ನಿರಂತರ ಬೆಲೆ ಏರಿಕೆಯ ನೀತಿಯಿಂದ ಜನರನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ.
ಬೆಂಗಳೂರು: ಸರ್ಕಾರ ಮುಸ್ಲಿಮರಿಗೆ 4% ಮೀಸಲಾತಿ ನೀಡಿದೆ, ಉಳಿದ ಹಿಂದುಗಳು ಏನು ದ್ರೋಹ ಮಾಡಿದ್ದಾರೆ. ನಾವು ಮುಸ್ಲಿಮರ ವಿರೋಧಿಗಳಲ್ಲ. ಆದರೆ ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಲ್ಲಿ ನಾಳೆ ನಡೆಯುವ ಅಹೋರಾತ್ರಿ ಧರಣಿ ವಿಚಾರ ಕುರಿತಂತೆ ಮಾತನಾಡಿದ ಅವರು ರಾಜ್ಯ ಸರ್ಕಾರ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮೂಲಕ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಜನಸಾಮಾನ್ಯರು ದಿನನಿತ್ಯ ಬಳಸುವ ಹಾಲಿನ ಬೆಲೆ ಒಂದು ವರ್ಷದ ಅವಧಿಯಲ್ಲಿ 9 ರೂಪಾಯಿ ಹೆಚ್ಚಾಗಿದೆ. ನಿರಂತರ ಬೆಲೆ ಏರಿಕೆಯ ನೀತಿಯಿಂದ ಜನರನ್ನು ನೆಮ್ಮದಿಯಿಂದ ಬದುಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ಈ ಎಲ್ಲಾ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಹಾಲು, ವಿದ್ಯುತ್, ಮೆಟ್ರೋ, ನೋಂದಣಿ ವೆಚ್ಚ ಸೇರಿ ಎಲ್ಲಾ ದರ ಏರಿಕೆ ಮಾಡಿದ್ದಾರೆ. ದಿನಬಳಕೆಯ ವಸ್ತುಗಳನ್ನು ಕಾಂಗ್ರೆಸ್ ಸರ್ಕಾರ ಏರಿಸಿ ಜನರನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಬೆಲೆ ಏರಿಕೆ ಹಿಂಪಡೆಯಬೇಕು ಅಂತಾ ನಾವು ನಾಳೆ ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ. ನಾನೂ ಕೂಡಾ ಧರಣಿಯಲ್ಲಿ ಭಾಗವಹಿಸುತ್ತಿದ್ದೇನೆ. ಯಾರು ಯಾರು ನೋವು ಅನುಭವಿಸುತ್ತಿದ್ದಾರೋ ಎಲ್ಲರೂ ಪಕ್ಷ ಬೇಧ ಮರೆತು ಬಂದು ಭಾಗವಹಿಸಿಬೇಕು ಎಂದರು.