ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕ್ಷೇತ್ರದಲ್ಲಿ ಗೂಗಲ್ (Google DeepMind) ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ತನ್ನ ಹೊಸ ತಲೆಮಾರಿನ ಅತ್ಯುನ್ನತ ತಾರ್ಕಿಕ ಹಾಗೂ ಶಕ್ತಿಶಾಲಿ ಮಾದರಿಯಾದ ‘ಜೆಮಿನಿ 4 ಆರ್ಗಾನ್’ (Gemini 4 Argon) ಅನ್ನು ಅಧಿಕೃತವಾಗಿ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿದೆ.
ಕ್ಲಿಷ್ಟಕರವಾದ ನೈಜ-ಪ್ರಪಂಚದ ಸಮಸ್ಯೆಗಳನ್ನು ಬಗೆಹರಿಸಲು ಈ ಹೊಸ ಮಾಡರಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹೊಸ ಮಾದರಿಯಲ್ಲಿ ಪ್ರಮುಖವಾಗಿ 1 ಮಿಲಿಯನ್ ಟೋಕನ್ ಸಾಮರ್ಥ್ಯ ಹೋಂದಿದ್ದು ಇದು ಬೃಹತ್ ಪ್ರಮಾಣದ ದತ್ತಾಂಶಗಳನ್ನು (Data) ಗ್ರಹಿಸುವ 1 ಮಿಲಿಯನ್ ಟೋಕನ್ ಸೌಲಭ್ಯವನ್ನು ಹೊಂದಿದೆ. ಇದರಿಂದ ನೂರಾರು ಪುಟಗಳ ದಾಖಲೆಗಳು, ದೊಡ್ಡ ಕೋಡ್ಗಳು ಮತ್ತು ದೀರ್ಘವಾದ ವೀಡಿಯೊಗಳನ್ನು ಏಕಕಾಲದಲ್ಲಿ ವಿಶ್ಲೇಷಿಸುವುದು ಸುಲಭವಾಗಿದೆ.
ಇನ್ನು ಕೋಡಿಂಗ್ ಮತ್ತು ಎಂಜಿನಿಯರಿಂಗ್ ಕ್ಷೇತ್ರಕ್ಕೆದಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ನಲ್ಲಿ ದೊಡ್ಡ ಕೋಡ್ಗಳನ್ನು ಆಪ್ಟಿಮೈಸ್ ಮಾಡುವುದು ಮತ್ತು ಬಗ್ಗಳನ್ನು ಸ್ವಯಂಚಾಲಿತವಾಗಿ ಸರಿಪಡಿಸುವಲ್ಲಿ (Vulnerability Patching) ಇದು ಅಭೂತಪೂರ್ವ ಯಶಸ್ಸು ಕಂಡಿದೆ.
ಉದ್ಯಮ ಮತ್ತು ಸೈಬರ್ ಭದ್ರತೆ ವಿಭಾಗದಲ್ಲಿ ಹಣಕಾಸು (Finance), ಕಾನೂನು (Legal) ಮತ್ತು ತೆರಿಗೆ ವಿಭಾಗಗಳ ಸಂಕೀರ್ಣ ಲೆಕ್ಕಾಚಾರಗಳಲ್ಲಿ ಅತ್ಯಂತ ನಿಖರವಾದ ಫಲಿತಾಂಶ ನೀಡುತ್ತದೆ. ಜೊತೆಗೆ, ಸೈಬರ್ ಬೆದರಿಕೆಗಳನ್ನು ಮುಂಚಿತವಾಗಿ ಪತ್ತೆಹಚ್ಚುವಲ್ಲಿ ಸೈಬರ್ ರಕ್ಷಕರಿಗೆ ಇದು ಪ್ರಮುಖ ಅಸ್ತ್ರವಾಗಿದೆ.
ರೋಬೋಟಿಕ್ಸ್ ಮತ್ತು ಭೌತಿಕ ತಾರ್ಕಿಕತೆಯ ಹೊಸ ರೂಪ ಪಡೆದು ಕೇವಲ ಪಠ್ಯ ಅಥವಾ ಸಾಫ್ಟ್ವೇರ್ ಮಾತ್ರವಲ್ಲದೆ, 3D ಪರಿಸರದಲ್ಲಿ ಪ್ರಾದೇಶಿಕ ಹಾಗೂ ಭೌತಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ರೋಬೋಟಿಕ್ಸ್ ಕ್ಷೇತ್ರದಲ್ಲೂ ಇದು ಹೊಸ ಕ್ರಾಂತಿ ಸೃಷ್ಟಿಸುತ್ತಿದೆ ಎನ್ನಲಾಗಿದೆ.
ಪ್ರಸ್ತುತ ಈ ಅತ್ಯಾಧುನಿಕ ತಂತ್ರಜ್ಞಾನವು ಡೆವಲಪರ್ಗಳು, ಉದ್ಯಮ ಸಂಸ್ಥೆಗಳು ಮತ್ತು ಗೂಗಲ್ ಎಐ (Google AI) ಬಳಕೆದಾರರಿಗೆ ಲಭ್ಯವಾಗಿದ್ದು, ತಂತ್ರಜ್ಞಾನ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.
- ಆಲಮಟ್ಟಿ ಬಳಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ: ಯಲಗೂರ ಕ್ರಾಸ್ನಲ್ಲಿ ಮತ್ತೆ ರಾಷ್ಟ್ರೀಯ ಹೆದ್ದಾರಿ ಬಂದ್
- ಸ್ಟಿಂಗ್ ಆಪರೇಷನ್: ಸಿಎಂ ಡಿಕೆಗೆ ಬ್ರೈನ್ ಮ್ಯಾಪಿಂಗ್ ಮಾಡಲಿ – C. T ರವಿ
- AIನ ಹೊಸ ಅಧ್ಯಾಯ: ಅತ್ಯಾಧುನಿಕ ‘ಜೆಮಿನಿ 4 ಆರ್ಗಾನ್’ ಬಿಡುಗಡೆ!
- ಬರದಿಂದ ರಾಜ್ಯಕ್ಕೆ ಭಾರಿ ನಷ್ಟ: ಅಂತಿಮ ಮೆಮೊರಾಂಡಮ್ ಸಿದ್ಧಪಡಿಸುತ್ತಿರುವ ಸರ್ಕಾರ
- ಲಕ್ಷ್ಮೇಶ್ವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ: 85 ಲಕ್ಷ ರೂ.ಗೂ ಅಧಿಕ ನಷ್ಟ






















