SK Home Ad
Home ಸಿನಿ ಮಿಲ್ಸ್ ನಾಲಿಗೆ ಹರಿಬಿಟ್ಟ ಸೌಂದರ್ಯಾ: ಅಡುಗೆ ಮನೆಯಲ್ಲಿ ಬ್ರಶ್ ಮಾಡಿದ್ದನ್ನು ಪ್ರಶ್ನಿಸಿದ ವೈಷ್ಣವಿಗೆ ಬಾಡಿ ಶೇಮಿಂಗ್!

ನಾಲಿಗೆ ಹರಿಬಿಟ್ಟ ಸೌಂದರ್ಯಾ: ಅಡುಗೆ ಮನೆಯಲ್ಲಿ ಬ್ರಶ್ ಮಾಡಿದ್ದನ್ನು ಪ್ರಶ್ನಿಸಿದ ವೈಷ್ಣವಿಗೆ ಬಾಡಿ ಶೇಮಿಂಗ್!

0
24

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ನಿನ್ನೇಯ ಸಂಚಿಕೆಯಲ್ಲಿ ಸ್ಪರ್ಧಿಗಳಾದ ಸೌಂದರ್ಯಾ ಶೆಟ್ಟಿ ಮತ್ತು ವೈಷ್ಣವಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜೈಲು ಶಿಕ್ಷೆ ಅನುಭವಿಸುತ್ತಿರುವ ಸೌಂದರ್ಯಾ ಶೆಟ್ಟಿ, ನಿತ್ಯಕರ್ಮಕ್ಕಾಗಿ ಹೊರಬಂದಾಗ ಅಡುಗೆ ಮನೆಯಲ್ಲೇ ಹಲ್ಲು ಉಜ್ಜಲು ತೊಡಗಿದ್ರು. ಇದನ್ನು ಗಮನಿಸಿದ ವೈಷ್ಣವಿ, “ಎಲ್ಲರೂ ಊಟ ಮಾಡುವ ಅಡುಗೆ ಮನೆಯಲ್ಲಿ ಬ್ರಶ್ ಮಾಡಬೇಡಿ, ಇದು ಅಸಹ್ಯವಾಗಿ ಕಾಣಿಸುತ್ತದೆ” ಎಂದು ಮನವಿ ಮಾಡಿದ್ದಾರೆ.

ವೈಷ್ಣವಿ ಈ ಮಾತಿನಿಂದ ಕೋಪಗೊಂಡ ಸೌಂದರ್ಯಾ ಶೆಟ್ಟಿ, “ಅಸಹ್ಯ ನಿನ್ನ ಮುಖ” ಎಂದು ವ್ಯಕ್ತಿಗತ ನಿಂದನೆಗೆ ಇಳಿದಿದ್ದಾರೆ. “ಅಡುಗೆ ಮನೆಯಲ್ಲಿ ಬ್ರಶ್ ಮಾಡಬೇಡ ಎಂದು ಹೇಳಲು ನೀನ್ಯಾರು? ಇದು ನಿನ್ನ ಪರ್ಸನಲ್ ಪ್ರಾಪರ್ಟಿ ಅಲ್ಲ. ಮೇಲಿಂದ ಕೆಳಗೆ ನೀನೇ ಗಲೀಜು, ಬಾಯಿ ಮುಚ್ಚಿಕೊಂಡು ಹೋಗು” ಎಂದು ಏಕವಚನದಲ್ಲೇ ಕೀಳಾಗಿ ಮಾತನಾಡಿದ್ದಾರೆ.

ಅಡುಗೆ ಮನೆ ಎಲ್ಲರಿಗೂ ಸೇರಿದ್ದು, ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬ ಸ್ಪರ್ಧಿಯ ಕರ್ತವ್ಯ ಎಂದು ವೈಷ್ಣವಿ ಸೌಜನ್ಯದಿಂದಲೇ ಸಮರ್ಥಿಸಿಕೊಂಡರೂ, ಸೌಂದರ್ಯಾ ತಮ್ಮ ಗಡಸು ವರ್ತನೆಯನ್ನು ಮುಂದುವರಿಸಿದ್ರು. ಈ ಮೊದಲು ಸ್ಪರ್ಧಿ ಮಂಜು ಕೂಡ ಮಾತು ತಪ್ಪಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಸೌಂದರ್ಯಾ ಶೆಟ್ಟಿ ಈ ಬಾಡಿ ಶೇಮಿಂಗ್ ಮತ್ತು ಮಿತಿಮೀರಿದ ಪದಬಳಕೆಯ ನಡವಳಿಕೆಗೆ ಕಿಚ್ಚ ಸುದೀಪ್ ವಾರಾಂತ್ಯದ ‘ಪಂಚಾಯಿತಿ’ಯಲ್ಲಿ ಹೇಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾಯುತ್ತಿದ್ದಾರೆ.