Home Advertisement
Home ಕ್ರೀಡೆ ICC T20 ರ‍್ಯಾಂಕಿಂಗ್‌: ಅಭಿಷೇಕ್‌ ನಂ.1, ಇಶಾನ್‌ ನಂ.2

ICC T20 ರ‍್ಯಾಂಕಿಂಗ್‌: ಅಭಿಷೇಕ್‌ ನಂ.1, ಇಶಾನ್‌ ನಂ.2

0
62

ನವದೆಹಲಿ: ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಬಿಡುಗಡೆಗೊಂಡ ಐಸಿಸಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಟಿ20 ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಇಶಾನ್‌ ಕಿಶನ್‌ ಎರಡನೇ ಸ್ಥಾನವನ್ನು ಪಡೆದಿದ್ದು, ಅಗ್ರ ಸ್ಥಾನವನ್ನು ಅಭಿಷೇಕ್‌ ಶರ್ಮಾ ಕಾಯ್ದುಕೊಂಡಿದ್ದಾರೆ.

ಇನ್ನು ಭಾರತದ ಸ್ಪಿನ್ನರ್‌ ವರುಣ್ ಚಕ್ರವರ್ತಿ ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದು, ಅಫ್ಘಾನಿಸ್ತಾನ ತಂಡದ ಸ್ಪಿನ್ನರ್‌ ರಶೀದ್‌ ಖಾನ್‌ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವರುಣ್‌ ಅತಿ ಹೆಚ್ಚು ವಿಕೆಟ್‌ಗಳನ್ನು ಉರುಳಿಸಿ ಜಸ್ಪ್ರಿತ್‌ ಬೂಮ್ರಾ ಅವರೊಂದಿಗೆ ಟೂರ್ನಿಯಲ್ಲಿ ಅಗ್ರಸ್ಥಾನ ಹಂಚಿಕೊಂಡಿದ್ದರು. ಐಸಿಸಿ ಟಿ20ಐ ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಇನ್ನು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಇಶಾನ್‌ ಕಿಶಾನ್‌ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಎರಡು ಸ್ಥಾನ ಬಡ್ತಿ ಪಡೆದಿದ್ದು, ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅಭಿಷೇಕ ಶರ್ಮಾ ಟೂರ್ನಿಯ ಎರಡು ಪಂದ್ಯಗಳಲ್ಲಿ ಮಾತ್ರ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. ಉಳಿದ ಪಂದ್ಯಗಳಲ್ಲಿ ವಿಫಲರಾಗಿದ್ದ ಅಭಿಷೇಕ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಬೌಲರ್‌ಗಳಿಗೆ ಬೆವರಿಳಿಸಿ ಅಗ್ರ ಸ್ಥಾನ ಗಟ್ಟಿಮಾಡಿಕೊಂಡಿದ್ದಾರೆ.

ಟಾಪ್‌ 10ರಲ್ಲಿ ನಾಲ್ವರು ಭಾರತೀಯರು: ಮೊದಲ ಎರಡು ಸ್ಥಾನಗಳನ್ನು ಅಭಿಷೇಕ ಮತ್ತು ಇಶಾನ್‌ ಪಡೆದುಕೊಂಡಿದ್ದರೆ, ಒಂದು ಸ್ಥಾನ ಕುಸಿತಗೊಂಡು ಏಳನೇ ಸ್ಥಾನದಲ್ಲಿ ತಿಲಕ ವರ್ಮಾ ಮತ್ತು ಎರಡು ಸ್ಥಾನ ಕುಸಿತ ಕಂಡಿರುವ ಸೂರ್ಯಕುಮಾರ ಯಾದವ್‌ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ ವಿಶ್ವಕಪ್‌ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್‌ 18 ಸ್ಥಾನ ಜಿಗಿತದೊಂದಿಗೆ 22ನೇ ರ‍್ಯಾಂಕ್‌ ಪಡೆದಿದ್ದಾರೆ.