ನೈಜ ತತ್ವ ತಿಳಿದುಕೋ…

0
9

ಅನೇಕ ಸಾವಿರ ಮನುಷ್ಯರಲ್ಲಿ ಒಬ್ಬನು ಮಾತ್ರ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಹಾಗೇ ಪ್ರಯತ್ನ ಪಡುವ ಸಾವಿರ ಜನರಲ್ಲಿ ಒಬ್ಬನು ಮಾತ್ರ ಪರಮಾತ್ಮನನ್ನು ಸರಿಯಾಗಿ ತಿಳಿಯುತ್ತಾನೆ. ಆದ್ದರಿಂದ ಪರಮಾತ್ಮನನ್ನು ತಿಳಿಯಲು ಪ್ರಯತ್ನಿಸುವವರೇ ಬಹಳ ಕಡಿಮೆ. ಅವರಲ್ಲೂ ಸರಿಯಾದ ತಿಳಿಯುವವರು ಮತ್ತೂ ಕಡಿಮೆ. ಆದ್ದರಿಂದ ಪರಮಾತ್ಮನನ್ನು ತಿಳಿಯಲು ಸತತ ಪ್ರಯತ್ನವನ್ನು ಮಾಡಬೇಕು.
ಸರ್ವಥಾ ಕೆಟ್ಟದ್ದನ್ನು ಮಾಡಬೇಡ: ಯಾರು ಪುಣ್ಯ ಕೆಲಸವನ್ನು ಮಾಡುತ್ತಾರೋ, ಅವರ ಹೆಸರು ಸ್ವರ್ಗಲೋಕ ಮತ್ತು ಭೂಲೋಕಗಳನ್ನು ಸ್ಪರ್ಶಿಸುತ್ತದೆ. ಯಾರು ಕೆಟ್ಟ ಕೆಲಸವನ್ನು ಮಾಡುತ್ತಾನೋ, ಅವನ ಅಪಕೀರ್ತಿಯೂ ಕೂಡ ಎಲ್ಲೆಡೆ ವ್ಯಾಪಿಸುತ್ತದೆ. ಅವನ ಅಪಕೀರ್ತಿಯು ಎಲ್ಲಿಯ ತನಕ ಈ ಲೋಕದಲ್ಲಿ ಉಳಿದಿರುತ್ತದೋ ಅಲ್ಲಿಯತನಕ ಅವನು ನೀಚವಾದ ನರಕಲೋಕಗಳಲ್ಲಿ ದುಃಖವನ್ನು ಅನುಭವಿಸುತ್ತಾನೆ.
ಕರ್ತವ್ಯ ನಿರ್ವಹಿಸಿ ಸುಖಿಯಾಗಿರು: ರಾತ್ರಿ ಸುಖವಾಗಿ ಮಲಗಬೇಕೆಂದರೆ ಹಗಲು ಕರ್ತವ್ಯವು ಮಾಡಿ ಮುಗಿಸಬೇಕು. ಮಳೆಗಾಲದಲ್ಲಿ ಸುಖವಾಗಿರಬೇಕೆಂದರೆ ಉಳಿದ ಕಾಲದಲ್ಲಿ ಕರ್ತವ್ಯವನ್ನು ನಿರ್ವಹಿಸಿರಬೇಕು. ವೃದ್ಧಾಪ್ಯದಲ್ಲಿ ಸುಖವಾಗಿರಬೇಕೆಂದರೆ ಯೌವನದಲ್ಲಿ ಕರ್ತವ್ಯವನ್ನು ನಿರ್ವಹಿಸಿರಬೇಕು. ಮರಣದ ಅನಂತರ ಸುಖವಾಗಿರಬೇಕೆಂದರೆ ಬದುಕಿರುವಾಗಲೇ ಕರ್ತವ್ಯಗಳನ್ನು ಪೂರೈಸಿರಬೇಕು.
ರಹಸ್ಯ ತಪ್ಪು ಮಾಡುವವರಿಗೆ ಎಚ್ಚರಿಕೆ: ಶಿಷ್ಯನು ತಪ್ಪು ಮಾಡಿದರೆ ಗುರು ಎನಿಸಿದವನು ಶಿಕ್ಷೆ ನೀಡುತ್ತಾನೆ. ದುಷ್ಟರು ತಪ್ಪು ಮಾಡಿದರೆ ರಾಜನು ಶಿಕ್ಷೆ ನೀಡುತ್ತಾನೆ. ರಹಸ್ಯವಾಗಿ ತಪ್ಪು ಮಾಡಿದರೆ, ಯಮಧರ್ಮ ರಾಜನು ಶಿಕ್ಷೆ ನೀಡುತ್ತಾನೆ. ಆದ್ದರಿಂದ ನಾವು ಮಾಡಿದ ರಹಸ್ಯ ತಪ್ಪುಗಳಿಂದ ನಮಗೆ ಯಾವ ಭಯವೂ ಇಲ್ಲ ಎಂಬ ಭಾವನೆಯನ್ನು ಹೊಂದಿ ಮತ್ತಷ್ಟು ರಹಸ್ಯ ತಪ್ಪುಗಳಲ್ಲಿ ತೊಡಗುವವರಿಗೆ ಇದು ಮಹಾಭಾರತ ನೀಡುವ ಎಚ್ಚರಿಕೆ.

Previous articleಜನತಾ ದರ್ಶನ ಮತ್ತೆ ತಬರನಾಗಿಸದಿರಿ…
Next articleಹಳಿತಪ್ಪಿದ ರೈಲು: ನಾಲ್ವರ ಸಾವು, ಹಲವರಿಗೆ ಗಾಯ