Home Advertisement
Home ನಮ್ಮ ಜಿಲ್ಲೆ ಕಲಬುರಗಿ ಮಾರ್ಚ್ 26ರಂದು ಬೃಹತ ಟ್ರಾಕ್ಟರ್ ಜಾಥಾ

ಮಾರ್ಚ್ 26ರಂದು ಬೃಹತ ಟ್ರಾಕ್ಟರ್ ಜಾಥಾ

0
149

ತೆಲಂಗಾಣಕ್ಕೆ 10 ಟಿಎಂಸಿ ನೀರು ಹರಿಸಿದ ಸರ್ಕಾರಕ್ಕೆ ರಾಜ್ಯದ ಅನ್ನದಾತರ ಕೃಷಿ ಚಟುವಟಿಕೆಗಳಿಗೆ ನೀರಿಲ್ಲ

ಬೆಂಗಳೂರು: ಮಾರ್ಚ್ 26ರಂದು ನಡೆಯುವ ಟ್ರಾಕ್ಟರ್ ಜಾಥಾವನ್ನು ನಾವೆಲ್ಲರೂ ಬೆಂಬಲಿಸೋಣ ಎಂದು ಬಿಜೆಪಿ ಎಂಎಲ್‌ಸಿ ಸಿ ಟಿ ರವಿ ಹೇಳಿದ್ದಾರೆ.
ನಾರಾಯಣಪುರ ಬಸವ ಸಾಗರ ಬಲದಂಡೆ ಮತ್ತು ಎಡದಂಡೆ ಕಾಲುವೆಗೆ ಏಪ್ರಿಲ್ 10 ರ ವೆರೆಗೆ ನೀರು ಹರಿಸುವ ಸಲುವಾಗಿ ಬೃಹತ ಟ್ರ್ಯಾಕ್ಟರ್ ಜಾಥ ಮುಖಾಂತರ ಪ್ರತಿಭಟನೆಗೆ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ತೆಲಂಗಾಣಕ್ಕೆ 10 ಟಿಎಂಸಿ ನೀರು ಹರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಅನ್ನದಾತರ ಕೃಷಿ ಚಟುವಟಿಕೆಗಳಿಗೆ ನಾರಾಯಣಪುರ ಬಸವ ಸಾಗರ ಎಡದಂಡೆ ಹಾಗು ಬಲದಂಡೆ ಕಾಲುವೆಗೆ ಹರಿಸಲು ನೀರಿಲ್ಲವಂತೆ.

ಹೊರ ರಾಜ್ಯದ ಜನರ ಕಣ್ಣಿಗೆ ಬೆಣ್ಣೆ, ನಮ್ಮ ರಾಜ್ಯದ ಜನರ, ಅದೂ ಅನ್ನದಾತ ರೈತರ ಕಣ್ಣಿಗೆ ಸುಣ್ಣ. ನಮ್ಮ ರೈತರ ಕೃಷಿ ಕಾರ್ಯದ ಅಗತ್ಯಕ್ಕೆ ಬೇಕಾದ ನೀರನ್ನು ಹರಿಸದೆ, ಕಣ್ಣಿದ್ದೂ ಕುರುಡಾಗಿ ಕುಳಿತ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಲು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ (ರಾಜುಗೌಡ) ಅವರ ನೇತೃತ್ವದಲ್ಲಿ ಮಾರ್ಚ್ 26ರಂದು ನಡೆಯುವ ಟ್ರಾಕ್ಟರ್ ಜಾಥಾವನ್ನು ನಾವೆಲ್ಲರೂ ಬೆಂಬಲಿಸೋಣ ಎಂದಿದ್ದಾರೆ.

Previous articleರೈಲು ನಿಲ್ದಾಣ ಸ್ಫೋಟಿಸುವ ಬೆದರಿಕೆ
Next articleಮನ್ ಕೀ ಬಾತ್: ನಿಮ್ಮ ಆಲೋಚನೆ ಸಲ್ಲಿಸಿ