ಭಕ್ತಾಪರಾಧ ಸಹಿಷ್ಣು ಭಗವಂತ

0
14
PRATHAPPHOTOS.COM

ಸಹನಶೀಲತೆ ಮೈಗೂಡಿಸಿಕೊಂಡು ಈ ಜಗತ್ತಿನಲ್ಲಿರುವುದೇ ದೊಡ್ಡ ಧರ್ಮ. ೩೦ ಧರ್ಮಗಳಲ್ಲಿ ಇದು ಒಂದು ದೊಡ್ಡ ಧರ್ಮ. ಇದಕ್ಕೆ ದೇವರಕ್ಕಿಂತ ಇನ್ಯಾವುದೂ ನಿದರ್ಶನ ಸಿಗುವದಿಲ್ಲ. ಮನುಷ್ಯರು ಅದನ್ನು ಪಾಲಿಸುವುದು ಅಷ್ಟು ಸಲೀಲವಾದ ಕೆಲಸವಲ್ಲ. ಸಹನಶೀಲತೆ ಎಂದರೆ ಮನುಷ್ಯರಿಗೆ ಅಷ್ಟು ಸುಲಭವೇ?
ಮನೆಯಲ್ಲಿ ನಾಲ್ಕು ಜನ ಸದಸ್ಯರಿದ್ದಾಗ ಒಬ್ಬರು ಹೇಳಿದ ಮಾತು ಕೇಳದೇ ಇದ್ದರೆ, ಉಳಿದ ಮೂವರಾದರೂ ಮಾತು ಕೇಳುತ್ತಾರಲ್ಲ ಎಂದು ಸಮಾಧಾನದಿಂದ ಮನುಷ್ಯ ಇರಬಹುದು.
ಜಗತ್ತಿನಲ್ಲಿ ಅನಂತ ಜೀವರಾಶಿಗಳಿಂದ, ಅಸುರರಿಂದ ಸೃಷ್ಟಿಕರ್ತ ದೇವರಿಗೇನೇ ದೇವರಿಗೆ ದ್ರೋಹ ಮತ್ತು ನಿಂದನೆ ಜಾಸ್ತಿ ಇದೆ. ಅಲ್ಲದೇ ದೇವರನ್ನು ಅಲ್ಲಗಳೆವರ ಅವರ ಸಂಖ್ಯೆ ಜಾಸ್ತಿ ಇದೆ .
ಸಜ್ಜನರ ಸಂಖ್ಯೆ ಕಡಿಮೆ ಇದೆ. ಸಜ್ಜನರ ಸಂಖ್ಯೆ ಎಣಿಸಿ ಹೇಳಬೇಕಾಗಿಲ್ಲ ಏಕೆಂದರೆ ವೇದ ಉಪನಿಷತ್ತುಗಳಲ್ಲಿ ಇತಿಹಾಸ ಪುರಾಣಗಳಲ್ಲಿ, ಸ್ವತಃ ಭಗವಂತ ತ್ರಿಕಾಲ ಜ್ಞಾನಿಗಳು ಶ್ರೀಮದ್ ಆಚಾರ್ಯರು ಮತ್ತು ಇದನ್ನು ಮೊದಲೇ ಹೇಳಿದ್ದಾರೆ. ಇನ್ನೂ ದೇವರನ್ನು ನಂಬವರು ಆಸ್ತಿಕರು ಶ್ರದ್ಧೆಯಿಂದ ಇರುವರು, ಆದರೂ ಎಲ್ಲ ವಿಹಿತ ಕರ್ಮವನ್ನು ಮಾಡದೆ, ದೇವರಾಜ್ಞೆ ಉಲ್ಲಂಘನೆ ಮಾಡುತ್ತಾರೆ. ದೇವರು ಇದ್ದಾನೆ ಎಂದು ನಂಬುತ್ತಾರೆ. ಆದರೆ ಶಾಸ್ತ್ರ ಸುಳ್ಳು ಎಂದು ಹೇಳುವುದಿಲ್ಲ ಆದರೆ ಶಾಸ್ತ್ರದಲ್ಲಿ ಹೇಳಿದ್ದನ್ನು ಮಾಡುವದಿಲ್ಲ.
ದೇವರು ಯಾರು, ನಮ್ಮ ದೇಹವನ್ನು ಜಗತ್ತನ್ನು ಜಗತ್ತನ್ನು ಸೃಷ್ಟಿ ಮಾಡಿದವ, ಇಂತಹ ಭಗವಂತ ತಾನು ಹೇಳುವ ಮಾತುಗಳನ್ನು ಕೇಳದೆ, ತಮಗೆ ತಿಳಿದಂತೆ ಜೀವನ ಮಾಡುವ ಜನರನ್ನು ಕಂಡು, ಅದೆಷ್ಟು ಸಹನೆಯಿಂದಿರಬೇಕು.? ಅಂದರೆ ದೇವರಲ್ಲಿ ಸಹನೆ ನಿಸ್ಸೀಮವಾಗಿದೆ ಎಂದರ್ಥ.
ಭಕ್ತ ಅಪರಾಧ ಸಹಿಷ್ಣು. ಅಂದ್ರೆ ನೀಸ್ಸಿಮವಾದ ಸಹನಶೀಲತೆ ಭಗವಂತನಲ್ಲಿದೆ. ಸಹನಶೀಲತೆಯನ್ನು ದೇವರು ಯಾಕೆ ಇಟ್ಟುಕೊಂಡಿದ್ದಾನೆ ಎಂದರೆ, ಇಂದು ಮಾಡಿದ ತಪ್ಪು, ನಾಳೆ ತಿದ್ದಿಕೊಂಡು ಮನುಷ್ಯ ಸುಧಾರಿಸಿಕೊಳ್ಳುತ್ತಾನೆ ಎಂದು ಮತ್ತೆ ಮತ್ತೆ ತಿದ್ದಿಕೊಂಡು ಸರಿಯಾಗಿ ಜೀವನ ಮಾಡುವ ಕ್ರಮವನ್ನು ಅಳವಡಿಸಿಕೊಳ್ಳಲು ಅವಕಾಶ ಕೊಡುತ್ತಾನೆ.
ಸಜ್ಜನರ ಸಹವಾಸವನ್ನು ಕೊಡುತ್ತಾನೆ. ಕ್ರಮವಾಗಿ ನಮ್ಮ ಜೀವನವನ್ನು ಹಂತಹಂತವಾಗಿ ಸುಧಾರಿಸಿಕೊಳ್ಳುವಂತಹ ಅವಕಾಶ ಮಾಡಿಕೊಟ್ಟು ಸದ್ಬುದ್ಧಿಯನ್ನು ಕೊಟ್ಟು, ದೋಷಗಳನ್ನು ಕಳೆದು ನಮ್ಮ ಜೀವನವನ್ನು ಉದ್ಧಾರ ಮಾಡಿಕೊಳ್ಳೋದಕ್ಕೆ ಭಗವಂತ ಪ್ರೇರಣೆ ಮಾಡುತ್ತಾನೆ. ಹಾಗೂ ಸಹನಶೀಲತೆಯನ್ನು ಇಟ್ಟುಕೊಂಡಿದ್ದಾನೆ. ಸ್ವತಃ ತಾನು ಸಹನಶೀಲತೆಯ ನಿಸ್ಸೀಮತೆಯನ್ನು ದೇವರು ತೋರಿಸುತ್ತಾನೆ. ಅದು ಯಾರಿಗೂ ಅಸಾಧ್ಯವಾದ ಮಾತು.

Previous articleಮೌನ ಮುರಿದು ಚುನಾವಣೆಯತ್ತ ನೋಟ ನೆಟ್ಟ ಮೋದಿ ಮಾತು…
Next articleಸದೈವ ಅಟಲ್’​ ಸ್ಮಾರಕಕ್ಕೆ ಪ್ರಧಾನಿಯಿಂದ ಪುಷ್ಪನಮನ