Home ಕ್ರೀಡೆ ಟಿ-20 ವಿಶ್ವಕಪ್‌ಗೂ ಮುನ್ನ ಬದಲಾಗಲಿದ್ದಾರೆ ಭಾರತದ ನಾಯಕ?

ಟಿ-20 ವಿಶ್ವಕಪ್‌ಗೂ ಮುನ್ನ ಬದಲಾಗಲಿದ್ದಾರೆ ಭಾರತದ ನಾಯಕ?

0
133

ನವದೆಹಲಿ: ಟಿ-20 ವಿಶ್ವಕಪ್ 2022 ಭಾರತ ತಂಡಕ್ಕೆ ಬಹಳ ಮುಖ್ಯವಾಗಲಿದೆ. ಕಳೆದ ವರ್ಷ ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ದೊಡ್ಡ ನಿರಾಸೆ ಮೂಡಿಸಿತ್ತು. ಆದರೆ ಏಷ್ಯಾಕಪ್ 2022ರಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಇದೆಲ್ಲದರ ನಡುವೆ ಟೀಂ ಇಂಡಿಯಾಗೆ ಸಂಬಂಧಿಸಿದ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ.

T20 ವಿಶ್ವಕಪ್‍ಗೂ ಮೊದಲು ಭಾರತ ತಂಡದ ಜವಾಬ್ದಾರಿ ರೋಹಿತ್ ಶರ್ಮಾ ಬದಲಿಗೆ ಬೇರೆ ಆಟಗಾರನ ಕೈಗೆ ಹೋಗುತ್ತದೆ ಎಂಬುದು.2022ರ ಟಿ-20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಮತ್ತು ಟಿ-20 ಸರಣಿ ನಡೆಯಲಿದೆ. ವರದಿಗಳ ಪ್ರಕಾರ, 2022ರ ಟಿ-20 ವಿಶ್ವಕಪ್ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದು. ಇದೇ ವೇಳೆ ತಂಡದ ನಾಯಕತ್ವ ಶಿಖರ್ ಧವನ್‍ಗೆ ವಹಿಸಲಾಗುತ್ತದೆ.