Home Advertisement
Home ಅಪರಾಧ ಲೈಂಗಿಕ ಕಿರುಕುಳ ಹೆಡ್ ಕಾನ್ಸ್‌ಟೇಬಲ್ ಬಂಧನ

ಲೈಂಗಿಕ ಕಿರುಕುಳ ಹೆಡ್ ಕಾನ್ಸ್‌ಟೇಬಲ್ ಬಂಧನ

0
101
ಹೆಡ್ ಕಾನ್ಸ್‌ಟೇಬಲ್

ಕೊಟ್ಟೂರು: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನ ಮೇರೆಗೆ ಪೊಲೀಸ್‌ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಎಂ. ಮಾರಪ್ಪ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಘಟನೆ ಬೆನ್ನಲ್ಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿವರ:
ದೂರುದಾರ ಮಹಿಳೆ ಹಣದ ವಿಚಾರವಾಗಿ ಚಿಕ್ಕಪ್ಪನ ಮಗಳ ಜೊತೆ ಜಗಳವಾಡಿದ್ದಳು. ಈ ಕುರಿತು ಮಹಿಳೆ ಪಟ್ಟಣದ ಪೊಲೀಸ್‌ ಠಾಣೆಗೆ ಸೆ. ೧೮ರಂದು ದೂರು ಕೊಡಲು ಹೋಗಿದ್ದಾರೆ. ಆಗ ಕರ್ತವ್ಯದಲ್ಲಿದ್ದ ಹೆಡ್‌ ಕಾನ್ಸ್‌ಟೇಬಲ್ ಮಾರಪ್ಪ ಹೆಸರು ಮತ್ತು ವಿಳಾಸ ಕೊಟ್ಟು ಹೋಗಿ, ನಂತರ ನಿಮ್ಮನ್ನು ಸಂಪರ್ಕಿಸುವೆ ಎಂದು ಹೇಳಿದ್ದಾನೆ.
ಸೆ. ೨೧ರಂದು ಮಹಿಳೆಗೆ ಕರೆ ಮಾಡಿದ ಮಾರಪ್ಪ, ಪ್ರಕರಣದಲ್ಲಿ ಸಹಾಯ ಮಾಡುವೆ, ನಿಮ್ಮ ಮನೆಯಲ್ಲಿ ಯರ‍್ಯಾರು ಇದ್ದೀರಿ ಎಂದು ಕೇಳಿದ್ದಾನೆ. ನಿನ್ನ ಮೇಲೆ ಮನಸಾಗಿದೆ. ನಾನು ನೀನು ದಾವಣಗೆರೆ ಮತ್ತಿತರ ಕಡೆ ಎಲ್ಲಾದರೂ ಸೇರೋಣ ಎಂದು ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮಹಿಳೆ ಕೊಟ್ಟೂರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮಹಿಳೆ ನೀಡಿರುವ ದೂರಿನ್ವಯ ಸಬ್‌ಇನ್ಸ್ಪೆಕ್ಟರ್ ವಿಜಯ್‌ಕೃಷ್ಣ ತನಿಖೆ ಕೈಗೊಂಡಿದ್ದಾರೆ.

Previous article`ಆಶ್ರಯ’ ನಿರಾಕರಣೆ: ಮಗನಿಂದ ತಂದೆ ಕೊಲೆ
Next articleಬುಡಕಟ್ಟು ಆದಿವಾಸಿಗಳ ಭಾಷೆಗಳಿಗೆ ಧ್ವನಿಭಾಷಾನುವಾದ ರೋಬೋಟ್ ಸಂಶೋಧನೆ