ಭಾರತ `ಎ’ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ಗೆ ನಾಯಕತ್ವ

0
34

ಮುಂಬೈ: ಸೆಪ್ಟೆಂಬರ್ ಕೊನೆಯಲ್ಲಿ ಲಖನೌದಲ್ಲಿ ನಡೆಯಲಿರುವ ಎರಡು ಬಹುದಿನಗಳ ಕ್ರಿಕೆಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ʻಎ’ ವಿರುದ್ಧ ಶ್ರೇಯಸ್ ಅಯ್ಯರ್ 15 ಸದಸ್ಯರ ಭಾರತ ʻಎ’ ತಂಡವನ್ನು ಮುನ್ನಡೆಸಲಿದ್ದಾರೆ.

ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿ ಮೊಣಕಾಲು ಗಾಯದಿಂದ ಬಳಲುತ್ತಿದ್ದ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸಹ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಮೊದಲ ಆಯ್ಕೆಯ ಟೆಸ್ಟ್ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಎರಡನೇ ಪಂದ್ಯಕ್ಕೆ ಮಾತ್ರ. ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಅಯ್ಯರ್ ಕೊನೆಯ ಬಾರಿಗೆ ಫೆಬ್ರವರಿ 2024 ರಲ್ಲಿ ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕಾಗಿ ಟೆಸ್ಟ್ ಆಡಿದ್ದರು. ಅಕ್ಟೋಬರ್ 2 ರಂದು ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು, ಇದು ಅವರಿಗೆ ಒಂದು ಅವಕಾಶವಾಗಿದೆ.

ಭಾರತ `ಎ’ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಮನ್ಯು ಈಶ್ವರನ್, ಎನ್ ಜಗದೀಶನ್, ಸಾಯಿ ಸುದರ್ಶನ್, ಧ್ರುವ ಜುರೆಲ್ (ಉಪನಾಯಕ), ದೇವದತ್ ಪಡಿಕ್ಕಲ್, ಹರ್ಷ್ ದುಬೆ, ಆಯುಷ್ ಬದೋನಿ, ನಿತೀಶ್ ಕುಮಾರ್ ರೆಡ್ಡಿ, ತನುಷ್ ಕೋಟ್ಯಾನ್, ಪ್ರಸಿದ್ಧ್ ಕೃಷ್ಣ, ಗುರ್ನರ್ ಬ್ರಾರ್, ಖಲೀಲ್ ಅಹ್ಮದ್, ಮನವ್ ಸುಥಾರ್, ಯಶ್ ಠಾಕೂರ್, ಕೆಎಲ್ ರಾಹುಲ್*, ಮೊಹಮ್ಮದ್ ಸಿರಾಜ್.

Previous article‘ಲೂಸಿಯಾ’ಗೆ 12 ವರ್ಷ: ನೆನಪು ಹಂಚಿಕೊಂಡ ಸತೀಶ್ ನೀನಾಸಂ
Next articleಬೆಳಗಾವಿ: ಖಾಕಿ ನಿರ್ಲಕ್ಷ್ಯದಲ್ಲಿ `ಸತ್ತುʼಹೋದ ಸತ್ಯ!

LEAVE A REPLY

Please enter your comment!
Please enter your name here