ಮೊಬೈಲ್ ಅತಿ ಬಳಕೆ ಅನಾಹುತಕ್ಕೆ ಕಾರಣ

0
8

ವೈಜ್ಞಾನಿಕ ಯುಗದಲ್ಲಿ ಸಾಕಷ್ಟು ಸಾಧನಗಳನ್ನು ತನ್ನ ಜೀವನಕ್ಕೆ ಉಪಯೋಗಿಯಾಗಿ ಬಳಸುತ್ತಿದ್ದಾನೆ. ಅತ್ಯಾಧುನಿಕ ಕೆಲವು ಸಾಧನಗಳು ಬಳಸಿಕೊಂಡಂತೆ ಸಾಧಕ ಬಾಧಕಗಳನ್ನುಂಟು ಮಾಡುತ್ತವೆ. ಅಂಥ ಸಾಧನಗಳಲ್ಲಿ ಮೊಬೈಲ್ ಕೂಡ ಒಂದು.
ಈಗ ಟಿವಿ ಚಾನಲ್‌ಗಳ ಮೂಲಕ ಸಿನಿಮಾ ನೋಡುವುದು ಆರಂಭವಾಗಿದೆ. ಮೊಬೈಲ್, ಟಿವಿ ಕಂಪ್ಯೂಟರ್‌ಗಳನ್ನು ಬಳಸಿ ಸಣ್ಣ ವಯಸ್ಸಿನಲ್ಲಿಯೇ ಕಣ್ಣಿಗೆ ಆಪತ್ತು ತಂದುಕೊಳ್ಳುತ್ತಾರೆ. ಆದರೆ ಈಗ ಪ್ರತಿಯೊಂದು ಕೆಲಸ ಕಾರ್ಯಗಳು ಅಂತರ್ಜಾಲದಿಂದಲೇ ನಡೆಯುವ ಕಾರಣ ಇಂಥ ಸಾಧನಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ.
ಆದರೆ ಮೊಬೈಲ್‌ಗಳು ಬಂದ ನಂತರ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಲಿದೆ. ಆರು ತಿಂಗಳ ಮಗು ಮೊದಲುಗೊಂಡು ಮೊಬೈಲ್ ಆನ್ ಮಾಡಿ ಮಗುವಿನ ಕೈಯ್ಯಲ್ಲಿ ಕೊಟ್ಟು ಬಿಟ್ಟರೆ ಆಡುತ್ತ ಅಳುವದನ್ನೆ ಮರೆಯುತ್ತದೆ. ಅದನ್ನು ಕೈಗಿತ್ತ ನಂತರದಲ್ಲಿಯೇ ಲಕ್ಷ್ಯವಿಲ್ಲದೇ ತಿಂಡಿ ತಿನ್ನುತ್ತದೆ. ಚಿಕ್ಕ ಕೂಸಿಗೆ ನಾವು ಅದರ ಕಾಡಾಟವನ್ನು ಸಹಿಸಿಕೊಳ್ಳದೇ ಕೈಗೆ ಮೊಬೈಲ್ ಕೊಡುತ್ತಿದ್ದೇವೆ. ಇನ್ನು ತಾರುಣ್ಯಾವಸ್ಥೆಯ ಯುವಕರ ಕೈಗೆ ಮೊಬೈಲ್ ಬಂದನಂತರ ಸಾಮಾಜಿಕ ಜಾಲತಾಣಗಳಲ್ಲಿ ನೋಡಬಾರದ್ದನ್ನೆಲ್ಲಾ ನೋಡಿ ತಮ್ಮ ಭವಿಷಷ್ಯವನ್ನೇ ಹಾಳು ಮಾಡಿಕೊಳ್ಳುತ್ತಲಿದ್ದಾರೆ.
ಯಾವುದೇ ವಸ್ತುವಾಗಲಿ. ಯಾವುದನ್ನು ಎಷ್ಟು ಉಪಯೋಗಿಸಬೇಕು. ಹೇಗೆ ಉಪಯೋಗಿಸಬೇಕು ಎಂಬ ಪರಿಜ್ಞಾನ ಇಟ್ಟುಕೊಂಡರೆ ಜೀವನಕ್ಕೂ ಒಳ್ಳೆಯದು. ಹಾಗಾಗುತ್ತಿಲ್ಲ. ಒಂದು ಅಧ್ಯಯನದ ಪ್ರಕಾರ ಸಾಮಾಜಿಕ ಜಾಲತಾಣದ ಒಂದು ದೃಶ್ಯವನ್ನು ಸ್ಪರ್ಶ ಮಾಡಿದರೆ ಸಾಕು. ಬರೋಬ್ಬರಿ ನಿಮ್ಮನ್ನು ಒಂದು ತಾಸಿಗೂ ಅಧಿಕ ನಿಮ್ಮ ಸಮಯವನ್ನು ತಿಂದು ಬಿಡುತ್ತದೆ. ಇದು ಕೇಡಿಗೆ ಕಾರಣವಾಗುತ್ತದೆ. ಮೊಬೈಲ್ ಉಪಯೋಗದಿಂದ ಮಿದುಳು ಕಾಯಿಲೆ, ನೇತ್ರದೋಷ, ಇತ್ಯಾದಿ ಕಾಯಿಲೆಗಳು ಬರುತ್ತವೆ, ಕಿವಿದೋಷ ಉಂಟಾಗುತ್ತದೆ. ಮುಂತಾದ ವಾಸಿಯಾಗದ ಕಾಯಿಲೆಗಳಿಗೆ ತುತ್ತಾಗಿ ಚಿಕ್ಕವಯಸ್ಸಿನಲ್ಲಿಯೆ ಪ್ರಾಣ ಕಳೆದುಕೊಳ್ಳುವಂತಾಗುತ್ತದೆ.
ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿದರೆ ಯಾವುದೇ ಅಪಾಯವಿರುವದಿಲ್ಲ. ಮೊಬೈಲ್‌ನಲ್ಲಿ ಲೀನವಾದರೆ ಭವಿಷ್ಯ ಮತ್ತು ಮನಃಶಾಂತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಮೊದಲು ಮಕ್ಕಳು ಮೊಬೈಲ್ ವ್ಯಸನಿಕರಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಮಕ್ಕಳಿಗೆ ಮೊಬೈಲ್ ಇಲ್ಲದೇ ಜೀವಿಸುವುದನ್ನು ಕಲಿಸಬೇಕು. ಅದು ಅನಿವಾರ್ಯವಾಗಿಸಬೇಡಿ.

Previous articleರಾತ್ರೋ ರಾತ್ರಿ ರಸ್ತೆ ಮಧ್ಯೆ ನಿರ್ಮಿಸಿದ್ದ ಗುಂಬಜ್ ತೆರವು
Next articleಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಒಂದು ಅಪವಿತ್ರ ಮೈತ್ರಿ