ಲೋಕಾಯುಕ್ತ ಬಲೆಗೆ ಜೆಸ್ಕಾಂ ಅಧಿಕಾರಿ

ಜೆಸ್ಕಾಂ

ಹಗರಿಬೊಮ್ಮನಹಳ್ಳಿ: ಪಟ್ಟಣದ ಜೆಸ್ಕಾಂ ಇಲಾಖೆ ಸೆಕ್ಷನ್ ಆಫೀಸರ್ ಎಚ್.ಪಕ್ಕೀರಪ್ಪ ಎಂಬುವವರು ರೈತನಿಂದ 4 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ತಾಲೂಕಿನ ಮುತ್ಕೂರು ಬಂಡಿಹಳ್ಳಿ ಗ್ರಾಮದ ರೈತ ಹಾಗೂ ಕೆ.ಆರ್.ಪಕ್ಷದ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ದಾದಪೀರ್ ಎಂಬುವರು ನೀಡಿದ ದೂರಿನ ಆಧಾರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಅವರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಬಂಡಿಹಳ್ಳಿ ಗ್ರಾಮದ ಹೊಲದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿತ್ತು. ಅದನ್ನು ಬದಲಾಯಿಸಿ ಹೊಸ ಟಿಸಿ ಅಳವಡಿಸುವಂತೆ ಜೆಸ್ಕಾಂ ಅಧಿಕಾರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಅಧಿಕಾರಿ 15 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ. ಇದಕ್ಕೆ ರೈತ ದಾದಾಪೀರ್ 2 ಸಾವಿರ ಮುಂಗಡ ಹಣ ನೀಡಿ ಉಳಿದ ಹಣವನ್ನು ಆಮೇಲೆ ಕೊಡುತ್ತೇನೆ ಎಂದು ನಂತರ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದ.