SK Home Ad
Home ಸಿನಿ ಮಿಲ್ಸ್ BBK13: ದೊಡ್ಮನೆಯಲ್ಲಿ ‘ಕ್ಯಾಪ್ಟನ್’ ತಾಂಡವ್ ರಾಮ್ ಅಬ್ಬರ, ಸ್ಪರ್ಧಿಗಳ ವಿರುದ್ಧ ಆರೋಪಗಳ ಸುರಿಮಳೆ!

BBK13: ದೊಡ್ಮನೆಯಲ್ಲಿ ‘ಕ್ಯಾಪ್ಟನ್’ ತಾಂಡವ್ ರಾಮ್ ಅಬ್ಬರ, ಸ್ಪರ್ಧಿಗಳ ವಿರುದ್ಧ ಆರೋಪಗಳ ಸುರಿಮಳೆ!

0
11

ಬೆಂಗಳೂರು: ಬಿಗ್ ಬಾಸ್ ಕನ್ನಡದ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಮುಖವಾಡ, ಸ್ವಾರ್ಥ ಹಾಗೂ ನೈಜ ಸ್ವರೂಪದ ಸಂಘರ್ಷ ತೀವ್ರಗೊಂಡಿದೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಪ್ರೊಮೋದಲ್ಲಿ ಬಿಗ್‌ ಬಾಸ್‌ನ ಹೊಸ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಿರುವ ತಾಂಡವ್‌ ರಾಮ್, ಮನೆಯ ಸಹ-ಸ್ಪರ್ಧಿಗಳ ವಿರುದ್ಧ ನೇರ ವಾಗ್ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಮಾಡ್ರನ್ ಮಹಾಕವಿ ಮಂಜ ಹಾಗೂ ಲಿಖಿತ್ ಗೊಂದಿ ಗೊಂದಲದ ನಿರ್ಧಾರದಿಂದಾಗಿ ನಾಲ್ಕನೇ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನ್ನು ಬಿಗ್ ಬಾಸ್ ಸಂಪೂರ್ಣವಾಗಿ ರದ್ದುಗೊಳಿಸಿದ್ದರು. ಹೀಗಾಗಿ ಮನೆಯಲ್ಲಿ ಹೊಸ ನಾಯಕತ್ವದ ಗೊಂದಲ ಉಂಟಾದಾಗ, ದೊಡ್ಮನೆಯ ನೂತನ ಕ್ಯಾಪ್ಟನ್ ಆಗಿ ತಾಂಡವ್ ರಾಮ್ ಅಧಿಕಾರ ವಹಿಸಿಕೊಂಡಿದ್ದಾರೆ. ಕ್ಯಾಪ್ಟನ್ ಪಟ್ಟಕ್ಕೇರುತ್ತಿದ್ದಂತೆಯೇ ತಾಂಡವ್ ತಮ್ಮ ಕಟ್ಟುನಿಟ್ಟಿನ ಆಟವನ್ನು ಪ್ರಾರಂಭಿಸಿದ್ದಾರೆ.

ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್ ಒಂದರಲ್ಲಿ ವಿವಿಧ ಹೇಳಿಕೆಗಳಿದ್ದ ಬೋರ್ಡ್‌ಗಳನ್ನು ನೀಡಲಾಗಿತ್ತು. ಇದನ್ನು ಬಳಸಿಕೊಂಡ ತಾಂಡವ್ ರಾಮ್, ಜಗದೀಶ್ ಜಗ್ಗಿ ವಿರುದ್ಧ “ಇವರು ಬೇರೆಯವರ ನೆರಳಿನಲ್ಲಿ ಬದುಕುತ್ತಿದ್ದಾರೆ” ಎಂದು ಆರೋಪಿಸಿದರು. ಇನ್ನು ಸೌಂದರ್ಯ ಶೆಟ್ಟಿ ಅವರಿಗೆ “ಮುಖವಾಡ ಧರಿಸಿದ ವ್ಯಕ್ತಿ” ಎಂಬ ಬೋರ್ಡ್ ನೀಡಿ, “ನನ್ನೊಂದಿಗೆ ಚೆನ್ನಾಗಿದ್ದುಕೊಂಡೇ ನನ್ನ ಅವಕಾಶಗಳನ್ನು ಕಿತ್ತುಕೊಂಡರು” ಎಂದು ಅಸಮಾಧಾನ ಹೊರಹಾಕಿದರು.

ಇಷ್ಟಕ್ಕೇ ನಿಲ್ಲದೆ ಆಸಿಯಾ ಫಿರ್ದೋಸ್ ಮೇಲೆ ವಾಗ್ದಾಳಿ ನಡೆಸಿದ ತಾಂಡವ್, “ಆಸಿಯಾ ಕೇವಲ ಟಾಸ್ಕ್‌ಗಳಲ್ಲಿ ಸಹಾಯ ಪಡೆಯಲು ಸ್ನೇಹ ಬಾಂಧವ್ಯ ಬೆಳೆಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು. ಈ ಆರೋಪವನ್ನು ತಕ್ಷಣವೇ ತಳ್ಳಿಹಾಕಿದ ಆಸಿಯಾ, “ನನ್ನ ವ್ಯಕ್ತಿತ್ವವನ್ನು ಇಲ್ಲಿ ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ. ನಾನು ಶೇಕಡಾ 1ರಷ್ಟೂ ಇದನ್ನು ಒಪ್ಪುವುದಿಲ್ಲ” ಎಂದು ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.