IPL Mini Auction: ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆ ಇಂದು

0
2

ಅಬುದಾಬಿ: ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಟಗಾರರ ಹರಾಜಿಗೆ ಕೊನೆಗೂ ಕಾಲ ಕೂಡಿ ಬಂದಿದೆ. ಡಿಸೆಂಬರ್‌ 16ರಂದು ಅಬುದಾಬಿಯಲ್ಲಿ ಈ ಆಕ್ಷನ್ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

ಯಾವ್ಯಾವ ಅಟಗಾರ ಯಾವ ಫ್ರಾಂಚೈಸಿಗೆ ಹೋಗಬಹುದು ಎಂಬುದರ ಕುರಿತು ಹಲವಾರು ಅಂದಾಜುಗಳಿವೆ. ಆದರೆ ಹರಾಜು ನಡೆಯುವ ಸ್ಥಳದಲ್ಲಿ ತಂಡಗಳ ಮಾಲೀಕರ ನಿರ್ಧಾರಗಳು ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಬಹುದು.

ಅಲ್ಲದೇ, ಈ ಬಾರಿ ಮತ್ತೊಮ್ಮೆ ಆಸ್ಟ್ರೇಲಿಯಾದ ಆಟಗಾರರು ದುಬಾರಿ ಮೊತ್ತಕ್ಕೆ ಮಾರಾಟ ವಾಗುವ ಸಾಧ್ಯತೆಗಳಿದ್ದು, ಕಳೆದ ಬಾರಿ ಆರ್‌ಸಿಬಿ ಪರ ಆಡಿದ್ದ ಕ್ಯಾಮೆರೂನ್ ಗ್ರೀನ್‌ಗೆ ಕೋಟಿ ಕೋಟಿ ಹಣ ಸುರಿಯಲು ಫ್ರಾಂಚೈಸಿಗಳು ಆಸಕ್ತರಾಗಿದ್ದಾರೆ ಎನ್ನಲಾಗಿದೆ.

ಈ ಬಾರಿಯ ಆಕ್ಷನ್‌ನಲ್ಲಿ ಒಟ್ಟು 350 ದೇಶೀಯ-ಅಂತಾರಾಷ್ಟ್ರೀಯ ಆಟಗಾರರು ಭಾಗಿಯಾಗುತ್ತಿದ್ದು, ಇದರಲ್ಲಿ 246 ಮಂದಿ ಭಾರತೀಯರಾಗಿದ್ದಾರೆ. ಉಳಿದ 104 ಮಂದಿ ವಿದೇಶಿ ಆಟಗಾರರು ಪಟ್ಟಿಯಲ್ಲಿದ್ದಾರೆ. ಆದರೆ, ಕೇವಲ 77 ಸ್ಥಾನಗಳಿಗೆ ಮಾತ್ರ ಈ ಬಿಡ್ಡಿಂಗ್ ನಡೆಯಲಿದ್ದು, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳು ಹೆಚ್ಚು ವ್ಯಯ ಮಾಡುವ ತಂಡಗಳಾಗಿ ಗುರುತಿಸಿಕೊಂಡಿವೆ.

ಈ ಆಕ್ಷನ್‌ನಲ್ಲಿ ಪಾಲ್ಗೊಳ್ಳುತ್ತಿರುವ 350 ಆಟಗಾರರ ಪೈಕಿ 2 ಕೋಟಿ ಮೂಲಬೆಲೆ ಹೊಂದಿರುವ 40 ಮಂದಿ ಆಟಗಾರರಿದ್ದು, 1.5 ಕೋಟಿ ಮೂಲಬೆಲೆ ಹೊಂದಿರುವ 9 ಆಟಗಾರರು, 1.25 ಕೋಟಿ ಮೂಲಬೆಲೆಯ 4, 1 ಕೋಟಿಗೆ 44, 50 ಲಕ್ಷಕ್ಕೆ 4, 40 ಲಕ್ಷಕ್ಕೆ 7 ಮಂದಿ ಮೂಲಬೆಲೆ ಹೊಂದಿದ್ದಾರೆ. ಉಳಿದಂತೆ 30 ಲಕ್ಷ ಮೂಲಬೆಲೆ ಹೊಂದಿರುವ 237 ಮಂದಿ ಇದ್ದಾರೆ. ರವಿ ಬಿಷ್ಣೋಯಿ ಕೂಡ ಕೋಟಿವೀರ ಆಗಬಹುದು.

ಯಾವ್ಯಾವ ತಂಡಕ್ಕೆ ಎಷ್ಟೆಷ್ಟು ಬೇಕು?
ಸಿಎಸ್‌ಕೆ 09 (4 ವಿದೇಶಿ)
ಡೆಲ್ಲಿ 08 (5 ವಿದೇಶಿ)
ಗುಜರಾತ್ 05 (4 ವಿದೇಶಿ)
ಕೆಕೆಆರ್ 13 (6 ವಿದೇಶಿ)
ಲಖನೌ 06 (4 ವಿದೇಶಿ)
ಮುಂಬೈ 05 (1 ವಿದೇಶಿ)
ಪಂಜಾಬ್ 04 (2 ವಿದೇಶಿ)
ರಾಜಸ್ಥಾನ 09 (1 ವಿದೇಶಿ)
ಆರ್‌ಸಿಬಿ 08 (2 ವಿದೇಶಿ)
ಸನ್‌ರೈಸರ್ಸ್ 10 (2 ವಿದೇಶಿ)

ಐಪಿಎಲ್ ಫ್ರಾಂಚೈಸಿಗಳ ಪರ್ಸ್‌ನಲ್ಲಿರುವ ಹಣ
ಸಿಎಸ್‌ಕೆ 43.40 ಕೋಟಿ
ಡೆಲ್ಲಿ 21.80 ಕೋಟಿ
ಗುಜರಾತ್ 12.90 ಕೋಟಿ
ಕೆಕೆಆರ್ 64.30 ಕೋಟಿ
ಲಖನೌ 22.95 ಕೋಟಿ
ಮುಂಬೈ 2.75 ಕೋಟಿ
ಪಂಜಾಬ್ 11.50 ಕೋಟಿ
ರಾಜಸ್ಥಾನ 16.05 ಕೋಟಿ
ಆರ್‌ಸಿಬಿ 16.40 ಕೋಟಿ
ಸನ್‌ರೈಸರ್ಸ್ 22.50 ಕೋಟಿ

Previous articleಸೋನಿಯಾ – ರಾಹುಲ್ ಜತೆ ಡಿ.ಕೆ. ಶಿವಕುಮಾರ್ ಚರ್ಚೆ