Home Advertisement
Home ಕ್ರೀಡೆ T20 World Cup: ಇಂಗ್ಲೆಂಡ್‌ಗೆ 254 ರನ್‌ ಟಾರ್ಗೆಟ್

T20 World Cup: ಇಂಗ್ಲೆಂಡ್‌ಗೆ 254 ರನ್‌ ಟಾರ್ಗೆಟ್

0
44

ಮುಂಬೈ: ಸಂಜು ಸ್ಯಾಮ್ಸನ್‌ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ‌ ಇಂಗ್ಲೆಂಡ್‌ ವಿರುದ್ಧ ಭಾರತ 253 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ.

ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ಉತ್ತಮ ಆರಂಭವನ್ನು ಮಾಡಿತು.

ಅಭಿಷೇಕ ಶರ್ಮಾ (9) ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಕ್ಯಾಚ್‌ ನೀಡಿ ಹೊರನಡೆದರು. ಬಳಿಕ ಸಂಜು ಜತೆಗೂಡಿದ ಇಶಾನ್‌ ಕಿಶನ್‌ (39) 97 ರನ್‌ಗಳ ಜತೆಯಾಟ ನಡೆಸಿದರು.

ಈ ಜೋಡಿ ಬೇರ್ಪಡುವ ಹೊತ್ತಿಗೆ ಭಾರತದ ಮೊತ್ತ 9.3 ಓವರ್‌ಗಳಲ್ಲಿ 117 ರನ್‌ ಆಗಿತ್ತು. ಬಳಿಕ ಶಿವಂ ದುಬೆ ಜತೆಗೆ ಅಬ್ಬರದ ಬ್ಯಾಟಿಗ್‌ ಮುಂದುವರಿಸಿದ ಸ್ಯಾಮ್ಸನ್‌ 42 ಎಸೆತದಲ್ಲಿ 89 ರನ್‌ ಗಳಿಸಿ ಹೊರ ನಡೆದರು.

ತಿಲಕ ವರ್ಮಾ 7 ಎಸೆತದಲ್ಲಿ 21 ರನ್‌, ಹಾರ್ದಿಕ್‌ ಪಾಂಡ್ಯ 12 ಎಸೆತದಲ್ಲಿ 27 ರನ್‌ ಗಳಿಸಿ ತಂಡದ ಮೊತ್ತವನ್ನು 250 ಗಡಿ ದಾಡುವಂತೆ ಮಾಡಿದರು.

ಒಟ್ಟಾರೆ ಭಾರತ ತಂಡದ ಬ್ಯಾಟ್ಸ್‌ಮನ್‌ಗಳ ಸಂಘಟಿತ ಪ್ರದರ್ಶನ ಇಂಗ್ಲೆಂಡ್‌ ಬೌಲರ್‌ಗಳನ್ನು ಬೆವರಿಳಿಸಿದ್ದು, ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಭಾರತದ ಬೌಲರ್‌ಗಳು ಯಾವ ರೀತಿಯಲ್ಲಿ ದಾಳಿ ನಡೆಸುತ್ತಾರೆ ಎನ್ನುವುದು ಮುಖ್ಯವಾಗಿದೆ.