ಐಪಿಎಲ್ ಮಿನಿ ಹರಾಜು: ಆರ್‌ಸಿಬಿ 8 ಆಟಗಾರರ ಬಿಡುಗಡೆ

0
2

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ-ಹರಾಜಿಗೆ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಜ್ಜಾಗಿದೆ. ಅಬುಧಾಬಿಯಲ್ಲಿ ನಡೆಯುವ ಬಿಡ್ಡಿಂಗ್ ವಾರ್‌ನಲ್ಲಿ ಒಟ್ಟು ಎಂಟು ಸ್ಥಾನಗಳನ್ನು ಆರ್‌ಸಿಬಿ ತುಂಬಬೇಕಾಗಿದೆ.

ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟಿದಾರ್ ಸೇರಿದಂತೆ 17 ಜನರನ್ನು ಆರ್‌ಸಿಬಿ ತಂಡದಲ್ಲಿ ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನು ಬಿಡುಗಡೆಗೊಳಿಸಿತ್ತು. ಅದರಲ್ಲಿ ಇಬ್ಬರು ವಿದೇಶಿ ಆಟಗಾರರು ಸೇರಿದಂತೆ ಎಂಟು ಸ್ಥಾನಗಳನ್ನು ತುಂಬಬೇಕಾಗಿದೆ.

ಆರ್‌ಸಿಬಿ ಬಳಿ 16.40 ಕೋಟಿ ರೂ. ಬಾಕಿ ಉಳಿದಿದ್ದು, ಇದರಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್, ವಿದೇಶಿ ಮತ್ತು ಭಾರತೀಯ ವೇಗದ ಬೌಲರ್‌ಗಳ ಆಯ್ಕೆ ಬಗ್ಗೆ ಆರ್‌ಸಿಬಿ ಯೋಜಿಸುತ್ತಿದೆ.

ಒಟ್ಟಾರೆಯಾಗಿ ತಂಡವನ್ನು ಸಂಪೂರ್ಣವಾಗಿ ಬದಲಿಸುವ ಬದಲು, ಸಮತೋಲನ ಕಾಪಾಡಿಕೊಳ್ಳಲು ತಂಡದಲ್ಲಿನ ಕೆಲ ನ್ಯೂನತೆಗಳನ್ನು ಗುರಿಯಾಗಿಸಿ ಸರಿಪಡಿಸಲು ಬೆಂಗಳೂರು ತಂಡ ಲೆಕ್ಕಾಚಾರ ಹಾಕಿಕೊಂಡಿದೆ.

ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಲ್ಲಿ ಪಂದ್ಯ ಖಚಿತ

ಮಿನಿ ಹರಾಜಿಗೂ ಮುನ್ನವೇ ವಿದೇಶಿ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ವೇಗಿ ಲುಂಗಿ ಎನ್‌ಗಿಡಿ ಅವರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಇಬ್ಬರು ವಿದೇಶಿ ಆಟಗಾರರ ಆಯ್ಕೆ ಆರ್‌ಸಿಬಿಗೆ ಅವಶ್ಯವಾಗಿದೆ.

ಆರ್‌ಸಿಬಿ ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಜೇಕಬ್ ಬೆಥೆಲ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಕೃನಾಲ್ ಪಾಂಡ್ಯ, ಫಿಲ್ ಸಾಲ್ಟ್, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ನುವಾನ್ ತುಷಾರ, ರಸಿಖ್ ದಾರ್, ರೊಮಾರಿಯೋ ಶೆಫರ್ಡ್, ಸುಯಶ್ ಶರ್ಮಾ, ಸ್ವಪ್ನಿಲ್ ಸಿಂಗ್

ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರು: ಲಿಯಾಮ್ ಲಿವಿಂಗ್‌ಸ್ಟೋನ್, ಲುಂಗಿ ಎನ್‌ಗಿಡಿ, ಮನೋಜ್ ಭಾಂಡಗೆ, ಮಯಾಂಕ್ ಅಗರ್‌ವಾಲ್, ಮೋಹಿತ್ ರಾಠಿ, ಮಯಾಂಕ್ ಅಗರ್ವಾಲ್, ಸಚಿನ್ ಬೇಬಿ ಮತ್ತು ಸ್ವಸ್ತಿಕ್ ಚಿಕಾರಾ.

Previous articleಶಿವಶಂಕರಪ್ಪ ನಿಧನಕ್ಕೆ ಪತ್ರದ ಮೂಲಕ ಸೋನಿಯಾ ಗಾಂಧಿ ಸಂತಾಪ