Home Advertisement
Home ಕ್ರೀಡೆ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್: ಕರ್ನಾಟಕ ತಂಡ ಪ್ರಕಟ-ಭರ್ಜರಿ ಸಿದ್ಧತೆ

ಹುಬ್ಬಳ್ಳಿಯಲ್ಲಿ ರಣಜಿ ಫೈನಲ್: ಕರ್ನಾಟಕ ತಂಡ ಪ್ರಕಟ-ಭರ್ಜರಿ ಸಿದ್ಧತೆ

0
65

ರಣಜಿ ಫೈನಲ್ ಹುಬ್ಬಳ್ಳಿಯಲ್ಲಿ: ಪಡಿಕ್ಕಲ್ ನಾಯಕತ್ವದಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಕರ್ನಾಟಕ ತಂಡ ಸಮರ

ಹುಬ್ಬಳ್ಳಿ : Ranji Trophy 2025-26ರ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಫೆಬ್ರವರಿ 24ರಿಂದ 28ರವರೆಗೆ ಹುಬ್ಬಳ್ಳಿಯ ರಾಜನಗರದಲ್ಲಿರುವ Karnataka State Cricket Association (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳು ಸೆಣೆಸಾಡಲಿವೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿರುವುದು ವಿಶೇಷ.

ಕರ್ನಾಟಕ ತಂಡದಲ್ಲಿ ಬದಲಾವಣೆ ಇಲ್ಲ: ಕರ್ನಾಟಕ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಸೆಮಿಫೈನಲ್‌ನಲ್ಲಿ ಆಡಿದ ಅದೇ 15 ಆಟಗಾರರು ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ತಂಡದ ನಾಯಕತ್ವವನ್ನು ದೇವದತ್ ಪಡಿಕ್ಕಲ್ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಯುವ ವಿಜ್ಞಾನಿ ಕಾರ್ಯಕ್ರಮ ಘೋಷಿಸಿದ ISRO – ಬಾಹ್ಯಾಕಾಶ ವಿಜ್ಞಾನ ಕಲಿಯಲು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

ಕರ್ನಾಟಕ ತಂಡ: ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಕೆವಿ ಅನೀಶ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್ (ವಿಕೆಟ್ ಕೀಪರ್), ವಿಜಯಕುಮಾರ್ ವೈಶಾಕ್.

ಬ್ಯಾಟಿಂಗ್ ಕ್ರಮಾಂಕದಲ್ಲಿ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಬೌಲಿಂಗ್ ದಾಳಿಯಲ್ಲಿ ಪ್ರಸಿದ್ಧ್ ಕೃಷ್ಣ, ವಿದ್ವತ್ ಕಾವೇರಪ್ಪ ಮತ್ತು ಮೊಹ್ಸಿನ್ ಖಾನ್ ಪ್ರಮುಖ ಪಾತ್ರವಹಿಸಲಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ದ್ರಾಕ್ಷಿ ಕ್ರಾಂತಿ: ‘California’ ಕನಸು ನನಸಾಗುತ್ತಿದೆ

ಪಿಚ್ ಮತ್ತು ಸೌಲಭ್ಯ ಪರಿಶೀಲನೆ: ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಅವಿನಾಶ ವೈದ್ಯ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಬಿಸಿಸಿಐ ತಟಸ್ಥ ಪಿಚ್ ಕ್ಯುರೇಟರ್ ಪ್ರಕಾಶ್ ಆದವ್ ಮಾರ್ಗದರ್ಶನದಲ್ಲಿ ಪಿಚ್ ಸಿದ್ಧತೆ ನಡೆಯುತ್ತಿದೆ. ಪಂದ್ಯ ನೇರ ಪ್ರಸಾರವಾಗಲಿದ್ದು, ಬಿಸಿಸಿಐ ಬ್ರಾಡ್‌ಕಾಸ್ಟಿಂಗ್ ತಂಡವೂ ಸೌಲಭ್ಯಗಳನ್ನು ಪರಿಶೀಲಿಸಿದೆ.

ಪ್ರೇಕ್ಷಕರ ಆಸನ ವ್ಯವಸ್ಥೆ, ನೆರಳು ವ್ಯವಸ್ಥೆ ಹಾಗೂ ತಾತ್ಕಾಲಿಕ ಸ್ಟ್ಯಾಂಡ್‌ಗಳ ನಿರ್ಮಾಣ ಕುರಿತು ಇಂದು ಸಭೆ ನಡೆಯಲಿದೆ. ಬಿಸಿಸಿಐ ಸೂಚನೆಯಂತೆ ಅಂತಿಮ ಸಿದ್ಧತೆ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: KMF ನಂದಿನಿ ಉತ್ಪನ್ನ ಸುರಕ್ಷಿತ – ಸುಳ್ಳು ವದಂತಿ ವಿರುದ್ಧ ಕ್ರಿಮಿನಲ್ ಕೇಸ್

ಹುಬ್ಬಳ್ಳಿ ಮೊದಲ ಬಾರಿಗೆ ಫೈನಲ್ ಆತಿಥ್ಯ: 16.5 ಎಕರೆ ವಿಸ್ತೀರ್ಣದಲ್ಲಿರುವ ಈ ಕ್ರೀಡಾಂಗಣದಲ್ಲಿ 8 ಮುಖ್ಯ ಪಿಚ್, 10 ಅಭ್ಯಾಸ ಪಿಚ್ ಹಾಗೂ 2 ಕಾಂಕ್ರೀಟ್ ಪಿಚ್‌ಗಳಿವೆ. ಇದುವರೆಗೆ ಒಂಬತ್ತು ರಣಜಿ ಪಂದ್ಯಗಳು ಮತ್ತು ಭಾರತ ‘ಎ’ ತಂಡಗಳ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳು ಇಲ್ಲಿ ನಡೆದಿವೆ. ಆದರೆ ರಣಜಿ ಫೈನಲ್ ಇದೇ ಮೊದಲ ಬಾರಿಗೆ ನಡೆಯುತ್ತಿದೆ.

ಜಮ್ಮು-ಕಾಶ್ಮೀರ ತಂಡ ಶಿಘ್ರದಲ್ಲಿ ಹುಬ್ಬಳ್ಳಿಗೆ ಆಗಮಿಸುವ ಸಾಧ್ಯತೆ ಇದ್ದು, ಕರ್ನಾಟಕ ತಂಡ ಫೆಬ್ರವರಿ 21ರಂದು ನಗರ ತಲುಪಲಿದೆ. ಕಳೆದ ನವೆಂಬರ್‌ನಲ್ಲಿ ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್ ಮತ್ತು 185 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು.

ಹೀಗಾಗಿ ರಣಜಿ ಫೈನಲ್‌ಗಾಗಿ ಹುಬ್ಬಳ್ಳಿ ನಗರವೇ ಕ್ರಿಕೆಟ್ ಹಬ್ಬದ ವಾತಾವರಣಕ್ಕೆ ಸಜ್ಜಾಗಿದೆ.

Previous articleಕಲಬುರಗಿ: ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದಲ್ಲಿ ಮುಂಚೂಣಿ
Next articleರಾಜ್ಯ ಸರ್ಕಾರ ತುಷ್ಟೀಕರಣದ ಪರಾಕಾಷ್ಟೆಗೆ ತಲುಪಿದೆ