ಏಪ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡ ಪ್ರಕಟ

0
47

ಮುಂಬೈ: ಏಪ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಹದಿನೈದು ಜನ ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಸೆಪ್ಟೆಂಬರ್ 9ರಿಂದ ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾ ಕಪ್​ನಲ್ಲಿ ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಗ್ರುಪ್ ʼಎʼ ನಲ್ಲಿ ಭಾರತ, ಪಾಕಿಸ್ತಾನ್, ಯುಎಇ, ಒಮಾನ್ ತಂಡಗಳು ಕಣಕ್ಕಿಳಿದರೆ, ಗ್ರುಪ್‌ ʼಬಿʼ ನಲ್ಲಿ ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್ ಹಾಗೂ ಹಾಂಗ್​ಕಾಂಗ್ ತಂಡಗಳು ಕಣಕ್ಕಿಳಿಯಲಿವೆ.

ಒಟ್ಟು 8 ತಂಡಗಳ ಪೈಕಿ ಎರಡು ಗುಂಪುಗಳಲ್ಲಿ ತಲಾ ಎರಡು ತಂಡಗಳಂತೆ ನಾಲ್ಕು ತಂಡಗಳು ಸೂಪರ್-4ರ ಹಂತಕ್ಕೆ ಹೋಗಲಿವೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.

ಅಯ್ಯರ್, ಜೈಸ್ವಾಲ್‌ಗಿಲ್ಲ ಸ್ಥಾನ: ಸದ್ಯ ಪ್ರಕಟಗೊಂಡಿರುವ ತಂಡದಲ್ಲಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದು, ಆರಂಭಿಕರಾಗಿ ಗಿಲ್ ಕೂಡ ಇದ್ದಾರೆ. ಹಾಗಾಗಿ, ಈಗ ಗಿಲ್ ಸ್ಥಾನದಲ್ಲಿ ಆಡುವ ಹನ್ನೊಂದರಲ್ಲಿ ಇರುವುದು ಖಚಿತವಾಗಿದ್ದು, ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಇನ್ನೊಂದೆಡೆ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ಏಷ್ಯಾಕಪ್ ಭಾಗ್ಯ ಸದ್ಯಕ್ಕಿಲ್ಲ. ಕಳೆದ ಐಪಿಎಲ್‌ನಲ್ಲಿ ಸ್ಯಾಮ್ಸನ್, ಅಭಿಷೇಕ್ ಅವರಿಗಿಂತ ಹೆಚ್ಚು ರನ್ ಗಳಿಸಿಯೂ ಜೈಸ್ವಾಲ್‌ಗೆ ಸ್ಥಾನ ನೀಡಿಲ್ಲ.

ರಾಹುಲ್ ಆಸಗೆ ತಣ್ಣೀರು: ಏಷ್ಯಾಕಪ್ ತಂಡದಲ್ಲಿ ಕನ್ನಡಿಗರೂ ಒಬ್ಬರೂ ಕಾಣಿಸಿಕೊಂಡಿಲ್ಲ. ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕೆ.ಎಲ್. ರಾಹುಲ್‌ಗೆ ಟಿ20 ತಂಡದಲ್ಲಿ ಜಾಗ ನೀಡಿಲ್ಲ. ಇದರಿಂದ ಮುಂಬರುವ ಟಿ20 ವಿಶ್ವಕಪ್ ಆಡುವ ರಾಹುಲ್ ಕನಸು ಕಮರಿ ಹೋದಂತೆ.

ಇಂಡೋ-ಪಾಕ್ ಪಂದ್ಯದ ಬಗ್ಗೆ ಪ್ರಶ್ನೆ ಕೇಳಲು ನಿಷಿದ್ಧ: ಏಷ್ಯಾಕಪ್ ತಂಡ ಪ್ರಕಟಣೆಗಾಗಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕೇವಲ ತಂಡದ ಆಯ್ಕೆ ಬಗ್ಗೆಯಷ್ಟೇ ಕೇಳಲು ಬಿಸಿಸಿಐ ಅನುಮತಿ ನೀಡಿತ್ತು. ಉಳಿದಂತೆ ಇಂಡೋ-ಪಾಕ್ ಏಷ್ಯಾಕಪ್ ಪಂದ್ಯದ ಬಗ್ಗೆ ಪತ್ರಕರ್ತರು ಪ್ರಶ್ನಿಸಲು ಬಿಸಿಸಿಐ ನಿಷೇಧಿಸಿತ್ತು. ಇದರಿಂದ ಪತ್ರಕರ್ತರು ಗೊಂದಲಕ್ಕೀಡಾದರು.

Previous articleನಿರಂತರ ಮಳೆಗೆ ಕಂಗಾಲಾದ ಹುಬ್ಬಳ್ಳಿ-ಧಾರವಾಡ ನಗರದ ಜನ
Next articleಬೆಂಗಳೂರು: ಕೆಲಸ ಖಾಲಿ ಇದೆ, ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 15 ಕೊನೆ ದಿನ

LEAVE A REPLY

Please enter your comment!
Please enter your name here