Home ಕ್ರೀಡೆ T20 World Cup 2026 ಭಾರತ ತಂಡ ಪ್ರಕಟ

T20 World Cup 2026 ಭಾರತ ತಂಡ ಪ್ರಕಟ

0
11

ನವದೆಹಲಿ: ಬಹುನಿರೀಕ್ಷಿತ ಟಿ20 ವಿಶ್ವಕಪ್‌ 2026ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 15 ಸದಸ್ಯರ ಭಾರತ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ತಂಡವನ್ನು ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಅನುಭವಿ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಈ ವಿಶ್ವಕಪ್ ತಂಡದಲ್ಲಿ ಗಮನಸೆಳೆಯುವ ಬೆಳವಣಿಗೆಯಾಗಿ, ಯುವ ಆಟಗಾರ ಶುಭ್‌ಮನ್ ಗಿಲ್ ಅವರನ್ನು ಈ ಬಾರಿ ತಂಡದಿಂದ ಹೊರಗಿಡಲಾಗಿದೆ. ಇತ್ತ ಅನುಭವ ಹಾಗೂ ಯುವ ಪ್ರತಿಭೆಗಳ ಸಮತೋಲನದೊಂದಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಕ್ರಿಕೆಟ್ ವಲಯ ವಿಶ್ಲೇಷಿಸಿದೆ.

ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

ಫೆಬ್ರವರಿ 7ರಿಂದ ಭಾರತದ ಅಭಿಯಾನ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ತನ್ನ ಅಭಿಯಾನವನ್ನು ಫೆಬ್ರವರಿ 7ರಂದು ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (USA) ತಂಡವನ್ನು ಎದುರಿಸಲಿದೆ. ಬಳಿಕ ಫೆಬ್ರವರಿ 15ರಂದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ–ಪಾಕಿಸ್ತಾನ್ ಪಂದ್ಯ ನಡೆಯಲಿದೆ.

ಈ ಹೈವೋಲ್ಟೇಜ್ ಪಂದ್ಯಕ್ಕೆ ಕೊಲೊಂಬೊದ ಆರ್. ಪ್ರೇಮದಾಸ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯವು ಟೂರ್ನಿಯ ಅತ್ಯಂತ ಆಕರ್ಷಕ ಪಂದ್ಯಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.

ಸಮತೋಲನದ ತಂಡ: ಸೂರ್ಯಕುಮಾರ್ ಯಾದವ್ ನಾಯಕತ್ವದಡಿಯಲ್ಲಿ, ಬಲಿಷ್ಠ ಬ್ಯಾಟಿಂಗ್ ಸಾಲು, ವೇಗ ಹಾಗೂ ಸ್ಪಿನ್ ಮಿಶ್ರಿತ ಬೌಲಿಂಗ್ ದಾಳಿ ಮತ್ತು ವಿಶ್ವಾಸಾರ್ಹ ಆಲ್‌ರೌಂಡರ್‌ಗಳನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಲಾಗಿದೆ. ಅನುಭವಿಗಳಾದ ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಜೊತೆಗೇ ರಿಂಕು ಸಿಂಗ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮುಂತಾದ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಟಿ20 ವಿಶ್ವಕಪ್‌ 2026ಕ್ಕೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ)

ಅಕ್ಷರ್ ಪಟೇಲ್ (ಉಪನಾಯಕ)

ಅಭಿಷೇಕ್ ಶರ್ಮಾ

ತಿಲಕ್ ವರ್ಮಾ

ಹಾರ್ದಿಕ್ ಪಾಂಡ್ಯ

ಶಿವಂ ದುಬೆ

ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)

ಜಸ್‌ಪ್ರೀತ್ ಬುಮ್ರಾ

ಅರ್ಷದೀಪ್ ಸಿಂಗ್

ವರುಣ್ ಚಕ್ರವರ್ತಿ

ಹರ್ಷಿತ್ ರಾಣಾ

ವಾಷಿಂಗ್ಟನ್ ಸುಂದರ್

ಕುಲ್ದೀಪ್ ಯಾದವ್

ಇಶಾನ್ ಕಿಶನ್