ಧರ್ಮದ ಹೆಸರಿನಲ್ಲಿ ವೈರತ್ವ ಸಲ್ಲದು

0
13

ಭಗವಂತ ನಮಗೆ ಮನುಷ್ಯ ಜನ್ಮ ನೀಡಿ ಉಪಕರಿಸಿದ್ದಾನೆ. ಉಳಿದೆಲ್ಲ ಪ್ರಾಣಿಗಳಿಗಿಂತ ಹೆಚ್ಚಿನ ಬುದ್ಧಿ ದಯಪಾಲಿಸಿದ್ದಾನೆ. ಹೀಗಾಗಿ ನೆಮ್ಮದಿಯ ಜೀವನಕ್ಕಾಗಿ ಕೆಲವೊಂದಿಷ್ಟು ಮೌಲ್ಯಗಳ ದಾರಿಯಲ್ಲಿ ನಡೆಯಬೇಕು ಎಂಬ ಸೂತ್ರವನ್ನು ವಿಧಿಸಿಕೊಂಡಿದ್ದೇವೆ. ಅದರಲ್ಲಿ ಮಾನವೀಯ ಮೌಲ್ಯವೂ ಒಂದು.
ಮಾನವೀಯ ಮೌಲ್ಯ ಅರಿತು ಬದುಕುವುದನ್ನು ಕಲಿಯಬೇಕು. ಅದಕ್ಕಾಗಿ ಶರಣರು
ದೇವಲೋಕ ಮರ್ತ್ಯಲೋಕ ಬೇರಿಲ್ಲ ಕಾಣಿಭೋ..
ಆಚಾರವೇ ಸ್ವರ್ಗ ಅನಾಚಾರವೇ ನರಕ
ಎಂದು ಉಪದೇಶ ಮಾಡಿದ್ದಾರೆ. ಆಚಾರ ಸದಾಚಾರವಾಗಿರಬೇಕು. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಾವು ಬದುಕಬೇಕು. ನಮ್ಮ ಕುಟುಂಬದ ಜೊತೆ ನಮ್ಮ ಸಮಾಜ ನಮ್ಮ ಊರು ನಮ್ಮ ದೇಶ ಸಾರ್ಥಕ ಅಭಿಮಾನ ಸದಾಕಾಲ ನಮ್ಮಲ್ಲಿರಬೇಕು.
ಎಲ್ಲಿಯೇ ಆಗಲಿ ಅನ್ಯಾಯ ಅತ್ಯಾಚಾರ ನಡೆಯುತ್ತಿದ್ದರೆ ಅದನ್ನು ತಡೆಯುವ ಪ್ರಯತ್ನ ಮಾಡಬೇಕು ಆದಷ್ಟು ಅಮಾಯಕರ ಸಹಾಯಕ್ಕೆ ನಿಲ್ಲಬೇಕು. ನಾವು ಸ್ವರ್ಗದ ಬಯಕೆ ಮಾಡಬೇಕು. ಎಲ್ಲಕ್ಕಿಂತ ಮೊದಲು ನಾವು ದುಶ್ಚಟಗಳಿಂದ ದೂರ ಇರಬೇಕು. ವಾಸ್ತವದಲ್ಲಿ ನಾವು ನಡೆಯುವ
ಧರ್ಮಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಧರ್ಮ ಸೂಕ್ಷö್ಮತೆಗಳನ್ನು ಅರಿಯದೇ ಅಮಾನವೀಯವಾಗಿ ನಡೆಯುತ್ತಿದ್ದೇವೆ
ಅಷ್ಟೇ ಅಲ್ಲ; ಮತ್ತೊಬ್ಬರನ್ನು ಪ್ರೇರೇಪಿಸುತ್ತಿದ್ದೇವೆ. ಇದರಿಂದ ಸಮಾಜದಲ್ಲಿ ಸಹಿಷ್ಣತ್ವ ಹಾಳಾಗಿ, ವೈರ ಭಾವನೆ ತಲೆದೋರುತ್ತಲಿದೆ. ಸಂಸ್ಕೃತಿ, ವೇಷ, ಆಚಾರ, ವಿಚಾರಗಳು ಬೇರೆಯಾಗಿದ್ದರೂ ಕೂಡ ನಾವೆಲ್ಲರೂ ಮನುಷ್ಯರಲ್ಲವೇ? ಎಂಬ ಚಿಂತನೆ ನಮ್ಮನ್ನು ಸದಾಕಾಲ ಕಾಡುತ್ತಿರಬೇಕು. ಭೌಗೋಲಿಕವಾಗಿ ಅಸ್ಥಿತ್ವಕ್ಕೆ ಒಂದು ಜೀವನ ಪದ್ಧತಿ
ಬಂದಿರುತ್ತದೆ. ಆ ಸಮುದಾಯದಲ್ಲಿ ಏಕೋಭಾವನೆಯನ್ನು ಮೂಡಿಸಿಕೊಳ್ಳುವ ಮೂಲಕ ಸೌಹಾರ್ದ ಸಾಮರಸ್ಯ ಮೂಡಿಸಲು ಯತ್ನಿಸಬೇಕೇ ವಿನಃ ವೈರ ಮನೋಭಾವನೆಯನ್ನು ಬಿತ್ತುವದಲ್ಲ. ಅಮೂಲ್ಯವಾದ ಜೀವನವನ್ನು ಕಸಿದುಕೊಂಡು ಬಿಟ್ಟರೆ, ಧರ್ಮ ಮಾರ್ಗದಲ್ಲಿ ನಡೆದಂತೆ ಅಲ್ಲ; ಬದಲಾಗಿ ಅದು ರಾಕ್ಷಸೀ ಕೃತ್ಯವಾಗುತ್ತದೆ. ಅದಕ್ಕೆ ಬಸವಣ್ಣ
ದಯವಿಲ್ಲದ ಧರ್ಮ ಅದಾವುದಯ್ಯಾ…
ಎಂದು ಕೇಳಿದ್ದಾರೆ. ದಯವಿಟ್ಟುಕೊಂಡು ಮಾನವೀಯ ನೆಲೆಯಲ್ಲಿ ಚಿಂತನೆ ಮಾಡುತ್ತಲೇ ಮಾನವರಾಗಿ ಬದುಕೋಣ.

Previous articleಸಾಲ ನೀಡುವ ಬ್ಲೇಡ್ಆ್ಯಪ್‌ಗಳ ನಿಗ್ರಹ ಅಗತ್ಯ
Next articleಎಚ್ಚರ! ಮಕ್ಕಳಿಗೆ ಬೈಕ್ ನೀಡುವ ಮುನ್ನ