Home Advertisement
Home ಅಪರಾಧ ಈಜಲು ಹೋಗಿದ್ದ ಯುವಕರಿಬ್ಬರ ಸಾವು

ಈಜಲು ಹೋಗಿದ್ದ ಯುವಕರಿಬ್ಬರ ಸಾವು

0
128

ತೋಟದಲ್ಲಿನ ಬಾವಿಯಲ್ಲಿ ಗೆಳೆಯರ ಜೊತೆಗೆ ಈಜಲು ಹೋಗಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಉಸಿರು ಗಟ್ಟಿ ಸಾವಿಗೀಡಾದ ಘಟನೆ ಚಿಟಗುಪ್ಪ ತಾಲೂಕಿನ ವಿಠ್ಠಲಪುರ ಗ್ರಾಮದಲ್ಲಿ ಶನಿವಾರ ಜರುಗಿದೆ.

ವಿಠಲಪುರ ಗ್ರಾಮದ ಪ್ರಶಾಂತ (22)ಹಾಗು ಬಸವಕಲ್ಯಾಣ ತಾಲೂಕಿನ ದಾಸರವಾಡಿ ಗ್ರಾಮದ ಶಿವಾಜಿ( 22) ಎಂಬ ಯುವಕರು ಮೃತಪಟ್ಟಿದ್ದಾರೆ.

ನಾಲ್ವರು ಗೆಳೆಯರು ಜೊತೆಗೂಡಿ ತೋಟಕ್ಕೆ ತೆರಳಿದಾಗ ಒಬ್ಬ ಇಜಾಡಲು ನೀರಿಗೆ ಇಳಿಯುವಾಗ ಕಾಲು ಜಾರಿ ಬಿದ್ದಿದ್ದ,ಅವನನ್ನು ಉಳಿಸಲು ಮತ್ತೊಬ್ಬ ಸ್ನೇಹಿತ ನೀರುಗಳಿದಾಗ ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಈ ಕುರಿತು ಬೇಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.