SK Home Ad
Home ಸುದ್ದಿ ದೇಶ ರಾಮಮಂದಿರಕ್ಕೆ ಹೊಸ ಸಿಇಒ: ಅಂತಿಮ ಸುತ್ತಿಗೆ 18 ಜನರ ಆಯ್ಕೆ

ರಾಮಮಂದಿರಕ್ಕೆ ಹೊಸ ಸಿಇಒ: ಅಂತಿಮ ಸುತ್ತಿಗೆ 18 ಜನರ ಆಯ್ಕೆ

0
2

ಅಯೋಧ್ಯೆ: ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಇಒ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, 5,300 ಅಭ್ಯರ್ಥಿಗಳಲ್ಲಿ 18 ಜನರನ್ನು ಅಂತಿಮ ಸುತ್ತಿನ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಅದರಲ್ಲಿ ಎಲ್ಲ ರೀತಿಯಲ್ಲೂ ಸಮರ್ಥರಾದ ಒಬ್ಬರನ್ನು ಮಂಗಳವಾರ, ಬುಧವಾರ ನಡೆಯುವ ಪ್ರಕ್ರಿಯೆಯಲ್ಲಿ ಸಮಿತಿಯು ಆಯ್ಕೆ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆ.ಜನರಲ್ ವಿಷ್ಣುಕಾಂತ ಚತುರ್ವೇದಿ ಹಾಗೂ ಮಾಜಿ ವಿಜ್ಞಾನಿ, ಶಿರಡಿ ಸಾಯಿ ಬಾಬಾ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಸುರೇಶ್ ಹವಾರೆ ಆಯ್ಕೆ ಸಮಿತಿಯಲ್ಲಿದ್ದಾರೆ.

ದೇಣಿಗೆ ಕೇಸ್ ಅ.17ಕ್ಕೆ ಮುಂದಕ್ಕೆ: ಅಯೋಧ್ಯೆಯ ಶ್ರೀರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ ಹಲವಾರು ಅರ್ಜಿಗಳ ವಿಚಾರಣೆಯನ್ನು ಅಗಸ್ಟ್ 17ರಂದು ನಡೆಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿದೆ.

ಸೋಮವಾರದ ವಿಚಾರಣೆಯಲ್ಲಿ ಭಾಗವಹಿಸಬೇಕಿದ್ದ ಉತ್ತರಪ್ರದೇಶ ಸರ್ಕಾರದ ವಕೀಲ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಶ್ವಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿರುವುದರಿಂದ ಈ ದಿನದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ ಮುಂದೂಡಿದೆ.