ಕನ್ನಡದಲ್ಲಿ AI ಸಿನಿಮಾ ವಿಶ್ವದಲ್ಲೇ ಮೊದಲು: 95 ನಿಮಿಷ ಅವಧಿಯ ಈ ಸಿನಿಮಾ10 ಕ್ಕೂ ಹೆಚ್ಚು ಹಾಡು
ಬೆಂಗಳೂರು: ವಿಶ್ವದಲ್ಲಿಯೇ ಸಂಪೂರ್ಣ AI ನಿರ್ಮಿತ ಮೊದಲ ಕನ್ನಡ ಸಿನಿಮಾ ನಿರ್ಮಿಸಲಾಗಿದ್ದು, ಸೆನ್ಸಾರ್ ಬೋರ್ಡ್‌ನಿಂದ ಯು/ಎ ಸರ್ಟಿಫಿಕೆಟ್ ಪಡೆದಿದೆ.
95 ನಿಮಿಷ ಅವಧಿಯ ಈ ಸಿನಿಮಾದಲ್ಲಿ 10 ಕ್ಕೂ ಹೆಚ್ಚು ಹಾಡುಗಳಿವೆ. ಈ ಚಿತ್ರದ ಹೆಸರು ‘ಲವ್ ಯೂ’. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಎಸ್. ನರಸಿಂಹಮೂರ್ತಿ. ಈ ಸಿನಿಮಾದ ನಿರ್ದೇಶನ ಮತ್ತು ನಿರ್ಮಾಪಕರನ್ನು ಹೊರತುಪಡಿಸಿದರೆ, ಮತ್ತೆಲ್ಲ ಕೆಲಸಗಳನ್ನೂ ಎಐ ತಂತ್ರಜ್ಞಾನವೇ ಮಾಡಿರುವುದು ಈ ಚಿತ್ರದ ವಿಶೇಷತೆಯಾಗಿದ್ದು. ಇದು ವಿಶ್ವದಲ್ಲಿಯೇ ಸಂಪೂರ್ಣ AI ನಿರ್ಮಿತ ಮೊದಲ ಸಿನಿಮಾವಾಗಿದೆ. ಈ ಚಿತ್ರವು ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.