ಸತ್ಸಂಗದಲ್ಲಿ ದೈವ ಸಂಕಲ್ಪ ಮೀರುವ ಶಕ್ತಿ ಇದೆ

0
12

ತೇನವಿನಾ ತೃಣ ನಮಪಿ ಚಲತಿ.. ಇದು ಹಿರಿಯರ ಮಾತು. ನೀನಿಲ್ಲದೇ ಒಂದು ಹುಲ್ಲು ಕಡ್ಡಿ ಅಲುಗಾಡದು. ಇದು ಭಗವಂತನ ಸಂಕಲ್ಪ. ಭಗವಂತನ ಸಂಕಲ್ಪವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಹಾಗೆಂದೆ ಜಗತ್ತು ತನ್ನ ವ್ಯಾಪಾರ ನಡೆಸಿಕೊಂಡು ಬಂದಿದೆ. ಜೀವಿಗಳೆಲ್ಲದಕ್ಕೂ ಹುಟ್ಟು ಇರುವಿಕೆ ಮತ್ತು ಸಾವು ಇವು ಭಗವಂತನ ಸಂಕಲ್ಪಿಸಿದಂತೆ ನಡೆಯುತ್ತದೆ. ಹುಟ್ಟು ಸಾವು ಇವುಗಳ ಮಧ್ಯೆ ಮನುಷ್ಯನಿಗೆ ಮಾತ್ರ ಸಾಧನಾ ಶರೀರವನ್ನು ನೀಡಿದ್ದಾನೆ. ತಾಯಿ ಗರ್ಭದಲ್ಲಿಯೇ ಆಯುಷ್ಯ, ವಿದ್ಯೆ, ಸಂಪತ್ತು, ಕರ್ಮ ಮತ್ತು ಮರಣಗಳನ್ನು ಬರೆದೇ ಕಳಿಸಿರುತ್ತಾನೆ. ನಿಜ ಆದರೆ ಸಾಧನಾ ಶರೀರದಿಂದ ಭಗವಂತನ ಸಂಕಲ್ಪವನ್ನು ಬದಲಿಸಬಹುದು ಎನ್ನುತ್ತಾರೆ ಅನುಭಾವಿಗಳು.
ಅನುಭಾವಿಗಳ ದಾರಿ ಅನುಪಮ ಅದು ಗುರು ರೂಪದಲ್ಲಿ ಕೆಲವರಿಗೆ ಸಿಕ್ಕರೇ ಕೆಲವರಿಗೆ ಬೇರೆ ಯಾವುದೋ ಘಟನೆ ರೂಪದಲ್ಲಿ ಅಂಥದ್ದೊಂದು ಅನುಭವ ಮತ್ತು ಅನುಭಾವ ದೊರಕುತ್ತದೆ. ಅಪೂರ್ವವಾದ ದರ್ಶನ ಹೊಳೆಯುತ್ತದೆ. ಮಿತ ಆಯುಷ್ಯದದ ಸತ್ಯವಾನನಿಗೆ ಪ್ರತಿವ್ರತೆಯಾದ ಸಾವಿತ್ರಿ ಆತನ ಸಾವನ್ನು ಗೆಲ್ಲುತ್ತಾಳೆ. ಸತ್ಸಂಗದಿಂದ ಉತ್ತಮ ಸದ್ಗತಿಯನ್ನು ಪಡೆಯಬಹುದಾಗಿದೆ. ಬುದ್ಧಿ ಉಪಯೋಗಿಸಿ ಕರ್ಮದಲ್ಲಿ ತೊಡಗಿಕೊಂಡರೇ ತನ್ನ ಹಣೆ ಬರಹ ಬದಲಾಯಿಸಬಹುದು ವಯೋವೃದ್ಧರ ತಪೋನಿಷ್ಠರ ಜ್ಞಾನಿಗಳ ಸಂಗ ಮಾಡಿದರೆ ಅವರ ಸೇವೆಯಲ್ಲಿ ನಿರತರಾಗಿ ಅವರ ಕೃಪೆ ಮತ್ತು ಆಶೀರ್ವಾದದಿಂದ ಕೂಡ ನಮ್ಮ ದೈವ ಬದಲಿಸಬಹುದು. ಈ ಕಾರಣಕ್ಕಾಗಿಯೇ ದಾಸರು ನಾ ಮಾಡಿದ ಕರ್ಮ ಬಲವಂತವಾದರೆ ನೀನ್ಯಾಕೋ ನಿನ್ನ ಹಂಗ್ಯಾಕೋ…. ಎಂದಿರುವುದು ಇಲ್ಲಿ ಗಮನಿಸಬಹುದು. ನಾಸ್ತಿಕನಾಗಿದ್ದ ಬಾಲಕ ನರೇಂದ್ರನಿಗೆ ರಾಮಕೃಷ್ಣ ಪರಮಹಂಸರು ಸ್ಪರ್ಶ ಮಾತ್ರದಿಂದಲೇ ಆಶೀರ್ವಾದ ಮಾಡುವ ಮೂಲಕ ಆತನನ್ನು ಜಗತ್ತೇ ಮೆಚ್ಚುವಂಥ ಸ್ವಾಮಿ ವಿವೇಕಾನಂದರನ್ನಾಗಿ ಪರಿವರ್ತಿಸಿದರು.
ಶಂಕರಾಚಾರ್ಯರ ಆಶ್ರಮದಲ್ಲಿ ಸಾನಂದನ ಎಂಬ ಶಿಷ್ಯ ಅವರ ಆಶ್ರಮದಲ್ಲಿ ವೇದಾಭ್ಯಾಸ ಮಾಡುತ್ತಲಿದ್ದ ಮಂದ ಬುದ್ಧಿಯವನಾಗಿದ್ದ, ಶಿಷ್ಯರ ಅಸಡ್ಡೆಗೂ ಒಳಗಾಗಿದ್ದನಾದರೂ ಗುರುಗಳ ಪ್ರೀತಿ ಅವನ ಮೇಲಿತ್ತು. ಒಮ್ಮೆ ಗುರುಗಳು ಪಾಠ ಮಾಡುವಾಗ ಸಾನಂದನ ಬರುವದನ್ನು ಕಾಯುತ್ತಲಿದ್ದರು. ಗುರು ಕೂಗಿದಾಗಿ ಓಡಿ ಗುರುವಿನ ಬಳಿಗೆ ಬರುತ್ತಾನೆ. ಆಗ ಸಾನಂದನಿಗೆ ಉಳಿದ ಶಿಷ್ಯರಿಗೆ ಪಾಠ ಮಾಡುವಂತೆ ಹೇಳುತ್ತಾರೆ. ಏನೂ ಗೊತ್ತಿರದ ಸಾನಂದನ ತಮಗರಿವಿಲ್ಲದಂತೆಯೇ ಪಾಠ ಮಾಡುತ್ತಾನೆ. ಗುರು ಕಾರುಣ್ಯವಿದ್ದರೆ ಏನೆಲ್ಲವೂ ಘಟಿಸುತ್ತದೆ ಎಂಬುದನ್ನು ಇದೇ ಕಾರಣ.

Previous articleಸುಳ್ಳು ಜಾತಿ ಪ್ರಮಾಣಪತ್ರದಿಂದ ಗ್ರಾಪಂಗೆ ಆಯ್ಕೆ: ಮಹಿಳೆಗೆ ಏಳು ವರ್ಷ ಜೈಲು
Next articleಪ್ರಸ್ತುತ ಕಾಲಘಟ್ಟ ಸನಾತನ ಸಂಸ್ಕೃತಿ ಅಳಿವು ಉಳಿವಿನ ಸಂದರ್ಭ