ಸತ್ಯದ ಪಥದಲ್ಲಿ ಸಾಗಿದ ಮಾರ್ಗಪಥಿಕ

0
16

ಹಿರಣ್ಮಯೇನ ಪಾತ್ರೇಣ ಸತ್ಯಸ್ಯ ಪಿಹಿತಂ ಮುಖಂ|
ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ||

ಸತ್ಯವೂ ಚಿನ್ನದ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಆ ಮುಚ್ಚಳವನ್ನು ತೆಗೆದು ಸತ್ಯಧರ್ಮದ ದರ್ಶನ ಮಾಡಿಕೋ ಎಂದು ಪ್ರಾಚೀನ ಮುನಿಗಳು ಉಪದೇಶಿಸಿದ್ದಾರೆ. ಸತ್ಯಸೂರ್ಯನ ದರ್ಶನಕ್ಕೆ ಚಿನ್ನದ ಮುಚ್ಚಳ ವ್ಯವಧಾನವನ್ನು ಒಡ್ಡಿದೆ. ಅಂದರೆ ಭೌತಿಕ ಸಂಪತ್ತಿನ ಬೆನ್ನು ಹತ್ತಿದರೆ ಸತ್ಯಧರ್ಮದ ದರ್ಶನವಾಗುವದಿಲ್ಲ. ಅದನ್ನೆಲ್ಲ ಬದಿಗಿರಿಸಿದರೆ ಸತ್ಯದ ಧರ್ಮದರ್ಶನವಾಗುತ್ತದೆ. ಸತ್ಯವೆಂದರೆ ಯಥಾರ್ಥ ವಸ್ತು. ತ್ರಿಕಾಲಾಭಾಧಿತವಾದ ವಸ್ತು. ಶಿವ, ಪರಶಿವ, ಮಂಗಲಮಯ ಶಿವನ ದರ್ಶನಕ್ಕೆ ಕಾರಣವಾದುದು ಧರ್ಮ, ಧರ್ಮಮಾರ್ಗವನ್ನು ಭಾರತೀಯ ಸಂತರು ಶರಣರು ಶಿವಯೋಗಿಗಳು ತಮ್ಮ ಅನುಭೂತಿಯಲ್ಲಿ ತೋರಿಸಿದರು. ಧಮಾಛರಣೆಯ ಪರಿಯನ್ನು ಪರಿಚಯಿಸಿಕೊಟ್ಟರು. ಕಾಲ ಕಾಲಕ್ಕೆ ಅನೇಕ ಪುಣ್ಯಾಥ್ಮರು ಪ್ರದಾರ್ಭವಿಸಿ ಧರ್ಮೋದ್ಧಾರ ಗೈದಿದ್ದಾರೆ.
ವೀರಶೈವ ನಿರ್ಣಯ ಪರಮಾವತಾರಿಗಳು ಸಜಲರ ಲೇಸ ಬಯಸಿದವರೂ ದಯವೇ ಧರ್ಮದ ಮೂಲವೆಂದವರು ಆಯುತ ಸ್ವಾಯತ ಸನ್ನಿಹಿತದಲ್ಲಿ ಪೂರ್ವಾಚಾರಿ ಗುರುಸ್ಥಲ, ಲಿಂಗಸ್ಥಲ ಪ್ರಸಾದಿಸ್ಥಲಗಳೆಂಬ ಚತುರ್ವಿಧ ಸಾರಾಯ ಸಂಪತ್ತಿಗೆ ಕಾರಣಕರ್ತರೂ ಭಕ್ತಿಸ್ಥಲದ ಭಂಡಾರಿಗಳಾದ ಬಸವಣ್ಣನವರು ಮರ್ತ್ಯಲೋಕವನ್ನು ಉದ್ಧರಿಸಬಂದವರು. ವೀರಶೈವ ಸಿದ್ಧಾಂತವನ್ನು ಪುನಃ ಶೈವತ್ವವನ್ನು ಸ್ಥಿರಗೊಳಿಸಿದರು. ಅವರು ಶಿವಭಕ್ತಿಯನ್ನು ಹುಲುಸಾಗಿ ಏಕದೇವೋಪಾಸನೆಯನ್ನು ತಿಳಿಸಿ ಮಾನವ ಕುಲಕ್ಕೆ ಮಹದುಪಕಾರವನ್ನು ಮಾಡಿದವರು. ತನ್ಮೂಲಕ ಜಾತಿ ಸಂಕೋಲೆಯನ್ನು ಹರಿದೊಗೆದವರು.
ಸಾಮಾನ್ಯರಲ್ಲಿ ಸಾಮಾನ್ಯರಾಗಿಯೇ ನಡೆದವರು. ವಿಶೇಷವಾದ ವೀರಶೈವತ್ವನ್ನು ಮೀರಿ ನಿರಾಭಾರಿ ವೀರಶೈವ ಸನ್ಮಾರ್ಗ ಪಿಡಿದು ಆಚರಣೆಗೆ ತಂದುಕೊಂಡವರು. ಅಂತೆಯೇ ಅವರು ನಿತ್ಯಮುಕ್ತರು. ಇಂಥವರು ಲಿಂಗಾಂಗ ಸಾಮರಸ್ಯ(ಶಿವಯೋಗ)ವನ್ನು ಸಾಧಿಸುವ ಬಗೆಯನ್ನು ಹಾಗೂ ಸಿದ್ಧಿಯನ್ನು ಪ್ರತಿಪಾದಿಸಿದವರಾಗಿದ್ದಾರೆ. ಇಂಥವರ ಬಾಳು ಬದುಕಿದ ದಾರಿ ನಮಗೆ ಎಂದೆಂದಿಗೂ ಮಾದರಿಯಾಗಬೇಕು.

Previous articleರೈತರ ಜೀವನಾಡಿ ಎತ್ತುಗಳನ್ನು ಪೂಜಿಸುವ ಹಬ್ಬ: “ಮಣ್ಣೆತ್ತಿನ ಅಮವಾಸ್ಯೆ”
Next articleಸಾಮೂಹಿಕ ಶಕ್ತಿ, ಪ್ರತಿ ಸವಾಲನ್ನು ಪರಿಹರಿಸುತ್ತದೆ