Home ವೈವಿಧ್ಯ ಸಂಪದ ಸೃಷ್ಟಿಯಲ್ಲಿ ಸಂಚರಿಸಿರಿ

ಸೃಷ್ಟಿಯಲ್ಲಿ ಸಂಚರಿಸಿರಿ

0
68

ಸೃಷ್ಟಿಯ ಸೌಂದರ್ಯ ವೈವಿಧ್ಯಮಯವಾಗಿದೆ. ನಿಸರ್ಗದ ಭೂಮ್ಯಾಕಾಶ ದೃಶ್ಯಗಳು ಕಲ್ಪನಾತೀತ, ವರ್ಣನಾತೀತವಾಗಿವೆ. ಭೂಮಿಯ ಮೇಲಿನ ಜೀವ, ಮರ, ಫಲ, ಪುಷ್ಪ ಮುಂತಾದ ಮನೋಹರವಾದ ಜಗತ್ತನ್ನು ನೋಡಿ ಸುಕೃತನಾಗಬೇಕಾದ ಮನುಷ್ಯನನ್ನು ಅಲ್ಲಾಹನು ಕುರಾನಿನ ಅನೇಕ ಅಧ್ಯಾಯಗಳ ವಚನಗಳಲ್ಲಿ ಕರೆಕೊಟ್ಟಿದ್ದಾನೆ.
ಕುರಾನಿನ ಈ ವಚನ ನೋಡಿ(ಅಧ್ಯಾಯ ಅಂಕಬೂತ.೨೦) ದೇವರು ಸೃಷ್ಟಿಯನ್ನು ಹೇಗೆ ರಚಿಸಿದ್ದಾನೆ ಎಂಬುದನ್ನು ತಿಳಿಯಲು ಭೂಮಿಯ ಮೇಲೆ ಸಂಚರಿಸಿ ನೋಡಿ' ನಿಸರ್ಗ ದೇವರು ನಮಗೆ ನೀಡಿರುವ ಒಂದು ತೆರೆದ ಪುಸ್ತಕದಂತಿದೆ. ನಾವು ನೋಡಿದಷ್ಟು ವಿಶಾಲ ನಡೆದಷ್ಟು ವಿಸ್ತಾರ. ನಮ್ಮ ಕಲ್ಪನೆಗೆ ಮೀರಿದ ಆತನ ಸೃಷ್ಟಿಯ ಚಿತ್ತಾರಗಳು ಇವನ್ನು ನಾವು ನೋಡಿದಾಗ ಇವು ದೇವರಲ್ಲಿ ನಮ್ಮ ನಂಬಿಕೆಯನ್ನು ದೃಢಪಡಿಸುತ್ತವೆ. ಇನ್ನೊಂದು ಅಧ್ಯಾಯ ಅಲ್, ಅನ್, ಆಮ್(೬:೧೧)ರಲ್ಲಿಓ ಮೊಹಮ್ಮದರೆ(ಸ) ನೀವು ಭೂಮಿಯ ಮೇಲೆ ಸಂಚರಿಸಿರಿ’ ಎಂದು ಪ್ರವಾದಿವರ್ಯರಿಗೆ ಕರೆ ನೀಡಲಾಗಿದೆ. ಈ ಜಗತ್ತನ್ನು ನಿಮ್ಮ ಪ್ರಭು ವ್ಯರ್ಥ ಉದ್ದೇಶರಹಿತವಾಗಿ ಸೃಷ್ಟಿಸಲಿಲ್ಲ ಎಂಬ ಸ್ಪಷ್ಟನೆಯು ಕುರಾನಿನ ವಿವಿಧ ಅಧ್ಯಾಯಗಳಲ್ಲಿ ಅನೇಕ ಪ್ರಸಂಗಗಳಲ್ಲಿ ಹೇಳಲಾಗಿದೆ.
ಕುರಾನಿನ ಅಧ್ಯಾಯ ಯೂನೂಸ್(೧೦:೧೦೧) ಭೂಮಿ ಆಕಾಶಗಳನ್ನು ಕಣ್ಣತೆರೆದು ನೋಡಿರಿ' ಎಂದು ಇನ್ನೊಂದು ಅಧ್ಯಾಯ ತ್ತೊಬ(೯:೨)ರಲ್ಲಿಯೂ ಸಹ ಅಲ್ಲಾಹನು ಒಂದು ಸಂದರ್ಭದಲ್ಲಿ ನಾಲ್ಕುತಿಂಗಳು ನಾಡಿನಲ್ಲಿ ಸಂಚರಿಸಿರಿ ಎಂದಿದ್ದಾನೆ. ಇಸ್ಲಾಮಿ ವಿದ್ವಾಂಸರು ಕುರಾನಿನ ವಚನ ಹಾಗೂ ಪ್ರವಾದಿವರ್ಯ ಮಹಮ್ಮದ್(ಸ) ಅವರ ವಚನಗಳಲ್ಲಿ ಬಂದ ದೇವರ ಸೃಷ್ಟಿಯಲ್ಲಿ ಸಂಚರಿಸುವುದರ ಲಾಭಗಳನ್ನು ಹೇಳಿದ್ದಾರೆ. ಇಂತಹ ಸಂಚಾರದಿಂದ ನಾವು ವಿಪತ್ತು ಅನಿಷ್ಟಗಳಿಂದ ದೂರವಾಗುತ್ತೇವೆ. ಇದರಿಂದ ಜ್ಞಾನದ ವೃದ್ಧಿಯಾಗುತ್ತದೆ. ಸಾಮಾಜಿಕ ಜೀವನದಲ್ಲಿ ಸದಾಚಾರಗಳನ್ನು ಕಲಿಯಬಹುದು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ನಾವು ಉದಾತ್ತ ಧೈರ್ಯ ಗಳುಳ್ಳ ಜೊತೆಗಾರರನ್ನು ಪಡೆಯಲು ಸಾಧ್ಯವಾಗುವುದು. ಒಂದು ಸಂದರ್ಭದಲ್ಲಿ ಅಲ್ಲಾಹನು ಪ್ರಶ್ನಿಸುತ್ತಾನೆಏನು ಇವರೆಲ್ಲ ಭೂಮಿಯ ಮೇಲೆ ಸಂಚರಿಸಲಿಲ್ಲವೆ’ (ಅಲ್ ಹಜ್ಜ್ ೨೨:೪೬) ಎಂದು ಇಸ್ಲಾಮಿ ವಿದ್ವಾಂಸರು ಹೇಳಿದ್ದು ನೆನಪಾಗುತ್ತದೆ. ಪ್ರತಿದಿನದ ೫ ಕಡ್ಡಾಯದ ನಮಾಜಿನಲ್ಲಿ ಬೆಳಗಿನ ಪ್ರಾರ್ಥನೆ ಒಂದು. ಅದು ಮುಗಿದಾಗ ಇನ್ನೂ ಸೂರ್ಯೋದಯದ ಕಾಲ ಮೆಲ್ಲನೆ ಕಾಲಿಡುತ್ತಿರುತ್ತದೆ ನಮಾಜ್ ಆದಮೇಲೆ ಅರ್ಧ ಗಂಟೆಯಾದರೂ ದೇವರ ಸೃಷ್ಟಿಯಲ್ಲಿ ಅಂದರೆ ಪಾರ್ಕ್ ಉದ್ಯಾನ, ಮೈದಾನಗಳಲ್ಲಿ ಅಡ್ಡಾಡಿ ದೇವ ಸೃಷ್ಟಿಯ ಸೌಂದರ್ಯವನ್ನು ಅಸ್ವಾದಿಸಬೇಕು. ಇದು ಆರೋಗ್ಯದ ಲಕ್ಷಣವು ಅಹುದು. ಎಷ್ಟು… ಸರಳ ವಿಧಾನವಾಗಿದೆ ಅಲ್ಲವೇ….?