ರಾಮಪ್ರಾಪ್ತಿಯ ಕಾಮವೂ ಪುರುಷಾರ್ಥದಲ್ಲೊಂದು

ದುಃಖ ನಿವೃತ್ತಿ ಮೋಕ್ಷವೆಂದು ಆಯುರ್ವೇದ ಹೇಳುತ್ತದೆ. ಹಾಗೆಯೇ ನಿವೃತ್ತಿಯೂ ಕೂಡ ತ್ಯಾಗವಾಗಿರುವದಿಲ್ಲ. ಅದರಲ್ಲಿಯೂ ಕಾಮ ಇದ್ದೇ ಇರುತ್ತದೆ. ಹೀಗಾಗಿ ಮೋಕ್ಷದೊಳಗೆ ಕಾಮ ಅಡಕಗೊಂಡಿರುತ್ತದೆ.
ಮೋಕ್ಷ ಪುರುಷಾರ್ಥ ಎಂದು ಕೊನೆಗೆ ಧರ್ಮರಾಜ ಹೇಳಿದರೆ ಭೀಮಸೇನ ದೇವರು ಅದಕ್ಕೆ ಉತ್ತರ ಕೊಡುವುದಿಲ್ಲ. ಏಕೆಂದರೆ ಮೋಕ್ಷಕ್ಕೂ ಕಾಮದೊಳಗೆ ಸೇರಿದೆ. ಮೋಕ್ಷ ಬಯಸಿದರೆ ಅದು ಕೂಡ ಕಾಮ. ಆದ್ದರಿಂದ ಈ ಅರ್ಥದಲ್ಲಿ ಕಾಮವನ್ನು ಪುರುಷಾರ್ಥ ಎಂದು ಭೀಮಸೇನ ದೇವರು ಹಲವಾರು ಸಾರಿ ಹೇಳಿದ್ದಾರೆ
ಅದನ್ನು ವಾಲ್ಮೀಕಿ ಮಹರ್ಷಿಗಳ ಪುಟ್ಟಮಾತಿನಲ್ಲಿ ಕಾಣಬಹುದು ಇದಕ್ಕಿದ್ದಂತೆ ಕಾಮದಿಂದ ಬಂದ ಅಂತ, ಭಾರದ್ವಾಜರ ಹತ್ತಿರ ಕಾಮದಿಂದ ಅಂದರೆ ರಾಮಪ್ರಾಪ್ತಿ ಎಂಬ ಕಾಮದಿಂದ ಬಂದ. ರಾಮ ದೇವರನ್ನು ಪಡೆಯಬೇಕೆಂಬ ಶ್ರೇಷ್ಠವಾದ ಇಚ್ಛೆಯಿಂದ, ಪುರುಷಾರ್ಥ ಎಂದು ಎನಿಸಿಕೊಂಡ ರಾಮಚಂದ್ರ ಅವನ ಬಗ್ಗೆ ಇಚ್ಛೆ ಪಡುವುದು ಒಂದು ಬಗೆಯ ಪುರುಷಾರ್ಥ, ಆ ಕಾಮನೆಯಿಂದ ಸತ್ಕಾರ್ಯ ಮನೆಯಿಂದ ಭರತ ಭರದ್ವಾಜರ ಹತ್ತಿರ ಬಂದಿದ್ದಾನೆ ಎಂದು ನಾವಿಲ್ಲಿ ತಿಳಿಯಬೇಕು. ಆದರದು ಕೀಳಾದ ಕಾಮವಲ್ಲವೆಂದು ತಿಳಿಯಬೇಕು. ಸ್ವಯಂ ಭರತನೆ ಕಾಮನ ಅವತಾರ, ತಾನು ಕಾಮನ ಅವತಾರನ್ನಾಗಿ ಆ ಭಗವಂತನ ಸುದರ್ಶನ ಚಕ್ರಕ್ಕೆ ಅಭಿಮಾನಿ ದೇವತೆಯಾದ ಭರತ ಚಕ್ರವರ್ತಿ, ತಾನು ಚಕ್ರ, ರಾಮಚಕ್ರ ಧಾರಿಯಿಂದ, ಚಕ್ರಾಭಿಮಾನಿಯಾದ ತಾನು ದೂರ ಇದ್ದರೆ ಹೇಗೆ ಎಂದು ಆ ಪರಮಾತ್ಮನ ಹತ್ತಿರ ಬಂದ. ಜೊತೆಗೆ ಜಾಗತಿಕ ವಾದಂತಹ ಏನೆಲ್ಲಾ ವಿಷಯಗಳ ಭೋಗ್ಯವಾದ ವಿಷಯಗಳ ಕಾಮವಿದೆ ಆ ಎಲ್ಲ ಭೌತಿಕವಾದ ವಸ್ತುಗಳ ಕಾಮನೆಯನ್ನು ಬಿಟ್ಟು ಶ್ರೀರಾಮಚಂದ್ರನೇ ಬೇಕು ಎಂದು ಆ ರಾಜ್ಯವೇ ಬೇಡ ಎಂದು ತೊರೆದು ರಾಮನಲ್ಲಿಗೆ ಭರತ ಬಂದ. ಲೌಕಿಕ ಕಾರ್ಯಗಳಾಗಿ ಆಧ್ಯಾತ್ಮಿಕ ಕಾರ್ಯಗಳಲ್ಲಿ ಅವಸರಪಡಿಸುವುದು ಬಿಟ್ಟು ಬಾ ಎಂದು ಹೇಳುವುದು ಸರಿಯಾದದ್ದು ಅಲ್ಲ. ಅತ್ಯಂತ ಅನಿವಾರ್ಯವಾದ ಪ್ರಸಂಗಗಳಿಗೆ ಮುಂದಿನ ಹೆಚ್ಚಿನ ಧರ್ಮ ಕಾರ್ಯಗಳಿಗೆ ಅನುಕೂಲವಾಗತ್ತೆ ಎನ್ನುವ ಏನೋ ಒಂದು ದೊಡ್ಡ ಉದ್ದೇಶ ಇದ್ದರೆ ಪರವಾಗಿಲ್ಲ. ಆ ತರಹ ಕಾರಣವಿಲ್ಲದೆ ಲೌಕಿಕ ಕಾರ್ಯಗಳಾಗಿ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಆತಂಕ ಮಾಡುವುದು ಸರಿಯಲ್ಲ. ಎನ್ನುವ ಸಂದೇಶವನ್ನು ರಾಮಾಯಣ ಹೇಳುತ್ತದೆ.
ಆ ಕಾರಣಕ್ಕಾಗಿ ಭರತ ಭಾರದ್ವಾಜ ಮುನಿಗಳ ಎಲ್ಲಾ ಅಗ್ನಿಹೋತ್ರಾದಿ ಉಪಾಸನೆ, ಅನುಷ್ಠಾನಗಳನ್ನು ಮುಗಿಸಿಕೊಂಡು ಹೊರಗಡೆ ಬರುವ ತನಕ ಹೊರಗಡೆ ಕೈಕಟ್ಟಿ ನಿಂತು ವಿನಮ್ರನಾಗಿ ಕಾದು ಕುಳಿತುಕೊಳ್ಳುತ್ತಾನೆ. ತಮ್ಮ ಎಲ್ಲ ವಿಧಿ ವಿಧಾನಗಳನ್ನು ಅನುಷ್ಠಾನಗಳನ್ನ ಮಾಡಿದ ನಂತರವೇ ಯೋಗಿಗಳು ಮಾತನಾಡುವುದಕ್ಕೆ ಬರುತ್ತಾರೆ ಎಂಬುದನ್ನು ಶಾಸ್ತ್ರಗಳು ಹೇಳುತ್ತವೆ. ಬಂದ ಪ್ರತಿಯೊಬ್ಬ ವ್ಯಕ್ತಿಗೂ ನಿನ್ನ ಜೊತೆ ಬಂದಂತ ಸೈನಿಕರು ದಾಸರು ರಾಜರ ಸಮೇತ ಬಂದಾಗ ಅವರ ಅತಿಥವನ್ನು ಮಾಡುವುದರಲ್ಲಿ ನಾನು ದೇವರನ್ನು ಕಾಣುತ್ತೇನೆ ಆದುದರಿಂದ ಅವರೆಲ್ಲರೂ ತೃಪ್ತರಾಗಿದ್ದಾರೆ ಎಂದು ಭಾರದ್ವಾಜ ಮುನಿಗಳು ಭರತನನ್ನು ಕೇಳುತ್ತಾರೆ. ಭರತ ಅಣ್ಣನನ್ನು ಹುಡಕಿ ಹೊರಟಿರದೇ ಇದ್ದರೆ ಮನೋಕ್ಲೇಶಕ್ಕೆ ಒಳಗಾಗುತ್ತಿದ್ದ. ಮನದ
ದುಗುಡಗಳು ಹಾಗೇ ಇರುತ್ತಿದ್ದವು. ಅದಕ್ಕೆ ಭರತನ ದುಃಖ ನಿವೃತ್ತಿಯೂ ಕೂಡ ಮೊಕ್ಷವೇ ಆಗಿದೆ. ಇಲ್ಲಿ ಮೋಕ್ಷವೆಂದರೆ ದೇವರನ್ನು ಹುಡುಕಿ ಪಡೆಯುವದು ಎಂದರ್ಥ.