ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಳೆದು ತೂಗಿ ಕೆಲ ಸ್ಟಾರ್ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮತ್ತೇ ʻಈ ಸಲವೂ ಕಪ್ ನಮ್ದೇʼ ಎನ್ನುವಂತೆ ತಂಡವನ್ನು ಸಿದ್ಧಪಡಿಸಿದೆ.
ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದ ಆರ್‌ಸಿಬಿ, ಕೇವಲ 16.40 ಕೋಟಿ ರೂಪಾಯಿಗಳನ್ನು ಪರ್ಸ್‌ನಲ್ಲಿಟ್ಟುಕೊಂಡು ಹರಾಜಿನಲ್ಲಿ ಭಾಗವಹಿಸಿತ್ತು.
ಕಳೆದ ಐಪಿಎಲ್ ಹರಾಜಿನಲ್ಲಿ 23.75 ಕೋಟಿ ರೂಪಾಯಿಗಳಿಗೆ ಕೆಕೆಆರ್ ಪಾಲಾಗಿದ್ದ ವೆಂಕಟೇಶ್ ಅಯ್ಯರ್ ಅವರನ್ನು ಇದೀಗ ಕೇವಲ 7 ಕೋಟಿಗೆ ಆರ್‌ಸಿಬಿ ಖರೀದಿಸುವ ಮೂಲಕ ತನ್ನ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಇದನ್ನೂ ಓದಿ: 25.20 ಕೋಟಿ ರೂ.ಗೆ ಕೊಲ್ಕತ್ತ ಸೇರಿದ ಕ್ಯಾಮರೂನ್ ಗ್ರೀನ್
ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರು
ವೆಂಕಟೇಶ್ ಅಯ್ಯರ್ 7 ಕೋಟಿ ರೂ.
ಮಂಗೇಶ್ ಯಾದವ್‌ಗೆ 5.20 ಕೋಟಿ ರೂ.
ಜೇಕಬ್ ಡಫಿ 2 ಕೋಟಿ ರೂ.
ಜೋರ್ಡನ್ ಕಾಕ್ಸ್ 75 ಲಕ್ಷ ರೂ.
ಕನಿಷ್ಕ್ ಚೌಹ್ಹಾಣ್ 30 ಲಕ್ಷ ರೂ.
ವಿಹಾನ್ ಮಲ್ಹೋತ್ರಾ 30 ಲಕ್ಷ ರೂ.
ಸಾತ್ವಿಕ್ ದೇಶ್ವಾಲ್ 30 ಲಕ್ಷ ರೂ.
ವಿಕ್ಕಿ ಕೌಶಲ್ 30 ಲಕ್ಷ ರೂ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ಜೈಸ್ವಾಲ್
ಮಿನಿ ಹರಾಜಿನ ಬಳಿಕ ಆರ್‌ಸಿಬಿ ತಂಡ: ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮ್ಯಾರಿಯೋ ಶಫರ್ಡ್, ಜೆಕಬ್ ಬೆಥೆಲ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಕ್ ಧರ್, ಅಭಿನಂದನ್ ಸಿಂಗ್, ಸುಯಾಶ್ ಶರ್ಮಾ, ವೆಂಕಟೇಶ್ ಅಯ್ಯರ್, ಜೆಕಬ್ ಡಫಿ, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ಸಾತ್ವಿಕ್ ದೇಶ್ವಾಲ್, ವಿಕ್ಕಿ ಕೌಶಲ್, ಕನಿಷ್ಕ್ ಚೌಹ್ಹಾಣ್, ವಿಹಾನ್ ಮಲ್ಹೋತ್ರಾ.























