SK Home Ad
Home ಕ್ರೀಡೆ ದುಲೀಪ್ ಟ್ರೋಫಿಯಲ್ಲಿ ಹೊಸ ಇತಿಹಾಸ.. 15ರ ಸೂರ್ಯವಂಶಿಗೆ ನಾಯಕನ ಪಟ್ಟ; ಗಿಲ್ ರೆಕಾರ್ಡ್ ಬ್ರೇಕ್‌!

ದುಲೀಪ್ ಟ್ರೋಫಿಯಲ್ಲಿ ಹೊಸ ಇತಿಹಾಸ.. 15ರ ಸೂರ್ಯವಂಶಿಗೆ ನಾಯಕನ ಪಟ್ಟ; ಗಿಲ್ ರೆಕಾರ್ಡ್ ಬ್ರೇಕ್‌!

0
26

ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ರೆಕಾರ್ಡ್ ಬ್ರೇಕ್ ಮಾಡುತ್ತಲ್ಲೇ ಬಂದ ಅತಿ ಕಿರಿಯ ವಯಸ್ಸಿನ ಆಟಗಾರ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಸೆಂಟ್ರಲ್ ಝೋನ್ ವಿರುದ್ಧದ ಪಂದ್ಯದಲ್ಲಿ 15 ವರ್ಷದ ಯುವ ವೈಭವ್ ಸೂರ್ಯವಂಶಿ ಈಸ್ಟ್ ಝೋನ್ ತಂಡದ ನಾಯಕತ್ವ ವಹಿಸಿಕೊಳ್ಳುವ ಮೂಲಕ ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

ಪಂದ್ಯದ ಮೊದಲ ದಿನ ಆಟದಲ್ಲಿ ನಿಯಮಿತ ನಾಯಕ ಹಾಗೂ ವಿಕೆಟ್ ಕೀಪರ್ ಇಶಾನ ಕಿಶನ್ ಅವರಿಗೆ ಬೌಲಿಂಗ್ ವೇಳೆ ಬಲಗೈನ ಬೆರಳಿಗೆ ತೀವ್ರ ಗಾಯವಾಗಿ ಮೈದಾನದಿಂದ ಹೊರಗೆ ನಡೆಯಬೇಕಾಗಿ ಬಂತು. ಈ ಸಂದರ್ಭದಲ್ಲಿ ಉಪನಾಯಕನಾಗಿರುವ 15 ವರ್ಷದ ವೈಭವ ಸೂರ್ಯವಂಶಿ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡರು. ಇಶಾನ್ ಕಿಶನ್ ಹೊರಗೆ ಉಳಿದ ನಂತರ ಕುಶಾಗ್ರ ವಿಕೆಟ್ ಕಿಪಿಂಗ್, ವೈಭವ ಮೈದಾನದಲ್ಲಿ ನಾಯಕರಾದರು.

ಇನ್ನು ಎಸ್ಎಸ್‌ಎಲ್‌ಸಿ ವಯಸ್ಸಿನ ಯುವಕ, ಅನುಭವಿ ಹಾಗೂ ಅಂತರಾಷ್ಟ್ರೀಯ ಅನುಭವ ಹೊಂದಿರುವ ಮೊಹಮ್ಮದ ಶಮಿ, ಮುಕೇಶ್ ಕುಮಾರ್ ಮತ್ತು ಅಭಿಮನ್ಯು ಈಶ್ವರನ್ ಅವರಂತಹ ಅನುಭವಿ ಆಟಗಾರರನ್ನು ಮುನ್ನೆಡೆಸಿ, ಮುಕೇಶ್ ಅವರ ಬೌಲಿಂಗ್‌ನಲ್ಲಿ LBW Outಗಾಗಿ DRS ಮನವಿ ಮಾಡಿ, ಯಶಸ್ವಿ ತೀರ್ಪು ಪಡೆಯುವ ಮೂಲಕ ತಮ್ಮ ಬುದ್ಧಿಮತ್ತೆಯನ್ನು ಸಾಬೀತುಪಡಿಸಿದರು.

ಗಿಲ್ ದಾಖಲೆ ಬ್ರೇಕ್:
ಭಾರತದ ಕ್ರಿಕೆಟ ಆಟಗಾರ ಶುಭಮನ್ ಗಿಲ್ ತಮ್ಮ 19 ವಯಸ್ಸಿನಲ್ಲಿ 2019-20ರ ದುಲೀಪ್ ಟೋಫ್ರಿ ಟೂರ್ನಿಯಲ್ಲಿ ʼಇಂಡಿಯನ ಬ್ಲೂʼ ತಂಡದ ನಾಯಕತ್ವ ವಹಿಸಿ, 2005-06 ರ ಗೌತಮ್ ಗಂಭೀರ ಅವರ ಹಳೆಯ ದಾಖಲೆ ಮುರಿದರು. ಅದೇ ದಾಖಲೆ ಇಂದು ವೈಭವ ಸೂರ್ಯವಂಶಿ ಬ್ರೇಕ್ ಮಾಡಿದ್ದಾರೆ.