ದೇವರ ಹೆಸರಿನಲ್ಲಿ ಮೋಸ ಸಲ್ಲದು

0
11
PRATHAPPHOTOS.COM

ಜೀವರ ಎಲ್ಲರ ಎಲ್ಲ ಕರ್ಮಗಳು. ಕರ್ಮಗಳ ಫಲ ಆದಂತಹ ಸುಖ ಹಾಗೂ ದುಃಖ ಎಲ್ಲವೂ ಭಗವಂತನ ಅಧೀನವಾಗಿದೆ. ದೇವರಲ್ಲಿ ನಿಸ್ಸೀಮವಾದ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ಅಚಿಂತ್ಯವಾದ ಅದ್ಭುತವಾದ ಭಗವಂತನ ಶಕ್ತಿ ಇದೆ ಎಂಬುದನ್ನು ಸಕಲ ಜೀವರು, ತಿಳಿಯಬೇಕು.
ಅಂತಹ ಭಗವಂತನ ಸ್ವತಂತ್ರವಿದ್ದಾಗಲೂ ತನ್ನ ಕರ್ತೃತ್ವವನ್ನು ಅನುಭವದಿಂದ ತಿಳಿದು, ಅದಕ್ಕೆ ತಕ್ಕಂತೆ ಶಾಸ್ತ್ರದ ಶಾಸ್ತ್ರಗಳ ನಿಧಿ ನಿಷೇಧಗಳನ್ನು ಪರಿಪಾಲನೆ ಮಾಡಿ, ಭಗವಂತನ ಅನುಗ್ರಹದಿಂದ ಫಲವನ್ನು ಪಡೆಯಬೇಕು. ಭಗವಂತನ ಹೆಸರು ಹೇಳಿ ಧೃತರಾಷ್ಟ್ರನಂತೆ ಎಲ್ಲವು ದೇವರ ಕೈಯಲ್ಲಿದೆ ನಾನೇನು ಮಾಡಲಿ ಅಂತ ಪಾಂಡವರಿಗೆ ಸಲ್ಲಬೇಕಾದ ಭೂಮಿಯನ್ನು ಅವರಿಗೆ ಸಲ್ಲಬೇಕಾದ ರಾಜ್ಯವನ್ನು ಪಾಂಡವರಿಗೆ ಕೊಡು ಎಂದು ಕೃಷ್ಣನು ಧೃತಾರಾಷ್ಟ್ರನಿಗೆ ಹೇಳಿ ಕಳಿಸಿದಾಗ ದೇವರಿಗೆ ಧೃತರಾಷ್ಟ್ರನು ಅದನ್ನೆಲ್ಲ ದೇವರು ನೋಡಿಕೊಳ್ಳುತ್ತಾನೆ.. ಅವನ ಅಧೀನ ಎಂದು ಹೇಳುತ್ತಾನೆ.
ದೇವರ ಹೆಸರು ಹೇಳಿ ತನ್ನ ಸ್ವಾರ್ಥವನ್ನು ಮನಸ್ಸಿನಲ್ಲಿಟ್ಟುಕೊಂಡು ಕಣ್ಣಿಲ್ಲದ ಕುರುಡ ಸಾಧಿಸಿದ ಧೃತರಾಷ್ಟ್ರ, ತನ್ನ ಮಕ್ಕಳನ್ನು ಕಳೆದುಕೊಂಡು ಅನೇಕ ದುಃಖಗಳನ್ನು ಅನುಭವಿಸುವ ಎದುರಿಸುವ ಪ್ರಸಂಗ ಎದುರಿಸಬೇಕಾಯಿತು. ಹಾಗೆ ದೇವರ ಹೆಸರಿನಲ್ಲಿ ಮೋಸ ಮಾಡಿ ನಾವು ಕರ್ಮಗಳಿಂದ ಭ್ರಷ್ಟರಾದರೆ ಧೃತರಾಷ್ಟ್ರನಂತೆ ದುಃಖ ಮತ್ತು ನೋವುಗಳನ್ನು ಎದುರಿಸಬೇಕಾಗುವ ಪ್ರಸಂಗ ಬಂದಿತು.
ಅದಕ್ಕಾಗಿ ನಾವೆಲ್ಲರೂ ಎಚ್ಚರವಾಗಿರಬೇಕು ದೇವರ ಹೆಸರಿನಲ್ಲಿ ಮೋಸ ಮಾಡಿ ನಾವು ದೈವವಾದ, ಹಠವಾದ ಅಥವಾ ಜೀವ ಕತೃತ್ವವಾದದಲ್ಲಿ ಮಹಾಭಾರತ ನನಗೆ ತಿಳಿಸಿಕೊಡುತ್ತದೆ. ಶ್ರೀಮದಾನಂದತೀರ್ಥ ಭಾಗವತ್ಪಾದಾಚಾರ್ಯರು ತಾತ್ಪರ್ಯ ನಿರ್ಣಯದಲ್ಲಿ ಅದನ್ನು ಚೆನ್ನಾಗಿ ವಿಷದ ಪಡಿಸಿದ್ದಾರೆ. ಆದುದರಿಂದ ನಾವೆಲ್ಲ ನನಗೆ ಶಾಸ್ತ್ರ ತೀರಿಸಿಕೊಟ್ಟ ಕರ್ಮವನ್ನು ಬಿಡದೆ ಮುಕ್ತಿ ಪಥದತ್ತ ಸಾಗಬೇಕು.

Previous articleಶ್ರೀ ಸಾಯಿ ಬಾಬಾರ 105ನೇ ಸಮಾಧಿ ಉತ್ಸವ ಉದ್ಘಾಟನೆ
Next articleಅಕ್ರಮ ಮದ್ಯಕ್ಕೆ ಟ್ರಾನ್ಸ್‌ಫಾರ್ಮರ್‌ ಮಾದರಿ