SK Home Ad
Home ನಮ್ಮ ಜಿಲ್ಲೆ ಬೆಂಗಳೂರು Bigg Boss Kannada Season 13: ಕಿಚ್ಚನ ಜೊತೆ ಶುರುವಾಗಲಿದೆ ಹೊಸ ಆಟ; ಇಂದು ಸಂಜೆ...

Bigg Boss Kannada Season 13: ಕಿಚ್ಚನ ಜೊತೆ ಶುರುವಾಗಲಿದೆ ಹೊಸ ಆಟ; ಇಂದು ಸಂಜೆ ಗ್ರ್ಯಾಂಡ್‌ ಓಪನಿಂಗ್‌

0
31

ಬೆಂಗಳೂರು: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ‘ಬಿಗ್‌ ಬಾಸ್ ಕನ್ನಡ’ದ 13ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಬಹುನಿರೀಕ್ಷಿತ ‘ಬಿಗ್‌ ಬಾಸ್ ಕನ್ನಡ ಸೀಸನ್‌ 13’ ಇಂದು (ಸೆ. 6) ಅದ್ಧೂರಿಯಾಗಿ ಆರಂಭವಾಗಲಿದೆ. ನಟ ಕಿಚ್ಚ ಸುದೀಪ್‌ ಮತ್ತೊಮ್ಮೆ ನಿರೂಪಕರಾಗಿ ದೊಡ್ಮನೆಗೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದ್ದಾರೆ.

ಈ ಬಾರಿ ಬಿಗ್‌ ಬಾಸ್‌ ಮನೆ ಫ್ಲೈಟ್‌ ಥೀಮ್‌ನಲ್ಲಿ ಸಿದ್ಧಗೊಂಡಿದ್ದು, ಕಾರ್ಯಕ್ರಮದಲ್ಲಿ ಹಲವು ಹೊಸ ಪ್ರಯೋಗಗಳನ್ನು ಪರಿಚಯಿಸಲಾಗುತ್ತಿದೆ. ಸಾಮಾನ್ಯ ಜನರಿಗೂ ಸ್ಪರ್ಧಿಯಾಗಿ ಅವಕಾಶ ನೀಡಿರುವುದು ಈ ಸೀಸನ್‌ನ ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದೆ.

ಸೆ. 6ರಂದು ಸಂಜೆ 7 ಗಂಟೆಯಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಒಟ್ಟು 18 ಮಂದಿ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸುವ ನಿರೀಕ್ಷೆಯಿದ್ದು, ಯಾರೆಲ್ಲ ಈ ಬಾರಿ ಬಿಗ್‌ ಬಾಸ್‌ ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಇನ್ನು ಈ ಬಾರಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಲ್ಲೂ ಹೊಸತನ ತರಲಾಗಿದ್ದು, ‘ಅಗ್ನಿಪರೀಕ್ಷೆ’ ಎಂಬ ವಿಶೇಷ ಹಂತದ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. 60 ಮಂದಿ ಸ್ಪರ್ಧಿಗಳಿಂದ ಆರಂಭವಾದ ಈ ಪ್ರಕ್ರಿಯೆಯಲ್ಲಿ ವಿವಿಧ ಹಂತಗಳ ಮೂಲಕ ಸ್ಪರ್ಧಿಗಳನ್ನು ಫೈನಲ್‌ ಮಾಡಲಾಗುತ್ತಿದೆ.

ಕಿಚ್ಚ ಸುದೀಪ್‌ ಸತತ 13ನೇ ಸೀಸನ್‌ಗೂ ನಿರೂಪಕರಾಗಿ ಮುಂದುವರಿಯುತ್ತಿರುವುದು ಮತ್ತೊಂದು ವಿಶೇಷ. ಹೊಸ ಮನೆ, ಹೊಸ ಸ್ಪರ್ಧಿಗಳು, ಹೊಸ ಟಾಸ್ಕ್‌ಗಳು ಹಾಗೂ ಹೊಸ ತಿರುವುಗಳೊಂದಿಗೆ ಈ ಬಾರಿ ‘ಬಿಗ್‌ ಬಾಸ್‌ ಕನ್ನಡ’ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.