ನಿರ್ದೇಶಕ ಸಂಗೀತ್ ಸಾಗರ್ ಹೃದಯಾಘಾತದಿಂದ ನಿಧನ

2
9

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿಯೂ ನಿರ್ದೇಶಕರಾಗಿಯೂ ಹೆಸರು ಮಾಡಿದ ಸಂಗೀತ್ ಸಾಗರ್ (52) ಅವರು ಹೃದಯಾಘಾತದಿಂದ ನಿಧನರಾದರು. ಕೊಪ್ಪದ ಹರಿಹರಪುರದಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಅಕಾಲಿಕ ಸಾವಿಗೆ ಗುರಿಯಾದ ಸಾಗರ್ ಅವರ ಅಗಲಿಕೆ ಚಿತ್ರರಂಗದವರಿಗೆ ಬೆಚ್ಚಿಬೀಳುವಂತಾಗಿದೆ.

ಶೂಟಿಂಗ್ ಮಧ್ಯದಲ್ಲಿ ಎದೆ ನೋವು: ಮಾಹಿತಿ ಪ್ರಕಾರ, ಹರಿಹರಪುರದಲ್ಲಿ ನಡೆಯುತ್ತಿದ್ದ ‘ಪಾತ್ರಧಾರಿ’ ಚಿತ್ರದ ಶೂಟಿಂಗ್ ವೇಳೆ ಸಾಗರ್ ಸಾಮಾನ್ಯವಾಗಿ ನಿರ್ದೇಶನ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಮಧ್ಯಾಹ್ನದ ವೇಳೆಗೆ ಎದೆಭಾಗದಲ್ಲಿ ಚುಚ್ಚುವಂತ ನೋವು ಅನುಭವಿಸಿದ ಅವರು, ತಕ್ಷಣ ವಿಶ್ರಾಂತಿಗೆ ಕುಳಿತುಕೊಂಡಿದ್ದಾರೆ. ಕೆಲವು ಕ್ಷಣಗಳ ಬಳಿಕ ಮೈಬಿಸಿ, ಬೆವರು ಹರಿಯಲು ಆರಂಭವಾಗಿದ್ದು, ಚಿತ್ರತಂಡ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದೆ. ಮೊದಲು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.

ವಿವಿಧ ಚಿತ್ರಗಳಿಗೆ ಸಂಗೀತ ನೀಡಿದ ಪ್ರತಿಭಾವಂತ: ಸಂಗೀತ್ ಸಾಗರ್ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಕ್ರಿಯಾಶೀಲರಾಗಿದ್ದರು. ಕೋಟೆ ಮಕ್ಕಳು. ಹರಿಶ್ಚಂದ್ರ ಮಕ್ಕಳು. ಸ್ನೇಹಿತ. ಕೋಟೆ ಹುಡುಗರು. ಸಕಾಲ ಸೇರದಂತೆ ಇನ್ನೂ ಹಲವು ಸ್ವತಂತ್ರ ಸಂಗೀತ ಮತ್ತು ನಿರ್ದೇಶನ ಯೋಜನೆಗಳು ಮಾಡಿದ್ದರು. ಚಿತ್ರರಂಗದಲ್ಲಿ ಗುಣಮಟ್ಟದ ಸಂಗೀತ ನೀಡುವಲ್ಲಿ ಮಾದರಿಯಾಗಿದ್ದ ಸಾಗರ್, ನಿರ್ದೇಶನ ಕ್ಷೇತ್ರದಲ್ಲೂ ಕಾಲಿಟ್ಟಿದ್ದರಲ್ಲದೆ ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದರು.

Previous articleಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಆಗ್ರಹ
Next articleಕಾರವಾರ INS ಕದಂಬಾ ನೌಕಾನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

2 COMMENTS

  1. I’ve tried several platforms, but JLJL PH stands out with its smooth interface and diverse games like Fortune Master and Lucky Spin. Perfect for both casual and serious players.

LEAVE A REPLY

Please enter your comment!
Please enter your name here