SK Home Ad
Home ಕ್ರೀಡೆ ಕ್ರಿಕೆಟ್ ಆಡುವಾಗ ಹೃದಯಾಘಾತದಿಂದ ಸಾವು

ಕ್ರಿಕೆಟ್ ಆಡುವಾಗ ಹೃದಯಾಘಾತದಿಂದ ಸಾವು

0
143

ಉತ್ತರ ಪ್ರದೇಶದ ನೋಯ್ಡಾದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಇಂಜಿನಿಯರ್ ಒಬ್ಬರು ಪಿಚ್ ಮಧ್ಯದಲ್ಲಿ ಕುಸಿದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ವ್ಯಕ್ತಿ ಕುಸಿದುಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈದಾನದಲ್ಲಿದ್ದ ಇತರ ಆಟಗಾರರು ತಕ್ಷಣವೇ ಆತನ ಸಹಾಯಕ್ಕೆ ಮುಂದಾದರು. ಬಳಿಕ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ. ಅಷ್ಟರಲ್ಲಿಯೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಮೃತ ವ್ಯಕ್ತಿಯನ್ನು ವಿಕಾಸ್ ನೇಗಿ (36) ಎಂದು ಗುರುತಿಸಲಾಗಿದೆ.