ಅಭಿ ರಕ್ಷಣೆಗೆ ತೆರಳಿದ್ದ ಸಹೋದರಿಯರೂ ನೀರುಪಾಲು

0
32
Water

ವಿಜಯನಗರ: ಮುಳುಗುತ್ತಿದ್ದ ತಮ್ಮನ ರಕ್ಷಣೆಗೆ ತೆರಳಿದ್ದ ಮೂವರು ಅಕ್ಕಂದಿರು ಸಾವನ್ನಪ್ಪಿರೋ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ಸಂಬಂಧಿಕರ ಮನೆಗೆ ಬಂದಿದ್ದ ವಿದ್ಯಾರ್ಥಿಗಳು ತುಂಬಿದ ಕೆರೆ ನೋಡಲು ಹೋಗಿದ್ದಾಗ ಅಭಿಷೇಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ, ಆತನ ರಕ್ಷಣೆಗಿಳಿದು ಉಳಿದವರು ನೀರು ಪಾಲಾಗಿದ್ದಾರೆ ಎಂದು ಗೊತ್ತಾಗಿದೆ. ತಾಂಡಾದ ಹೊಂಡದಲ್ಲಿ ಮುಳುಗುತ್ತಿದ್ದ ಅಭಿ ಎಂಬಾತನ ರಕ್ಷಣೆಗೆ ತೆರಳಿದ್ದ ಮೂವರು ಸಹೋದರಿಯರಾದ, ಅಶ್ವಿನಿ, ಕಾವೇರಿ, ಅಪೂರ್ವಾ ಎಂಬುವವರು ಮೃತಪಟ್ಟಿದ್ದಾರೆ. ಈ ಬಗ್ಗೆ ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Previous article14 ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ
Next articleಮಗನನ್ನು ಸಾಯಿಸಿ ತಂದೆ ಆತ್ಮಹತ್ಯೆ