ಬಾಗಲಕೋಟೆ(ಇಳಕಲ್): ಸಿಡಿಲು ಬಡಿದು ಮಹಿಳೆಯೋರ್ವಳು ಮೃತಪಟ್ಟ ಘಟನೆ ಇಳಕಲ್ ತಾಲೂಕಿನ ಬೆನಕನಡೋಣಿ ಗ್ರಾಮದ ನಡೆದಿದೆ.
ಬೂದಿಹಾಳ ಎಸ್.ಕೆ ಗ್ರಾಮದ ವಿಜಯಲಕ್ಷ್ಮಿ ನಾಗಪ್ಪ ಹೆರಕಲ್(33) ಎಂಬಾಕೆಯೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮಹಿಳೆ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಸಿಡಿಲಿನ ಹೊಡೆತಕ್ಕೆ ಸಿಲುಕಿದ್ದಾಳೆ ಎಂದು ತಿಳಿದು ಬಂದಿದೆ. ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.