Home ಕ್ರೀಡೆ ಐಪಿಎಲ್ ಹರಾಜಿನ ಇತಿಹಾಸದಲ್ಲೇ ದಾಖಲೆ ಬರೆದ 20ರ ಯುವಕ

ಐಪಿಎಲ್ ಹರಾಜಿನ ಇತಿಹಾಸದಲ್ಲೇ ದಾಖಲೆ ಬರೆದ 20ರ ಯುವಕ

0
22

ಐಪಿಎಲ್ ಹರಾಜಿನ ಇತಿಹಾಸದಲ್ಲೇ ಅನ್​ಕ್ಯಾಪ್ಡ್​ ಆಟಗಾರನೊಬ್ಬ ಅತಿ ಹೆಚ್ಚು ಬೆಲೆಗೆ ಮಾರಾಟವಾದ ದಾಖಲೆ ಈ ಬಾರಿಯ ಆಕ್ಷನ್‌ನಲ್ಲಿ ನಡೆದಿದೆ. 20 ವರ್ಷದ ಬಡಕುಟುಂಬದ ಯುವಕ ಈ ದಾಖಲೆಗೆ ಪಾತ್ರನಾಗಿದ್ದಾನೆ.

ಉತ್ತರ ಪ್ರದೇಶದ ಆಲ್​ರೌಂಡರ್​​ ಪ್ರಶಾಂತ್ ವೀರ್ ಎಂಬ 20 ವಯಸ್ಸಿನ ಯುವಕ ಈ ವರ್ಷದ ಐಪಿಎಲ್‌ ಹರಾಜಿನಲ್ಲಿ ಗರಿಷ್ಠ ಬೆಲೆ ಪಡೆದ ಭಾರತೀಯ ಎನಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಅಮೇಥಿಯವರಾದ ಪ್ರಶಾಂತ್ ವೀರ್ ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್‌ ಆಸಕ್ತಿ ಹೊಂದಿದ್ದರು. ಅವರ ತಂದೆ ರಾಮೇಂದ್ರ ತ್ರಿಪಾಠಿ ಶಾಲಾ ಶಿಕ್ಷಕರಾಗಿದ್ದಾರೆ. ತಂದೆ ಸಂಬಳದಲ್ಲಿ ಮನೆ ನಡೆಸಲಷ್ಟೇ ಸಾಧ್ಯವಾಗಿತ್ತು. ಹೀಗಿದ್ದಾಗ ಅಜ್ಜನ ಪಿಂಚಣಿ ಹಣ ಪ್ರಶಾಂತ್‌ ಆಸೆ ಈಡೇರಲು ನೆರವಾಗಿದೆ.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ: ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

ಪ್ರತಿದಿನ ಸೈಕಲ್ ಹತ್ತಿಕೊಂಡು ಕ್ರೀಡಾಂಗಣಕ್ಕೆ ತೆರಳುತ್ತಿದ್ದ ಪ್ರಶಾಂತ್‌ 10 ರಿಂದ 12 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದರು. ಬಳಿಕ ಅವರಿಗೆ ಉತ್ತರ ಪ್ರದೇಶದ ಹಿರಿಯ ತಂಡದಲ್ಲಿ ಸಿಕ್ಕ ಅವಕಾಶ ಮತ್ತು ಸೈಯದ್ ಮಸ್ತಕ್ ಅಲಿ ಟ್ರೋಫಿಯಲ್ಲಿ ತೋರಿದ ಉತ್ತಮ ಪ್ರದರ್ಶನ ಅವರನ್ನು ಗುರುತಿಸುವಂತೆ ಮಾಡಿತು.

ಕೇವಲ 30 ಲಕ್ಷ ರೂ. ಮೂಲ ಬೆಲೆಯಲ್ಲಿ ಹರಾಜಿಗೆ ಇದ್ದ ಪ್ರಶಾಂತ್‌ ಅವರ ಖರೀದಿಗೆ ಮುಂದಾಗಿದ್ದು ಲಖನೌ ಸೂಪರ್ ಜೈಂಟ್ಸ್. ಆದರೆ ಪ್ರಶಾಂತ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲೇಬೇಕೆಂದು ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಭಾರೀ ಪೈಪೋಟಿ ನಡೆಯಿತು.

ಪ್ರಶಾಂತ್‌ ಖರೀದಿಗೆ 30 ಲಕ್ಷದಿಂದ ಆರಂಭಗೊಂಡ ಬಿಡ್‌ ಕೊನೆಗೆ 14 ಕೋಟಿ ವರೆಗೆ ಸನ್ ರೈಸರ್ಸ್ ಹೈದರಾಬಾದ್ ಪ್ರಯತ್ನ ಮಾಡಿತು. ಅಂತಿಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ 14.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು.

ಚೆನ್ನೈ ತಂಡ ಸೇರುವ ಆಸೆ: ಪ್ರಶಾಂತ್ ವೀರ್ ಚೆನ್ನೈ ತಂಡದಲ್ಲಿ ಆಡಬೇಕೆಂಬ ಆಸೆಯನ್ನು ಹೊಂದಿದ್ದು. ಹರಾಜು ಆರಂಭಕ್ಕೂ ಮುನ್ನವೇ ದೇವರಲ್ಲಿ ಪ್ರಾರ್ಥಿಸುತ್ತಿದ್ದರಂತೆ. “ನಾನು ಎಂ.ಎಸ್. ಧೋನಿ ನೇತೃತ್ವದಲ್ಲಿ ಆಡುವ ಕನಸು ಕಂಡಿದ್ದೆ. ದೇವರು ನನ್ನ ಬಯಕೆಯನ್ನು ಈಡೇರಿಸಿದ್ದಾನೆ,” ಎಂದು ಪ್ರಶಾಂತ್‌ ಸಂತಸ ವ್ಯಕ್ತಪಡಿಸಿದ್ದಾರೆ.