ಶ್ಯಾಮಲಾ ದೇವಿಯ ಪತಿಯಾದ ಯುಧಿಷ್ಠಿರ ಅತ್ಯಂತ ಸಾತ್ವಿಕ. ಯಾವಾಗಲೂ ಶುಭಕರ್ಮಗಳನ್ನು ಮಾಡುವಂತಹ ವ್ಯಕ್ತಿ.
ಪಾದುಕೆ ಇದು ಶ್ಯಾಮಲಾದೇವಿ ಯುಧಿಷ್ಠಿರನಿಗೆ ಅನುರೂಪವಾಗಿದ್ದರಿಂದ ಅವಳು ಯಾವಾಗಲೂ ಪತಿಯ ಸೇವಾರತಳಾಗಿರುತ್ತಾಳೆ.
ಭಾರಿ ಶ್ರೇಷ್ಠವಾದ ಪತಿವ್ರತಾ ಸ್ತ್ರೀಯರಿಗೆ ಪುರಂಧ್ರಿ ಎನ್ನುತ್ತಾರೆ. ಹೇಗೆ ಪತಿವ್ರತಾ ಶಿರೋಮಣಿ ಶ್ಯಾಮಲಾದೇವಿ ಪವಿತ್ರಳೋ ಹಾಗೆ ಪಾದುಕೆಗಳು ಪವಿತ್ರವಾಗಿದೆ.
ದೇವಸ್ಥಾನಗಳು ಪಾಠ ಪ್ರವಚನಗಳು, ದೇಶದ ದಿಗ್ವಿಜಯ ಮಾಡಿದಂತಹ ಸಿದ್ಧಾಂತದ ಪ್ರಚಾರ ಮಾಡುವುದಕ್ಕೆ ತೀರ್ಥಯಾತ್ರೆ ಕ್ಷೇತ್ರಗಳ ಯಾತ್ರೆ ತೀರ್ಥ ಸ್ಥಾನಗಳು, ಭಗವತ್ ಭಕ್ತರನ್ನು ಉದ್ಧಾರ ಮಾಡುವುದಕ್ಕಾಗಿ ಸಂಚಾರ ಮಾಡಿದ್ದಲ್ಲದೆ ಯಾವ ಯಾವ ಅಪವಿತ್ರವಾದ ಕಾರ್ಯವನ್ನು ಮಾಡುವುದಕ್ಕೆ ಆ ಪಾದುಕೆಗಳನ್ನು ಬಳಸಿಲ್ಲ. ಹೀಗಾಗಿ ಸಚ್ಚಾರಿತ್ರ‍್ಯಳಾದ ಮಹಿಳೆ ಶ್ಯಾಮಲಾದೇವಿ ಹೇಗೋ ಹಾಗೆ ಈ ಪಾದಗಳು ಕೂಡ ಶುದ್ಧವಾದ ಚಾರಿತ್ರವನ್ನು ಪಡೆದಿದೆ ಎಂದು ಅದರ ಅರ್ಥ.
ಪಾದಕೆಗಳನ್ನು ಹೊತ್ತು ಸ್ವಾಮಿಗಳು ಎಂದಿಗೂ ಕೂಡ ಅಯೋಗ್ಯವಾದ ಪ್ರದೇಶಗಳಿಗೆ ನಿಷಿದ್ಧ ಪ್ರದೇಶಗಳಿಗೆ ಹೋಗಿಲ್ಲ. ಮಂಗಳಕರವಾದ ಪ್ರದೇಶಗಳಿಗೆ ಹೋಗಿದ್ದಾರೆ ಎಂಬುದನ್ನು ಹೇಳುವುದರ ಮೂಲಕ ಅವರ ದಿವ್ಯವಾದ ಮಹಿಮೆಯನ್ನು ಎಷ್ಟು ಪುಟ್ಟ ಶಬ್ದದಲ್ಲಿ ಸತ್ಯಧರ್ಮ ಶ್ರೀಪಾದಂಗಳವರು ತಿಳಿಸುತ್ತಾರೆ.
ಸೂರ್ಯನ ಮಗ ಯಮ. ಯಮಧರ್ಮನ ಮಡದಿಯಾದ ಶ್ಯಾಮಲೆಯಂತೆ ಹೇಗೆ ಧರ್ಮಸಾರಿಯಾದ ಯಮಧರ್ಮರಾಯನಿಗೆ ಪ್ರಿಯಳು ಹಾಗೆ ಸತ್ಯವಂತರಿಗೆ ಈ ಪಾದುಕೆಗಳು ಪ್ರಿಯ ಎಂದು ಹೋಲಿಸುತ್ತಾರೆ.ಪಾದುಕೆಗಳು ತನ್ನಷ್ಟಕ್ಕೆ ತಾನೆ ನಡೆದು ಹೋಗುವುದಿಲ್ಲ ಸ್ವಾಮಿಗಳು ಅದನ್ನು ಹಾಕಿಕೊಂಡು ನಡೆದರೆ ಮಾತ್ರ ಪಾದಕ್ಕೆ ಹೋಗುತ್ತದೆ. ಹೀಗಾಗಿ ಶ್ರೇಷ್ಠ ಯತಿಗಳನ್ನು ಶ್ರೀಪಾದರು ಎಂದು ಕರೆಯವದುಂಟು. ಪಾದುಕೆ ರಕ್ಷಣೆಗಿಂತ ಹೆಚ್ಚಾಗಿ ಸುಕೃತಗಳನ್ನು ನೆರವೇರಿಸಲು ಅನುವು ಮಾಡಿಕೊಡುವ ದೈವಿಕವಾದ ವಸ್ತುವಾಗಿದೆ.
ಯಾರು ಧರ್ಮ ಮಾಡಿದವರೂ ಅಂಥವರ ಮನೆಗೆ ಮಾತ್ರ ಇಂತಹ ಪಾದುಕೆಗಳು ಹೋಗುತ್ತವೆ ಯಾರು ಧರ್ಮ ಮಾಡುವವರು ಅಂಥವರು ಮಾತ್ರ ಇಂಥ ಪಾದುಕೆಗಳಿಗೆ ಸ್ವಾಗತ ಹೇಳುವವರು. ಅದರ ಅರ್ಥ ಧರ್ಮವಂತನೇ ಸ್ವಾಗತ ಹೇಳುತ್ತಾರೆ ಧರ್ಮವಂತರಿಗೆ ಮಾತ್ರ ದಿಗ್ವಿಜಯ ಮಾಡುವಂತೆ ಈ ಪಾದುಕೆಗಳು ಅಧರ್ಮ ಮಾಡುವಂತವರಿಗೆ ಸಹನೆ ಮಾಡುವುದಿಲ್ಲ. ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವಂತಹ ಮಹಾನುಭಾವರು ಸತ್ಯವರತೀರ್ಥರು ಎಂದು ಬಹಳ ಸುಂದರವಾಗಿ ತಿಳಿಸಿಕೊಡುತ್ತಾರೆ ನಾವು ಪ್ರಾರ್ಥನೆ ಮಾಡಬೇಕಾದ್ದು ನಮ್ಮ ನಮ್ಮ ಗುರುಗಳನ್ನು ಆರಂಭ ಮಾಡಿಕೊಂಡು ಎಲ್ಲ ಗುರುಗಳಲ್ಲಿ ವಿಶೇಷವಾಗಿ ಇಲ್ಲಿ ಸಂಹಿತರಾದಂತಹ ಸತ್ಯವರತೀರ್ಥರಲ್ಲಿ ಉತ್ತಮ ಧರ್ಮ ಮಾಡುವಂತೆ ನೀವು ನಮ್ಮಲ್ಲಿ ಆಶೀರ್ವದಿಸಿ ಅನುಗ್ರಹ ಮಾಡಬೇಕು. ಎಂದು ಪ್ರಾರ್ಥಿಸಬೇಕು. ಆಗ ನಿಮ್ಮ ಪಾದುಕೆಗಳನ್ನು ಸ್ವಾಗತ ಹೇಳುವುದಕ್ಕೆ ನಮಗೆ ಅರ್ಹತೆ ಇದೆ. ನಿಮ್ಮ ಪಾದುಕೆಗಳ ಅನುಗ್ರಹ ನಮಗೆ ಲಭಿಸುವುದು ಸಾಧ್ಯತೆ ಇದೆ. ಹೀಗಾಗಿ ನಾವು ಅಸತ್ ಧರ್ಮರಾಗುವಂತೆ ಮಾಡುವುದು ಕೂಡ ನಿಮ್ಮ ಜವಾಬ್ದಾರಿ ಎಂದು ಕೇಳಿಕೊಳ್ಳಬೇಕು.