 79f. It’s a pretty straightforward online betting spot. Nothing fancy, but it gets the job done. Might suit you if you’re not after all the bells and whistles. Check out 79f.

LEAVE A REPLY

Please enter your comment!
Please enter your name here