Home Advertisement
Home ತಾಜಾ ಸುದ್ದಿ ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ: ಗೃಹ ಸಚಿವರಿಗೆ ಸಿದ್ದರಾಮಯ್ಯ ಸವಾಲು

ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ: ಗೃಹ ಸಚಿವರಿಗೆ ಸಿದ್ದರಾಮಯ್ಯ ಸವಾಲು

0
129
ಸಿದ್ದರಾಮಯ್ಯ

ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ಸದನದಲ್ಲಿ ಸಚಿವ ಅಶ್ವಥ್ ನಾರಾಯಣ ಹೇಳಿಕೆ ಗುಡುಗಿದ ಸಿದ್ದರಾಮಯ್ಯ, ಯಾವ ಧರ್ಮವೂ ಕೂಡ ಹೊಡೆಯೋಕೆ, ಬಡಿಯೋಕೆ ಹೇಳುವುದಿಲ್ಲ, ಇದು ಬೌದ್ಧಿಕ ದಿವಾಳಿತನ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಆಡು ಭಾಷೆಯಲ್ಲಿ ಅಶ್ವತ್ ನಾರಾಯಣ ಇದನ್ನು ಹೇಳಿದ್ದಾರೆ. ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ ಎಂದರು.
ಜ್ಞಾನೇಂದ್ರ ಹೇಳಿಕೆಗೆ ಮುಗಿಬಿದ್ದ ಕಾಂಗ್ರೆಸ್ ಸದಸ್ಯರು, ಗೃಹ ಸಚಿವರು ದುರ್ಬಲರಾಗಿದ್ದಾರೆ ಎಂದರು. ಮಧ್ಯಪ್ರವೇಶಿಸಿದ ಆರಗ ಜ್ಞಾನೇಂದ್ರ, ನಾನು ಚಾಲೆಂಜ್ ಮಾಡುತ್ತೇನೆ, ನಿಮಗಿಂತ ಆಡಳಿತ ಚೆನ್ನಾಗಿ ಮಾಡಿದ್ದೇನೆ ಚರ್ಚೆ ಮಾಡೋಣ ಎಂದರು.

Previous articleಗಾಣಿಗ ನಿಗಮ ಮಂಡಳಿ ಸ್ಥಾಪನೆಗೆ ಹರ್ಷ
Next articleಕಾಡಾನೆ ದಾಳಿ: ತೆಂಗು, ಮಾವಿನ ಮರ ನಾಶ