ಬರೋಡ: ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಫೈನಲ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೇರ ಪ್ರವೇಶ ಪಡೆದಿದೆ.
ಈ ಮೂಲಕ 2024ರ ನಂತರ ಎರಡನೇ ಬಾರಿ ಫೈನಲ್‌ಗೆ ಪ್ರವೇಶಿಸಿದ ತಂಡವಾಗಿ ಹೊರಹೊಮ್ಮಿದೆ. ಗುರುವಾರ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ಪಡೆಯನ್ನು ಆರ್‌ಸಿಬಿ ಬೌಲರ್ಸ್ ಕೇವಲ 144 ರನ್‌ಗಳಿಗೆ ಕಟ್ಟಿ ಹಾಕಿದ್ದಲ್ಲದೇ, 13.1 ಓವರ್‌ಗಳಲ್ಲಿ ಯಶಸ್ವಿ ಚೇಸಿಂಗ್ ಮಾಡಿ ಫೈನಲ್‌ಗೆ ಟಿಕೆಟ್ ಪಡೆದುಕೊಂಡಿದೆ
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದರೂ ರನ್‌ರೇಟ್ ಉಳಿಸಿಕೊಂಡಿದ್ದ ಆರ್‌ಸಿಬಿ, ಯುಪಿ ವಾರಿಯರ್ಸ್ ವಿರುದ್ಧ ಗೆಲ್ಲುವ ಮೂಲಕ 12 ಅಂಕಗಳನ್ನು ಸಾಧಿಸಿತು. ಹೀಗಾಗಿ, ಈಗ ಪ್ಲೇಆಫ್‌ನಿಂದ ಯುಪಿ ವಾರಿಯರ್ಸ್ ತಂಡ ಹೊರ ಬಿದ್ದಿದೆ.
ಉಳಿದ 3 ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ಪೈಕಿ ಇನ್ನೆರಡು ಪಂದ್ಯಗಳು ಮಾತ್ರ ಪ್ಲೇಆಫ್‌ಗೆ ಪ್ರವೇಶ ಪಡೆಯಲಿವೆ. ಆರ್‌ಸಿಬಿ ಪರ ಆಲ್‌ರೌಂಡರ್ ನಡಿನೇ ಡೆ ಕ್ಲಾರ್ಕ್ ಬೌಲಿಂಗ್‌ನಲ್ಲಿ ಯುಪಿಯ 4 ವಿಕೆಟ್‌ಗಳನ್ನು ಕಬಳಿಸಿ ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.
ಕೇವಲ 144 ರನ್‌ಗಳನ್ನು ಬೆನ್ನಟ್ಟಿದ ಆರ್‌ಸಿಬಿ ಪರ ಆರಂಭಿಕ ಆಟಗಾರ್ತಿ ಗ್ರೆಸ್ ಹ್ಯಾರಿಸ್ ಅಮೋಘ 75 ರನ್‌ಗಳನ್ನು ಗಳಿಸಿ ತಂಡದ ಗೆಲುವನ್ನು ಸನಿಹಗೊಳಿಸಿದರು. ನಾಯಕಿ ಸ್ಮೃತಿ ಮಂಧಾನ ಕೂಡ ಉತ್ತಮ ಸಾಥ್ ನೀಡಿದ್ದಲ್ಲದೇ, ಕೊನೆವರೆಗೂ ಕ್ರೀಸ್‌ನಲ್ಲಿ ಕಚ್ಚಿನಿಂತು ಆಡಿದರು. ಸದ್ಯ ಉಳಿದ 3 ತಂಡಗಳಲ್ಲಿ ಗುಜರಾತ್ ಜೈಂಟ್ಸ್ ಮಾತ್ರ 10 ಅಂಕಗಳನ್ನು ಪಡೆಯಬಹುದಾಗಿದ್ದು, ಆರ್‌ಸಿಬಿ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿದೆ.























