ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಹರಾಜಿನ ಅಂತಿಮ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು ಒಟ್ಟು 350 ಕ್ರಿಕೆಟಿಗರು ಮಾತ್ರ ಅಂತಿಮವಾಗಿ ಹರಾಜಿಗೆ ಸ್ಥಾನ ಪಡೆದಿದ್ದಾರೆ. ಮೊದಲ ಹಂತದಲ್ಲಿ 1,390 ಆಟಗಾರರು ನೋಂದಾವಣೆಗೊಂಡಿದ್ದರಲ್ಲಿ, ಶುದ್ದೀಕರಣದ ನಂತರ 1,005 ಹೆಸರುಗಳನ್ನು ಕೈಬಿಟ್ಟು 350ರನ್ನು ಮಾತ್ರ ಆಯ್ಕೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ 240 ಭಾರತೀಯರು ಹಾಗೂ 110 ವಿದೇಶಿ ಆಟಗಾರರು ಇರಲಿದ್ದಾರೆ. ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ಹರಾಜುಯಲ್ಲಿ 10 ತಂಡಗಳಲ್ಲಿ ಲಭ್ಯವಿರುವ ಒಟ್ಟು 77 ಸ್ಥಾನಗಳ ಗಾಗಿ ಸ್ಪರ್ಧೆ ಜೋರಾಗಲಿದೆ.
ಪ್ರಮುಖ ಸೇರ್ಪಡೆ – ಕ್ವಿಂಟನ್ ಡಿ ಕಾಕ್ : ಹರಾಜಿನಲ್ಲಿನ ಪ್ರಮುಖ ಆಕರ್ಷಣೆಯಾಗಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ ಹೆಸರು ಗಮನ ಸೆಳೆದಿದೆ. ಅಧಿಕೃತ ನೋಂದಾವಣೆ ಪಟ್ಟಿಯಲ್ಲಿ ಇಲ್ಲದಿದ್ದರೂ, ಫ್ರಾಂಚೈಸಿಯೊಂದರ ಮನವಿಯ ಮೇರೆಗೆ ಅವರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ. ಅವರ ಮೂಲ ಬೆಲೆ ₹1 ಕೋಟಿ.
ಇತರ ಪ್ರಮುಖ ಆಟಗಾರರು: ಸ್ಟೀವ್ ಸ್ಮಿತ್ — ಮೂಲ ಬೆಲೆ ₹2 ಕೋಟಿ. ಕ್ಯಾಮರೂನ್ ಗ್ರೀನ್, ಡೆವನ್ ಕಾನ್ವೇ, ಡೇವಿಡ್ ಮಿಲ್ಲರ್ — ಮೂಲ ಬೆಲೆ ₹2 ಕೋಟಿ. ಪೃಥ್ವಿ ಶಾ, ಸರ್ಫರಾಜ್ ಖಾನ್ — ಮೂಲ ಬೆಲೆ ₹75 ಲಕ್ಷ. ವೆಂಕಟೇಶ್ ಅಯ್ಯರ್ — ಮೂಲ ಬೆಲೆ ₹2 ಕೋಟಿ
ಐಪಿಎಲ್ 2026ರ ಈ ಹರಾಜು ಯುವ ಪ್ರತಿಭೆ ಹಾಗೂ ಅನುಭವಿ ಆಟಗಾರರ ಸಮಬಲದ ವೇದಿಕೆಯಾಗಿದ್ದು, ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ಹರಾಜು ನಡೆಯಲಿದೆ.























