ಮಠಾಧೀಶರ ಕೆಲಸ ಧರ್ಮ ರಕ್ಷಣೆ ಮಾಡುವುದು, ರಾಜಕೀಯ ಏನಕ್ಕೆ?

1
92

ಶಿವಮೊಗ್ಗ: ‘ನಾನು ಮಠಾಧೀಶರಿಗೆ ಕೈ ಜೋಡಿಸಿ ಮನವಿ ಮಾಡುತ್ತೇನೆ. ನಿಮ್ಮ ಕೆಲಸ ಧರ್ಮವನ್ನು ರಕ್ಷಣೆ ಮಾಡುವುದು. ನಿಮ್ಮ ಸಮಾಜಗಳ ಬದುಕನ್ನು ಸರಿಪಡಿಸುವುದಕ್ಕೆ ಎಷ್ಟು ಕೆಲಸ ಮಾಡಬಹುದು. ಆ ಕೆಲಸ ಮಾಡಿ ರಾಜಕೀಯ ಏನಕ್ಕೆ’ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಶಿವಮೊಗ್ಗದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಮಠಾಧೀಶರಿಗೂ ಮನವಿ ಮಾಡುತ್ತೇನೆ. 75 ವರ್ಷದಲ್ಲಿ ಮಠಾಧೀಶರು ಎಲ್ಲಾದ್ರೂ ರಾಜಕೀಯ ಮಾಡಿ ದ್ದಾರಾ..? ನಿಮ್ಮ ಸಮಾಜ, ಕ್ಷೇತ್ರದ ಕಡೆ ಗಮನಕೊಡಿ ಎಂದು ಹೆಚ್.ಡಿ. ಕುಮಾರಸ್ವಾಮಿ ಕೇಳಿಕೊಂಡರು.

ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿದ್ದರೇ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ದೇವೇಗೌಡರು ಮುಖ್ಯಮಂತ್ರಿಯಾಗಿದ್ದು ಅವರ ಶ್ರಮದಿಂದ. ಚರ್ಚೆ ಮಾಡುವವರಿಗೆ ನೈತಿಕತೆ ಇಲ್ಲ. ಈ ರೀತಿ ರಾಜಕಾರಣ ಮಾಡಿದ್ದರೆ 1972ರಲ್ಲಿಯೇ ದೇವೇಗೌಡರು ಮುಖ್ಯಮಂತ್ರಿಯಾಗುತ್ತಿದ್ದರು. 1994ರಲ್ಲಿ ರಾಜ್ಯದ ಎಲ್ಲಾ ಕಡೆಯಿಂದ ಬೆಂಬಲ ಸಿಕ್ಕಿತು. ಹಳೇ ಕರ್ನಾಟಕದಲ್ಲಿ 76 ಸೀಟುಗಳು ಬಂದವು. ಅಲ್ಲೇನು ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಮಾಡಲಿಲ್ಲ. ಜಾತಿ ಗಣತಿ ವಿಚಾರಕ್ಕೆ ಒಕ್ಕಲಿಗ ಸ್ವಾಮೀಜಿಗಳು ಅಂದು ಕಾರ್ಯಕ್ರಮ ಮಾಡಿದ್ದರು. ಮುಖ್ಯಮಂತ್ರಿ ಮಾಡಿ ಅಂತ ಸ್ವಾಮೀಜಿಗಳು ಕಾರ್ಯಕ್ರಮ ಮಾಡಲಿಲ್ಲ. ದೇವೇಗೌಡರು ವೇದಿಕೆಯ ಮೇಲೆ ಕೂತಿದ್ದರಾ..? ಸ್ವಾಮೀಜಿಗಳು ಮುಖ್ಯಮಂತ್ರಿ ಮಾಡಿ ಎಂದು ಸಂದೇಶವನ್ನ ಕೊಟ್ಟಿದ್ರಾ..? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೆಚ್‌ಡಿಕೆ ಕೇಳಿದರು.

Previous articleಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದ ರೋಗಿ ವೈದ್ಯರಿಲ್ಲದೆ ಸಾವು: ಸಂಬಂಧಿಕರ ಆಕ್ರೋಶ
Next articleನಿವೃತ್ತಿ ಚಾಲಕನಿಗೆ ಬೀಳ್ಕೊಡುಗೆ, ಕಾರಿನಲ್ಲಿ ಮನೆಗೆ ಬಿಟ್ಟುಬಂದ ಕುಲಸಚಿವರು

1 COMMENT

  1. Yo, JILI222! This site’s got some seriously smooth slot gameplay. Been spinning here for a while now and the vibes are good. Definitely worth checking out if you’re looking for some fun. Check it out here: jili222

LEAVE A REPLY

Please enter your comment!
Please enter your name here