ನವದೆಹಲಿ: ಭಾರತದಲ್ಲಿ ಐಪಿಎಲ್ ನಂತರ ಅತ್ಯಂತ ಜನಪ್ರಿಯತೆ ಗಳಿಸಿರುವ ಮಹಿಳಾ ಪ್ರೀಮಿಯರ್ ಲೀಗ್ (WPL) ನಾಲ್ಕನೇ ಸೀಸನ್ ಆರಂಭಕ್ಕೆ ಸಿದ್ದತೆ ನಡೆದಿದ್ದು. ನಾಳೆ ಜನವರಿ 9, 2026ರಿಂದ ಆರಂಭವಾಗಲಿರುವ ಈ ಮಹಿಳಾ ಟಿ20 ಲೀಗ್, ಈ ಬಾರಿಯೂ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುವ ನಿರೀಕ್ಷೆ ಮೂಡಿಸಿದೆ.
ಮೊದಲ ಮೂರು ಆವೃತ್ತಿಗಳು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದರಿಂದ, ನಾಲ್ಕನೇ ಸೀಸನ್ ಮೇಲೆ ಕ್ರಿಕೆಟ್ ವಲಯದ ಕಣ್ಣಿದೆ. ವಿಶೇಷವಾಗಿ ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಗೆದ್ದ ಬಳಿಕ, ಮಹಿಳಾ ಕ್ರಿಕೆಟ್‌ಗೆ ಅಭಿಮಾನಿಗಳ ಬೆಂಬಲ ಮತ್ತಷ್ಟು ಹೆಚ್ಚಿದ್ದು, ಈ ಆವೃತ್ತಿ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬ ಲೆಕ್ಕಾಚಾರವನ್ನು ಬಿಸಿಸಿಐ (BCCI) ಹೊಂದಿದೆ.
ಇದನ್ನೂ ಓದಿ: ‘ಕಲ್ಟ್’ನಿಂದ ದಾವಣಗೆರೆಯ ಜನರೆದುರು ‘ಹೃದಯದ’ ಹಾಡು ಅನಾವರಣ
28 ದಿನಗಳಲ್ಲಿ 22 ಪಂದ್ಯಗಳು: ಈ ಸೀಸನ್‌ನಲ್ಲಿ ಎಂದಿನಂತೆ ಐದು ತಂಡಗಳು ಕಣಕ್ಕಿಳಿಯಲಿದ್ದು, 28 ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ಒಟ್ಟು 22 ಪಂದ್ಯಗಳು ನಡೆಯಲಿದ್ದು, ಲೀಗ್ ಹಂತದ ನಂತರ ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
ಈ ಆವೃತ್ತಿಯ ಎಲ್ಲಾ ಪಂದ್ಯಗಳು ನವಿ ಮುಂಬೈ – ಡಿವೈ ಪಾಟೀಲ್ ಕ್ರೀಡಾಂಗಣ ಹಾಗೂ ವಡೋದರಾ – ಬಿಸಿಎ ಕ್ರೀಡಾಂಗಣ ಸೇರಿದಂತೆ ಎರಡು ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಎಲಿಮಿನೇಟರ್ ಪಂದ್ಯ: ಫೆಬ್ರವರಿ 3 – ವಡೋದರಾದಲ್ಲಿ ನಡೆಯಲಿದ್ದು ಫೈನಲ್ ಪಂದ್ಯ: ಫೆಬ್ರವರಿ 5 ರಂದು ನಡೆಯಲಿದೆ.
ಇದನ್ನೂ ಓದಿ: ‘ವಿಜಯ’ ಯಾತ್ರೆಗೆ ತೊಡಕು: ‘ನಾಯಕನ’ ದರ್ಶನ ಕೊಂಚ ತಡ
ಕಣಕ್ಕಿಳಿಯುವ 5 ತಂಡಗಳು: ಈ ಬಾರಿ ಕೂಡ ಈ ಐದು ಬಲಿಷ್ಠ ತಂಡಗಳು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲಿವೆ – ರಾಯಲ್ ಚಾಲೆಂಜರ್ಸ್ ಬೆಂಗಳೂರು. ಮುಂಬೈ ಇಂಡಿಯನ್ಸ್. ದೆಹಲಿ ಕ್ಯಾಪಿಟಲ್ಸ್. ಯುಪಿ ವಾರಿಯರ್ಸ್. ಗುಜರಾತ್ ಜೈಂಟ್ಸ್
ಲೀಗ್‌ನ ಸ್ವರೂಪ ಹೇಗಿದೆ?: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರೌಂಡ್ ರಾಬಿನ್ ಮಾದರಿ ಅನುಸರಿಸಲಾಗುತ್ತದೆ. ಪ್ರತಿ ತಂಡವು ಉಳಿದ ಎಲ್ಲಾ ತಂಡಗಳ ವಿರುದ್ಧ ಎರಡು ಬಾರಿ ಪಂದ್ಯ ಆಡುತ್ತದೆ. ಅಂದರೆ, ಪ್ರತಿ ತಂಡಕ್ಕೆ ಒಟ್ಟು 8 ಪಂದ್ಯಗಳು
ಇದನ್ನೂ ಓದಿ: Toxic ಭರ್ಜರಿ ಟೀಸರ್ ಬಿಡುಗಡೆ: ಯಶ್ ಅವತಾರಕ್ಕೆ ಫ್ಯಾನ್ಸ್ ಫಿದಾ
ಲೀಗ್ ಹಂತದ ನಂತರ: ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡ ನೇರವಾಗಿ ಫೈನಲ್‌ಗೆ ಅರ್ಹವಾಗುತ್ತದೆ. 2ನೇ ಮತ್ತು 3ನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗುತ್ತವೆ. ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶ ಪಡೆಯುತ್ತದೆ.
ಡಬಲ್ ಹೆಡರ್ ಪಂದ್ಯಗಳು: ಈ ಬಾರಿ ಲೀಗ್‌ನಲ್ಲಿ ಎರಡು ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಅಂದರೆ ಒಂದೇ ದಿನದಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಡಬಲ್ ಹೆಡರ್: ಜನವರಿ 10. ಹಾಗೂ ಎರಡನೇ ಡಬಲ್ ಹೆಡರ್: ಜನವರಿ 17 ಇವು ಅಭಿಮಾನಿಗಳಿಗೆ ಒಂದೇ ದಿನದಲ್ಲಿ ಹೆಚ್ಚು ಕ್ರಿಕೆಟ್ ಆನಂದಿಸುವ ಅವಕಾಶ ಒದಗಿಸಲಿದೆ.
ಇದನ್ನೂ ಓದಿ: ಕನ್ನಡತಿಯಿಂದ ರಾಷ್ಟ್ರಮಟ್ಟದ ಪ್ರಯತ್ನ: ‘ಆಜಾದ್ ಭಾರತ್’ ಚಿತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೆಚ್ಚುಗೆ
ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್: ಕ್ರಿಕೆಟ್ ಅಭಿಮಾನಿಗಳು ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳನ್ನು – ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿ ಮೂಲಕ ನೇರ ಪ್ರಸಾರವಾಗಿ ವೀಕ್ಷಿಸಬಹುದು
ದಾಖಲೆಗಳ ನಿರೀಕ್ಷೆಯಲ್ಲಿ WPL 4: ಮಹಿಳಾ ಕ್ರಿಕೆಟ್‌ಗೆ ಸಿಗುತ್ತಿರುವ ಹೆಚ್ಚುತ್ತಿರುವ ಗೌರವ, ಅಭಿಮಾನಿಗಳ ಸಂಖ್ಯೆಯ ವೃದ್ಧಿ ಮತ್ತು ಸ್ಟಾರ್ ಆಟಗಾರ್ತಿಯರ ಸ್ಪರ್ಧೆಯಿಂದಾಗಿ, ಈ ನಾಲ್ಕನೇ ಸೀಸನ್ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಮತ್ತೊಂದು ಮೈಲುಗಲ್ಲಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.






















