SK Home Ad
Home ಸುದ್ದಿ ದೀಪತೂನ್‌ ಸ್ತಂಭದಲ್ಲಿ ಯಶಸ್ವಿ ದೀಪೋತ್ಸವ; ಭಕ್ತರ ಭಾವುಕತೆಯಲ್ಲಿ ಪೂಜೆ ಸಲ್ಲಿಕೆ  

ದೀಪತೂನ್‌ ಸ್ತಂಭದಲ್ಲಿ ಯಶಸ್ವಿ ದೀಪೋತ್ಸವ; ಭಕ್ತರ ಭಾವುಕತೆಯಲ್ಲಿ ಪೂಜೆ ಸಲ್ಲಿಕೆ  

0
4

ಮಧುರೈ: ತಮಿಳುನಾಡಿನ ಮಧುರೈ ನಲ್ಲಿರುವ ತಿರುಪ್ಪಕುಂದ್ರಂ ಬೆಟ್ಟದ ವಿವಾದಿತ ದೀಪತೂನ್‌ ಸ್ತಂಭದಲ್ಲಿ ಕಾರ್ತಿಕ್‌ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ  ತರಾಟೆಗೆ ತೆಗೆದುಕೊಂಡ ಬಳಿಕ, ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ, ತಿರುಕುಂಡ್ರಮ್‌ ಬೆಟ್ಟದಲ್ಲಿ ದೀಪ ಬೆಳಗಿಸಲಾಯಿತು. ಬಹುದಿನ ನಂತರ ದೀಪ ಬೆಳಗಿಸಿದ್ದಕ್ಕೆ ಭಕ್ತರಲ್ಲಿನ  ಸಂತಸ ಕಣ್ಣಿರಿನಲ್ಲಿ ಕಾಣಿಸಿದೆ, ಬಹಳ ಹರ್ಷೊಲ್ಲಾಸದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.

ತಿರುಪ್ಪಕುಂದ್ರಂ ಬೆಟ್ಟದಲ್ಲಿ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾ ಇರುವುದರಿಂದ ಇಂದು 100ಕ್ಕೂ ಹೆಚ್ಚು ಮುಸ್ಲಿಮರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸ್ಥಳೀಯರು ಸೇರಿದಂತೆ ಕೇರಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಪುರುಷರು, ಮಹಿಳೆಯರು ಮತ್ತು ಯುವಕರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಇವತ್ತು ದೀಪೊತ್ಸವ ಇರುವುದಕ್ಕೆ  ಅಲ್ಲಿ  ಗಲಾಟೆಯಾಗದಂತೆ ತಡೆಯಲು ಸಿಆರ್‌ ಪಿಎಫ್‌ ಭದ್ರತಾ ವ್ಯವಸ್ಥೆಯನ್ನು ಬೆಳ್ಳಗೆಯಿಂದ ಏರ್ಪಡಿಸಲಾಗಿತ್ತು.

ಸಂಜೆ ದೀಪೋತ್ಸವ ನಡೆಯುವ ಸಂದರ್ಭದಲ್ಲಿ ಭಕ್ತರು ಭಾವುಕರಾಗಿ ಪೂಜೆ ಸಲ್ಲಿಸಿದರು. ಇನ್ನು ಹೆಚ್ಚು ಹೆಚ್ಚು ಜನ ಘೋಷಣೆಯನ್ನು ಕೂಗುವುದರ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.  ಬೆಳ್ಳಗೆಯಿಂದ ಭಕ್ತರು ತಿರುಪ್ಪಕುಂದ್ರಂ ಬೆಟ್ಟದ ದೇವಸ್ತಾನಕ್ಕೆ ದೀಪ, ತುಪ್ಪ,ಎಣ್ಣೆ ತೆಗೆದುಕೊಂಡು ಹೋಗಿದ್ದಾರೆ.

ಈ ಮೂಲಕ ತಮಿಳುನಾಡಿನ ಜನರು ಸುಪ್ರೀಂ ಕೊರ್ಟ್ ನ ನಿರ್ಧಾರಕ್ಕೆ ಜನರು ಸಂತಸದಿಂದ ಸ್ವಾಗತಿಸಿದ್ದಾರೆ.