ಸಿಂಪಲ್ ಸುನಿ ತಮ್ಮ ಗತವೈಭವ ಚಿತ್ರದ ಮೊದಲ ಹಾಡಿನ ಬಿಡುಗಡೆ ಕುರಿತಂತೆ ಬಹಳ ಕಾವ್ಯತ್ಮಕ ಹಾಗೂ ಕಲಾತ್ಮಕ ರೀತಿಯಲ್ಲಿ ಸಂದೇಶ ನೀಡಿದ್ದಾರೆ. ‘ಗತವೈಭವ’ (Gatavaibhava) ಚಿತ್ರದ ಮೊದಲ ಹಾಡಿನ ಪ್ರಕಟಣೆಯ ಕುರಿತ ಘೋಷಣೆ ಮಾಡಿದ್ದಾರೆ. ಚಿತ್ರತಂಡದಿಂದ ಬಿಡುಗಡೆಯಾದ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಮೂಡಿಸಿದೆ.
ಗತವೈಭವ ಚಿತ್ರದ ಮೊದಲ ಹಾಡು: ಅಕ್ಟೋಬರ್ 8ರಂದು ಬೆಳಿಗ್ಗೆ 11:11ಕ್ಕೆ. ಲಹರಿ ಮ್ಯೂಸಿಕ್ (@LahariMusic) ಬಿಡುಗಡೆಯಾಗಲಿದೆ. ಸಿಂಪಲ್ ಸುನಿ ಪೋಸ್ಟ್‌ನಲ್ಲಿ “ಇವನೊಂಥರ ಹ್ರಸ್ವಸ್ವರ, ಅವಳೊಂಥರ ಧೀರ್ಘಸ್ವರ — ಈ ಜೋಡಿ ಮಿಲನ ಸಮೀಕರಣ, ವರ್ಣಮಾಲೆ ಕಾಗದದ ಮೇಲೆ ಭಾಷೆ ಬರವಣಿಗೆ… ಸಂಧಾನ” ಎಂಬ ಸಾಲುಗಳು ಗಮನ ಸೆಳೆದಿವೆ. ಈ ಸಾಲುಗಳು ಕೇವಲ ಹಾಡಿನ ಪರಿಚಯವಷ್ಟೇ ಅಲ್ಲ, ಚಿತ್ರದಲ್ಲಿನ ಪಾತ್ರಗಳ ಭಾವನಾತ್ಮಕ ಆಳವನ್ನೂ ಸೂಚಿಸುತ್ತಿವೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗತವೈಭವ ಚಿತ್ರದ ಕಾವ್ಯತ್ಮಕ ಮೊದಲ ಗೀತೆಯನ್ನು ಅಭಿನಂದನ್ ಮಹಿಷಾಲೆ ಹಾಗೂ ಸುನಿಧಿ ಗಣೇಶ ಹಾಡಿದ್ದಾರೆ. ಹಾಡಿಗೆ ಸಿಪಂಲ್ ಸುನಿ ಸಾಹಿತ್ಯ ಬರೆದಿದ್ದಾರೆ. ಕಥೆ-ಚಿತ್ರಕಥೆ ಜೊತೆಗೆ ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ತಿಮ್ಮಪ್ಪ ಹಾಗೂ ಸುನಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ, ಜೂಡಾ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ.
ಚಿತ್ರವು ಪ್ರೇಮ, ಭಾವನೆ ಮತ್ತು ಸಾಹಿತ್ಯದ ಸಂಧಿಯ ಸುತ್ತ ಸಾಗಿ ಇರಬಹುದು ಎಂಬ ಊಹೆ ಮೂಡಿದೆ. ಸಿಂಪಲ್ ಸುನಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಗತವೈಭವ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 14ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಯುವ ಪ್ರತಿಭೆ ದುಷ್ಯಂತ್ ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಲಹರಿ ಮ್ಯೂಸಿಕ್ ಕಂಪನಿಯು ಹಾಡಿನ ಬಿಡುಗಡೆ ಕುರಿತು ಅಧಿಕೃತ ಘೋಷಣೆ ನೀಡಿದ್ದು, ಅಕ್ಟೋಬರ್ 8ರಂದು ಬೆಳಿಗ್ಗೆ 11:11ಕ್ಕೆ ಮೊದಲ ಹಾಡು ಅವರ ಅಧಿಕೃತ ಯೂಟ್ಯೂಬ್ ಮತ್ತು ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.
ಈ ಘೋಷಣೆಯ ನಂತರ, ಸಾಮಾಜಿಕ ಜಾಲತಾಣದಲ್ಲಿ #ಗತವೈಭವ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗತೊಡಗಿದೆ. ಕನ್ನಡ ಸಿನೆಮಾ ಪ್ರೇಕ್ಷಕರು ಈ ಚಿತ್ರವನ್ನು “ಕವಿತೆಯ ರೂಪದ ಚಿತ್ರ” ಎಂದು ನಿರೀಕ್ಷಿಸುತ್ತಿದ್ದಾರೆ.