Home Advertisement
Home ಕ್ರೀಡೆ T20 WorldCup: ಸೋಲಿಲ್ಲದ ಆಫ್ರಿಕಾಗೆ ಸೋಲಿಸುವುದೇ ನ್ಯೂಜಿಲೆಂಡ್?

T20 WorldCup: ಸೋಲಿಲ್ಲದ ಆಫ್ರಿಕಾಗೆ ಸೋಲಿಸುವುದೇ ನ್ಯೂಜಿಲೆಂಡ್?

0
55

ಕೊಲ್ಕತ್ತ: ಕ್ರಿಕೆಟ್ ಲೋಕದ ಪ್ರತಿಷ್ಠಿತ ಟಿ20 ವಿಶ್ವಕಪ್ ಈಗ ಅಂತಿಮ ಘಟ್ಟಕ್ಕೇರಲು ಇನ್ನೊಂದು ಮೆಟ್ಟಿಲು ಬಾಕಿಯಿದೆ. ಬಲಿಷ್ಠ ನಾಲ್ಕು ತಂಡಗಳ ನಡುವೆ ಸೆಮಿಫೈನಲ್ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಫೈನಲ್ ಹಂತಕ್ಕೆ ಬರೋದ್ಯಾರು ಎಂಬ ಕುತೂಹಲದಿಂದ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.

ಮಾರ್ಚ್ 4ರಂದು ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ. ಐಡೆನ್ ಮಾಕ್ರಮ್ ನೇತೃತ್ವದ ಸೌತ್‌ಆಫ್ರಿಕಾ ಸೋಲಿಲ್ಲದ ಸರದಾರನಾಗಿ ಓಟ ಮುಂದುವರೆಸಿದೆ. ಇಂದು ಕೂಡ ಕಿವೀಸ್ ಪಡೆ ಮಣಿಸಿ ಫೈನಲ್‌ಗೇರಿ ವಿಶ್ವಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ.

ಹರಿಣಗಳ ಬಲಬಲಾ: ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠ ಪಡೆ ಹೊಂದಿರುವ ನಾಯಕ ಏಡನ್ ಮಾರ್ಕ್ರಾಮ್, ಡಿ.ಬ್ರೇವಿಸ್, ಕಾರ್ಬಿನ್ ಬಾಷ್, ಮಧ್ಯಮ ಕ್ರಮಾಂಕದಲ್ಲಿ ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್ ತಂಡಕ್ಕೆ ಬಲವಾಗಿದ್ದಾರೆ. ಬೌಲಿಂಗ್‌ನಲ್ಲಿ ಮಾರ್ಕೊ ಜಾನ್ಸನ್, ಕಗಿಸೋ ರಬಾಡಾ ಆಕ್ರಮಣಾಕಾರಿ ಬೌಲರ್‌ಗಳಾಗಿದ್ದಾರೆ.

ನ್ಯೂಜಿಲೆಂಡ್ ಬಲಬಲಾ: ಬ್ಯಾಟಿಂಗ್ ವಿಭಾಗದಲ್ಲಿ ಫಿನ್ ಅಲೆನ್, ಟಿಮ್ ಶೈಫರ್ಟ್, ಆಲ್‌ಗ್ರೌಂಡರ್ ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಡೇರಿಯಲ್ ಮಿಚೆಲ್, ಮಾರ್ಕ್ ಚಪ್ಮನ್, ಬೌಲಿಂಗ್‌ನಲ್ಲಿ ಮಿಚೆಲ್ ಸ್ಯಾಂಟರ್, ಮ್ಯಾಟ್ ಹೆನ್ರಿ, ಇಶ್ ಸೋದಿ, ಫರ್ಗ್ಯೂಸನ್ ಬಲವಾಗಿದ್ದಾರೆ.

ಹೈವೋಲ್ಟೇಜ್ ಕದನ: ದಕ್ಷಿಣ ಆಫ್ರಿಕಾ ಆಡಿರುವ ಎಲ್ಲ ಪಂದ್ಯ ಗೆದ್ದು ಫೈನಲ್‌ಗೇರುವ ವಿಶ್ವಾಸದಲ್ಲಿದೆ. ಇತ್ತ ನ್ಯೂಜಿಲೆಂಡ್ ಸಾಂಘಿಕ ಹೋರಾಟಕ್ಕೆ ಹೆಸರಾದ ತಂಡ. ಈ ಹೈ-ವೋಲ್ಟೇಜ್ ಪಂದ್ಯ ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡುವುದಂತೂ ಖಚಿತ. ಮಳೆರಾಯ ಅಡ್ಡಿಪಡಿಸದಿದ್ದರೆ ಮೈದಾನದಲ್ಲಿ ಬಲಿಷ್ಠ ತಂಡಗಳ ನಡುವೆ ನೈಜ ಹೋರಾಟವನ್ನು ನಿರೀಕ್ಷಿಸಬಹುದು.

ಮಳೆ ಬಂದರೆ ಏನಾಗಲಿದೆ?:‌ ದಕ್ಷಿಣ ಆಫ್ರಿಕ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಮಳೆ ಎದುರಾದರೆ, ಡಿ’ ಗುಂಪಿನಲ್ಲಿದ್ದ ದಕ್ಷಿಣ ಆಫ್ರಿಕಾ ಆಡಿರುವ ಎಲ್ಲ ಪಂದ್ಯದಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸುವ ಉತ್ಸುಕತೆಯಲ್ಲಿದೆ. ಇನ್ನೊಂದೆಡೆ ನ್ಯೂಜಿಲೆಂಡ್ಡಿ’ ಗುಂಪಿನಲ್ಲಿ ದಕ್ಷಿಣ-ಆಫ್ರಿಕದ ಎದುರೇ ಸೋತು ನಂತರ ಸೂಪರ್ 8ರ ಹಂತದಲ್ಲೂ ಇಂಗ್ಲೆಂಡ್ ಎದುರು ಪರಾಭಗೊಂಡಿದೆ.

ಸೆಮಿಫೈನಲ್ ಹಾಗೂ ಫೈನಲ್‌ಗಳೆರಡಕ್ಕೂ ಅಂತಾರಾಷ್ಟ್ರೀಯ (ಐಸಿಸಿ) ಕ್ರಿಕೆಟ್ ಸಮಿತಿ ಪಂದ್ಯದ ದಿನ 90 ನಿಮಿಷಗಳ ಹೆಚ್ಚಿನ ಕಾಲಾವಕಾಶ ಒದಗಿಸಿದೆ. ಆಗಲೂ ನಿರ್ಣಯ ಬರದಿದ್ದರೆ `ಬೌಲ್ ಔಟ್’ ಅಥವಾ ನಾಣ್ಯ ಚಿಮ್ಮಿ ವಿಜಯಿಗಳನ್ನು ನಿರ್ಧರಿಸುವಂತಿಲ್ಲ. ಬದಲಾಗಿ ಸೂಪರ್ 8ರ ಹಂತದಲ್ಲಿಯ ತಂಡಗಳ ಸ್ಥಾನ-ಮಾನಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಒಂದು ವೇಳೆ ದಕ್ಷಿಣ ಆಫ್ರಿಕ-ನ್ಯೂಜಿಲೆಂಡ್ ನಡುವೆ ದಿನಾಂಕ 4ರಂದು ನಡೆಯುವ ಮೊದಲ ಸೆಮಿಫೈನಲ್ ಆಟ ಮಳೆಗೆ ತುತ್ತಾದದ್ದೇ ಆದರೆ ಆಟವನ್ನು ದಿನಾಂಕ 5 ರಂದು ಮುಂದುವರಿಸಲು ಅವಕಾಶವಿದೆ.

ಒಂದೊಮ್ಮೆ ಅವತ್ತೂ ಆಟ ಸಾಧ್ಯವಾಗದೇ ಇದ್ದರೆ ಸೂಪರ್ 8ರ ಸ್ಥಾನ-ಮಾನಗಳ ಆಧಾರದ ಮೇಲೆ ವಿಜಯಿಗಳ ನಿರ್ಧಾರವಾಗಲಿದೆ. ದಕ್ಷಿಣ ಆಫ್ರಿಕ ಸೂಪರ್ 8ರ ಮೊದಲ ಗುಂಪಿನಲ್ಲಿ 6 ಪಾಯಿಂಟ್‌ಗಳೊಡನೆ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಸೂಪರ್ 8ರ ಎರಡನೇ ಗುಂಪಿನಲ್ಲಿ 3 ಪಾಯಿಂಟ್‌ಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಹಾಗಾಗಿ ಮಳೆಯಿಂದ ಈ ಪಂದ್ಯ ತೊಳೆದು ಹೋದದ್ದೇ ಆದರೆ ದಕ್ಷಿಣ ಆಫ್ರಿಕ ಫೈನಲ್‌ಗೇರಲಿದೆ.